ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾಶಿವರಾತ್ರಿ

೨೯

ದಂಟಿನಿಂದ ಹುಟ್ಟು ನಡೆಸಹತ್ತಿದನು. ಅಷ್ಟರಲ್ಲಿ ಎಲ್ಲ ಹುಡುಗಿಯರ ಕಾಲಿಗೇನೋ? ಗುಳುಗುಳಂದು, ಮೆತಮೆತ್ತಗೆ ಅತ್ತಿತ್ತ ಏನೋ ಓಡಾಡುತ್ತಿರುವಂತೆ ಹತ್ತಿತು. ಕಡೆಗೆ ವಚ್ಚಿಗೆ ಅದು ಹಾವಿನಂತೆ ಕಂಡಿತು. "ಅಯ್ಯಯ್ಯೋ, ಗೊವಿಂದು, ಹಾವು ! ” ಎಲ್ಲರೂ ಬೆದರಿದರು. ಅಲ್ಲಿಯೆ: ನೀರಲ್ಲಿ ಕುಣಿದಾಡಹತ್ತಿದರು. ಇವನು ಬಿದ್ದು ಬಿದ್ದು ನಗಹತ್ತಿದ. * ನಾವು ಒಲ್ಲೆನೆಪ್ಪಾ, ಟಬ್ಬಿನೊಳಗಿಂದ ನಮಗ ಹೊರಗೆ ಇಳಿಸು ”” ಎಂದು ಅಂಗಲಾಚ ತೊಡಗಿದರು, “ ಏ, ಟಪ್ಪೆಲ್ಲಿಂದ ತಂದ್ರೆ, ಇದು ಡೋಣಿ, ನದೀಯೊಳಗ ಸಾಗೇದ ದಂಡೆರ ಬರ್ಲಿ ಸುಮ್ಮನಿರಿ! ನದಿಯೊಳಗ ಮತ್ತ ಹಾವು ಸಾವು, ಮೊಸಳಿ ಪಸಳೀ ಇರೂವನವ್ವಾ, ಮತ್ತು ಹೀಂಗೆಲ್ಲಾ ಹೆದರಿದ್ರಹಾಂಗ ನೋಡು....” ಮತ್ತೆ ನಗಹತ್ತಿದ. ಆಗ ಹುಡುಗಿಯರು ಚಿಕ ಹತ್ತಿದರು. ಆಗ ಮನೆಯ ಜನರು ಬಂದು ಸಿಟ್ಟು ಮಾಡಬಹು- ದೆಂದು ಬಗೆದು, ನಾ ಎಲ್ಲಾ ನೊಡ್ತಿನಿ ಸುಮ್ಮನಿರಿ.... ಎನ್ನುತ್ತ ಕೊಳಲು ಊದಹತ್ತಿದ-ತನ್ನ ಕಾಲಿನಿಂದೇನೊ ಮೇಲ- ಕೈ, ಗಪ್ಪನೆ ಕೈಯಲ್ಲಿ ಹಿಡಿದು, ಟಬ್ಬಿನ ಹೊರಗೆಸೆದ. ಎಲ್ಲರೂ ನೋಡಿ, “ ಅಯ್ಯಯ್ಯ, ಇದು ರಬ್ಬರಿನ ಹಾಂವಾ....” ಎಂದು ಬೆರಗಾದರು.

ಕಾಲವು ಗತಿಸಿದಂತೆ ಹೆಣ್ಣು ಮಕ್ಕಳಿಗೂ ಶಾಲೆಯ ಬಂಧನವು ಸುತ್ತಿತ್ತು. ಇವನಿಗೂ ಅವರಿಗೂ ಕೂಡಿಯೇ ಆಟಕ್ಕೆ ಬಿಡುವಿಲ್ಲ. ಆದಿತ್ಯವಾರಕ್ಕೊಮ್ಮೆಯಾದರೂ ಅವರೊಡನೆ ಆಡಬೇಕೆಂದರೆ ಗೆ ಯರು ಬಂದು “ ಗೋವಿಂದಾ ಮ್ಯಾಚಿಗೆ ಬಾ, ಕೇರಂ ಆಡೋಣ ನಡೆ....” ಹೀಗೆಂದು ಎಳೆದೊಯ್ಯಬೇಕು. ಏನೋ ತಿಂಗಳಿಗೊಮ್ಮೆ ಸಖಿಯರೊಡನೆ ಆಡ ಹೋದರೆ ಅವರ ತಾಯಿಯರೆಲ್ಲ ನಮ್ಮ ಮಕ್ಕಳನ್ನೆಲ್ಲ ಓದಬಿಡಿಸಿ ಆಟಕ್ಕೆ ಹಚ್ಚಿ ಧಡ್ಡಿ ಯರನ್ನ ಮಾಡ್ತಾನ ..." ಎಂದು ಆಡಿಕೊಳ್ಳಹತ್ತಿದರು; ಆದರ ಮೂಲಕ ಮೇಲಿಂದ ಮೇಲೆ ಅವರಿಗೆಲ್ಲಾ ತಾಯಿಯ ಏಟು ಬೀಳತೊಡಗಿದವು.