ಎಂದನು. ಶಾಲು ಹೊಚ್ಚಿಕೊಂಡು ಮಲಗಿ ಮನೆಗೆ ಬಂದವನೇ
ಹಾಸಿಗೆ ಹಿಡಿದನು. ಆ ಮೇಲೆ ಪ್ರಜ್ಞೆಯಿರುವಾಗಲೇ ಬಾಯಿಗೆ
ಬಂದಂತೆ ಬಡಬಡಿಸಹತ್ತಿದನು: "ಅವ್ವಾ, ಅಲ್ಲೆ ನೋಡು, ಗಾಡಿ
ಮ್ಯಾಗ ಒಬ್ಬ ಕರೇ ಮನಶ್ಯಾ ನಿಂತಾನ, ಆ ಸೋಮೇಶ್ವರನ
ಹೊಂಡ್ದಾಗ ಬಿದ್ದ ಹುಡುಗನ ಜೋಡೀ ನಾನಗೂ ತನ್ನ ಸಂಗತೀ
ಬಾ ಅಂತ ನಿನ್ನೇ ಕರದಾ, ನಾ ಭಾಳ ಹೆದರಿದೆ, ಎಲೆ ಎಲೆ ಕರೇಮನಶ್ಯಾ,
ನಾಮ್ಮನೀ ಒಳಗೆರಡು ನಾಯಿ ಅವ, ನಿನ್ನ ಮ್ಯಾಲೆ
ಛೂ ಬಿಟ್ಟೀನ್ನೋಡು... ಕೈಯೊಳಗ ಆರತೀ ತಂದು, ನಾನಗ್ಯಾಕ
ಬೆಳಗತೀರೋ ? ನಾನ್ನ ಮುಂದ ಗ್ಯಾಸಬತ್ತೀ ಯಾಕ
ಬೆಳಗತೀರೋ ?.........ಏ ಅಕ್ಕಾ, ನಾನ್ನ ಮೇವಿನೊಳಗ ಮಲಗಸ್ತಾರಂತ
ನೋಡ ಇವರು..... "
ಆಗ ತಾಯಿ-ಅಕ್ಕಂದಿರು, "ಅಯ್ಯೋ ನಾನ್ನಪ್ಪಾ, ನಿನಗೇ- ನಾತೂ ...... ರಾಮ, ರಾಮ, ಅನ್ನಪ್ಪಾ, ಹುಶಾರಾಗು....." ಎಂದು ದುಃಖಿಸಿ ಹೇಳಿದರು. ಆಗವನು, "ನಾನಗೇನಾಗೇದ್ರೇ, ಕರೇ ಮನಶ್ಯಾನ ನೋಡು, ಆಕಾಶ-ಭೂಮಿಗೆ ಒಂದಾಗಿ ನಿಂತಾನ, ಕಿರೀಟಾ ಹಾಕ್ಯಾನ ನಾನಗ ಬಾ ಅಂತ ಜೋರು ಮಾಡ್ತಾನ...... ಲೇ ಕಳ್ಳಾ, ನಾನ್ನ ಪರೀಕ್ಷಾ ಹತ್ರ ಬಂದದೋ, ನಾ ಈ ಸಾರೆ ಅಭ್ಯಾಸಾ ಭಾಳ ಛಲೋ ಮಾಡೇನೀ....... ಏನಂತೀ ನೀ ಏನ ಮಾಡಿದ್ರೂ ಕೇಳಾಂವಲ್ಲ !....... ಬಿಡಪಾ ಹಾಂಗಾದ್ರ, ಮುಂದಿನ ಸೋಮವಾರ ಖರೇ ಅಂದ್ರ ಬರ್ತೇನಿ, ನನ್ನ ವಚನಾ ತಗೋ......"
ಹೀಗೆಯೇ ನಡುಗುತ್ತ ಪ್ರಜ್ಞೆಯಿಲ್ಲದೆ ಮರುದಿನ ಸೋಮವಾರ ಸರಿರಾತ್ರಿಯ ವರೆಗೆ, ಅವನ ಬಳಗವು ಕಣ್ಣೀರೊಡನೆ ಹಾಕಿದ ತೀರ್ಥ-ಔಷಧಗಳನ್ನು ಕುಡಿಯುತ್ತ ಬಿದ್ದಿದ್ದನು. ರಾತ್ರಿಯ ಒಂದರ ಸುಮಾರಿಗೆ ಆ ನಿರ್ದಯ ಕರಾಳರೂಪನು ಅವನ ಪ್ರಾಣವನ್ನು ಹೀರಿಯೊಯ್ದನು. ಬಳಗವೆಲ್ಲವೂ ಹೌಹಾರಿ ಹಲುಬಿತು...ಬೋರಾಡಿತು....