ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಹೂಬಿಸಿಲು

ಹೀಗಾಗಿ ಅವನೂ ಮನೆಯೊಳಗೆ ಇರಲಿಕ್ಕೆ ಬೇಸತ್ತು ಮುಂಜಾನೆ ಅಭ್ಯಾಸ, ಗರಡಿ ಸಾಧಕ ಮಾಡಬೆಕು, ಮಧ್ಯಾನ್ಹ ಶಾಲೆ, ಸಾಯಂಕಾಲಕ್ಕೆ ಊಟಮಾಡಿ, ಮತ್ತೆ ಆಡಲಿಕ್ಕೆ ಬೈಲಿಗಾಗಲಿ, ಪೇಟೆಗಾಗಲಿ, ಅಡ್ಡಾಡಲಿಕ್ಕಾಗಲಿ ಹೋಗಬೇಕು. ಬಗೆಬಗೆಯ ಆಸನಗಳನ್ನೂ ಹಾಕಲಿಕ್ಕೆ ಕಲಿತನು. ಎಷ್ಟು ವ್ಯಾಯಾಮ ಮಾಡಿದರೂ, ಎಷ್ಟು ಸುಖವಾಗಿ ಊಟಮಾಡಿದರೂ ಮನೆಯವರ ಕಾಟಕ್ಕಾಗಿ ಹೊಟ್ಟೆಗೆ ಅನ್ನವು ಸುಖವಾಗಿ ಹದಾಯಿತು. ಅಂತೂ ಅವನು ಇಂಗ್ಲಿಷು ಮೂರನೆ ಇಯತ್ತೆಗೆ ಹೋದನು.

ಒಂದು ದಿವಸ ಗೆಳೆಯರೊಡನೆ ಚಹ ಕುಡಿಯುತ್ತ ಕುಳಿತಿದ್ದನು. ಗೆಳೆಯರು ಆಗ್ರಹದಿಂದ ಗೋವಿಂದನ ಕಡೆಯಿಂದ ಆಸನಗಳನ್ನು ಹಾಕಹಚ್ಚಿದರು. "ಶಾಭಾಸ ” ಎಂ ಅವರು ಅನ್ನುತ್ತಿದ್ದುದನ್ನು ನೋಡಿ, “ ಬಿಡ್ರ್ಯೊ, ಇದನ್ನೆನ ಹೇಳ್ತೀರಿ ನಮ್ಮನಿ ಜನರೆಲ್ಲಾ, ನನಗೆ ಗೋವಿಂದರಾವ ಟೀಂಬೆ, ಎಡ್ಡಿಪೋಲೋ, ವೂಂಡೆಡ್ ಸೊಲ್ವರ (Wounded Soldier) ಅಂತ ಹೀಗೆಷ್ಟೊ ಪದವಿಗಳನ್ನ ಕೊಟ್ಟಾರ....”

ಅಷ್ಟರಲ್ಲಿ ವೂಂಡೆಡ್ ಸೊಲ್ವರ ಎಂಬ ಬಿರುದಾವಳಿಯನ್ನು ಗೊವಿಂದನಿಗೆ ಕೊಟ್ಟ ಆತನ ಭಾವ ಸಹಜವಾಗಿ ಅಲ್ಲಿಗೆ ಬಂದು ಗೋವಿಂದನ ಮಾತನ್ನು ಕೇಳಿದನು. “ಗೋವಿಂದಾ, ನನಗ ಹ್ಯಾಂಗೂ ಈ ಟರ್ಮಿ ಗೆ ಬ್ಯಾರೆ ಊರಿಗೆ ವರ್ಗಾಗೇದ, ನನ್ನ ಸಂಗತಿನ ನಡಿಯೊ- ಇಲ್ಲೇ ಜನದ ಸಲುವಾಗಿ ದನದ ಸಲುವಾಗೀನೊ ನಿನ್ನ ಅಭ್ಯಾಸ ಆಗೂದುಲ್ಲಾ ....” ಎಂದನು.

ಆಗ ಗೋವಿಂದನು ಯಾರಾದರೂ ಅಂದಿನಿಂದ ತನ್ನನ್ನು ಅಂದರೆ, ಆಡಿದರೆ “ ಇನ್ನೇನು, ನಾ ಇಲ್ಲೆ ಇನ್ನೊಂದ ವಾರದ ತನಕಾ ಭಾಳಾದರ ಇರಾಂವಾ ” ಎಂದು ನಗೆಯಾಡಹತ್ತಿದ, ತನ್ನ ಜೊತೆಗಾತಿಯರಿಗೆಲ್ಲ ಆ೦ಜಿಕೆಹಣಕಹತ್ತಿದ.