ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾಶಿವರಾತ್ರಿ

೩೧

ಮರುವಾರ ಭಾವನೊಡನೆ ಹೋಗಿಬಿಟ್ಟನು. ಮನೆಯಲ್ಲಿ ಅವನ ಅಕ್ಕ, ಭಾವ, ಪುಟ್ಟ ಮಾಲಿಯೊಬ್ಬಳು-ಗೋವಿಂದನ ಪ್ರೀತಿಯ ಆಟದ ಗೆಳತಿಯು, ಅಲ್ಲಿಗೆ ಹೋದ ಬಳಿಕ ಅವನ ಆಯುಷ್ಯವೇ ಬೇರೆ ರೀತಿಯದಾಯಿತು. ಮುಂಜಾನೆ ಮಾಲಿಯೊಡನೆ ತಿರುಗಾಡಿ ಬರುವದು, ಚಹಾ ಫಲಾಹಾರ ತಿರಿಸುವಷ್ಟರಲ್ಲಿ, ಮನೆಯಲ್ಲಿ ಓದು ಹೇಳುವ ಮಾಸ್ತರರು ಬರುತ್ತಿದ್ದರು. ಬಳಿಕ ಸ್ನಾನ - ಊಟ ತೀರಿಸಿ ಶಾಲೆಗೆ ಪ್ರಯಾಣ. ಸಾಯಂಕಾಲಕ್ಕೆ ಫಲಾಹಾರ ತೀರಿಸಿ, ಬೇಕಾದರೆ ಕಾಲ್ನಡಿಗೆಯಿಂದ, ಬೇಕಾದರೆ ಗೆಳೆಯರೊಡನೆ ಸುಯಕಲ್ಲ ಮೇಲೆ ತಿರುಗಾಟ. ಬೇಸರವಾದರೆ ಕೆಮ್ಮು ಮೊದಲು ಆತನನ್ನು ಅವನ ತಾಯಿಯ ಮನೆಯಲ್ಲಿ ನೋಡಿದ ಅವನ ಋಣಾನುಬಂಧಿಕರೊಬ್ಬರು, "ಏನೋ, ಗೋವಿಂದಾ, ಏನು ಅಪ್-ಟು-ಡೇಟ ಫ್ಯಾಶನ್ನಿಗಿಳಿದು ಬಿಟ್ಟಿಯಲ್ಲಾ ಇಷ್ಟರೊಳಗ-? ” ಎಂದು ಕೇಳಿ ಹೋದರು.

ಗೋವಿಂದನಿಗ ಒಳ್ಳೆಯ ಸೀರಿಯಸ್ಸು ಕಾಣುವನು. ಅಭ್ಯಾಸದಿಂದಲೂ, ಅಚ್ಚುಕಟ್ಟುತನ-ನಿಯಮಿತತನಗಳಿ೦ದಲೂ ಅವನ ಮುಖದ ಮೇಲೆ ಒಳ್ಳೆಯ ಕಳೆಯು ಬಂದಿತು. ಕೇವಲ ಹದಿನಾಲ್ಕು ವರುಷದ ಹುಡುಗನಾಗಿದ್ದರೂ, ಇಪ್ಪತ್ತು ವರುಷದವನಂತೆ ಪುಷ್ಟನಾಗಿ ಕಂಡನು. ಮೊದಲೆ? ಬಿಸಾದ-ಕೆಂಪಾದ ಆಳು, ಮತ್ತೇನು ಕೇಳುವದು?

ಮಹಾಶಿವರಾತ್ರಿಯು ಇನ್ನೂ ಎಂಟು ದಿವಸವಿದ್ದಿತು. ಗೋವಿಂದನಿಗೆ ನಡುಗುಜ್ವರಕ್ಕಾರಂಭವಾಯಿತು. ನಾಲ್ಕು ದಿನಗಳಲ್ಲಿ ಎರಡು ಇಂಜೆಕ್ಶನ್ಗಳಾದವು. ಔಷಧ ಉಪಚಾರಗಳಾದವು. ಮರುದಿನ ಅವನ ತಾಯಿಯಿಂದ ಭಾವನಿಗೊಂದು ಪತ್ರವು ಬಂದಿತು-ಶಿವ- ರಾತ್ರಿಯ ಶ್ರೀ ಸೋಮೇಶ್ವರನ ಜಾತ್ರೆಗೆ ಅಕ್ಕ-ತಮ್ಮಂದಿರನ್ನು ಕಳಿಸಬೇಕೆಂದು. ಆಗ ಗೋವಿಂದನು "ಅಕ್ಕಾ, ನಮ್ಮ ಊರಿಗೆ ಹೋಗೂ ಮುಂಚೆ ಈಗಿಂದೀಗ ನನ್ನದೊಂದು ಫೋಟೋ ತೆಗಿಸಿಡs-