ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮
ಹೂಬಿಸಿಲು

“ಶ್ಯಾನು ಚುನರಿಯಾ ದೇ ದೇ ಮೊರಿ, ಬಾರಬಾರ ಕರ ಜೋಡತ ತುಮಸೆ|| ತನು ಮೋರಿ ರಾಸಲಾಗೆ ದೇಖೋ ಮುರಾರಿ ||"

ಹಾಡಿನ ಪ್ರತಿಧ್ವನಿಯು ಒಳಗಿದ್ದ ಅವನ ಅಬಚಿಯ ಕಿವಿ, ಯನ್ನು ನೆಟ್ಟಗೆ ಮಾಡಿತು. ಹಿಲಬಾಗಿಲಿಗೆ ಬಂದು ಮೆಲ್ಲಗೆ ಇಣಿಕಿದಳು, ಎಲ್ಲರನ್ನೂ ಎಬ್ಬಿಸಹೋದಳು; “ ನೋಡ ನಡಿಗೆ ನಮ್ಮನ್ನಾ, ಸುಮ್ಮನ ಅಂವಗ ಹೊಡಿಯೋದು, ಬೈಯೋದು ಮಾಡ್ತೀರಿ ಎಲ್ಲಾರೂ, ತಾ ಕೃಷ್ಣಾ ಗ್ಯಾನ, ಅವರೆಲ್ಲಾ ಇವನ ಗೋ ಪ್ಯಾರಾಗಣ್ಯರ, ಏನ ಛಂದಾಗಿ ಶೀರಿ ಸೆಳದ ಆಟಾ ಆಡ್ಡಿಕಾರ ಇಷ್ಟೆಲ್ಲಾ ಇಂವಾ ಯಾವಾಗ ಕಲತಿರತಾನೋ, ಇವರೆಲ್ಲಾ ಯಾವಾಗ ಕಲ್ಲ ತಯಾರಾಗಿರತಾರೋ ? ” ಅಷ್ಟರಲ್ಲಿ ಹೆಗಲಮೇಲೆ ಗಳೆಯನ್ನು ಹೊತ್ತು ಕೊಂಡು ಹೊಲದಿಂದೊಬ್ಬ ಮಾವ ಬಂದನು. "ಏ, ಗೋವ್ಯಾ, ಇಳಿತಿದ್ಯೋ ಏನ ಕಲ್ಲ ಸೆಳೀಲ್ಲೊ ? " ಕೈಯ್ಯ ಲೊಂದು ಕಲ್ಲನ್ನೆತ್ತಿದನು. ಗೋವಿಂದ ಟಣ್ಣನೆ ನುಗ್ಗಿ ಯ ಗಿಡಕ್ಕೆ ಹಾರಿದ ಟೊಂಗೆ ಬಾಗಿತ್ತು, ಅದನ್ನೆ ಜೀಕಿಕೊಂಡು ಮುಂದಕ್ಕೆ ಜೋಲಿಯನ್ನು ಹೊಡೆದುಕೊಂಡು, ಚೊಗಚಿಯ ಟೊಂಗೆ ಹಿಡಿದನು. ಅದು ಲಟ್ಟನೆ ಮುರಿಯಿತು. ಕೆಳಗೆ ಕಟ್ಟಿಗೆ ಒಡೆದು ತುಂಡು ಒಟ್ಟಿ- ದ್ದರು. ವಿಶೇಷವೇನೂ ಆಗಲಿಲ್ಲ ಆದರೂ ಸ್ವಲ್ಪ ನೋವು ಆಯಿತು. ಅಷ್ಟರಲ್ಲಿ ನಿದ್ರೆ ಮುಗಿಸಿಕೊಂಡು ಮುಖ ತೊಳೆಯಲೆಂದು ಹಿತ್ತಿಲಿಗೆ ಬಂದಿದ್ದ ಅವನ ಭಾವಯ್ಯ ನೋಡಿ, "ಏನಂತಾನ ನಮ್ಮ 'ವೂಂಡೆಡ್ ಸೋಲ್ಟರ!' ” ಎಂದನು.

ಅಂತೂ ಹೀಗೆಯೇ ಚಿನ್ನಾಟವಾಡುತ್ತ ಕಾಲಹರಣ ಮಾಡು- ತಿರುವಾಗ ಗೋವಿಂದನು ಇಂಗ್ಲೀಷು ಎರಡನೇ ಇಯತ್ತೆಗೆ ಬಂದನು. ಬರುಬರುತ್ತ ಆಟವು ಕಡಿಮೆಯಾಯಿತು. ಒಂದು ದಿವಸ ಟಬ್ಬಿನಲ್ಲಿ ಎಲ್ಲ ಜೊತೆಗಾತಿಯರನ್ನು ಕೂಡಿಸಿಕೊಂಡು, ದು ನದೀ, ಹಾ, ನದಿಯೋಳಗ ನಾ ಹುಟ್ಟು ನಡಸೈನಿ ಸುಮ್ಮನ ಕೂಡ್ರಿ” ಎನ್ನುತ್ತ