ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಾಜೀಬಾನ ಬ್ಯಾಂಕು
೩೫

ಎಂದರೆ ದಾಜೀಬಾನ ಮಂಗಳವಾರದ ಪಗಾರವನ್ನು ಪೂರೈಸುವದೂ ನನಗೊಪ್ಪಿದ್ದಿತು. ಈ ಕೆಲಸವು ನನ್ನಡೆಗೆ ಬಂದು ಈಗ ಏಳೆಂಟು ವರುಷಗಳಾಗಿರಬೇಕು.

ಮಾವನವರಿದ್ದಾಗ ನಾಲ್ಕಾರು ಬಾರಿ ದಾಜೀಬಾನ ತಾಯಿ- ಹೆಂಡತಿಯರು ಬಂದು-

“ರಾಯರ, ದಾಜೀ ಮನಿಯೊಳಗ ಖರ್ಚಿಗೇನು ಕೊಡೂದಿಲ್ರೀ. ಒಂದು ವಾರಾ ಜ್ವಾಳಾ ತರತಾನಿ, ಮರುವಾರಾ ಅಕ್ಕಿ ತರತಾನ್ರೀ. ಮತ್ತ ಜ್ವಾಳಾ ಯಾಕ ತಲ್ಲಾ ಅಂದ್ರ, 'ಹ್ವಾದ ವಾರ ತಂದಿದ್ದೆಲ್ಲಾ!” ಅಂತಾಯಪ್ಪಾ, ತಿಂದದ್ದ ಅಂವಗ ನೆಂಪು ಇರೂದಿಲ್ರೀ...... ಅಟ ಬುದ್ಧಿ ಹೇಳ್ರೀ ರಾವಸಾಬ್ರ.

"ಏನೊ ದಾಜೀಬಾ ? ”

"ಸಾಹೇಬ ?"

"ಪಗಾರನಾತೂ ?"

ಕಡ್ಡಿ ಪೆಟಗಿ ಚುಟ್ಟಾದಾಂವಗ ಒಂದೆಂಟಾಣೆ ಕೊಟ್ಟೆನ್ರೇ, ಆಗಿ ಹೊಲದಾಂವಗ ಎಂಟಾಣೆನ್ರೀ, ಒಂದ ರೂಪಾಯದಾಗ ಸಂತಿ ಮಾಡೇನ್ರೀ."

"ಮತ್ತಿನ್ನೊಂದ ರೂಪಾಯಿ ಏನಾತೊ ? ”

ಸಾಹೇಬ, ಅದೊಂದ ಬ್ಯಾಂಕಿನಾಗ ಇಟ್ಟ ಬಂದಿನ್ರೀ. ಮತ್ತ ನಾಳೆ ನನ್ನ ಕೈ ಕಟ್ಟಾ ತಂದ್ರ ಎಲ್ಲಾರೂ ಹೊಟ್ಟಿಗೇನ ಕೇರಹಾಕ್ಕೊತಾರಂತೆ, ಉನಾಸಾ ಮಾಡಿ ? ತನ್ನ ಹಂತೇಕ ಇಲ್ಲಿದ್ರ ಮೂರು ಲೋಕಾದಾಗ ಇಲ್ಲಂತ.............” ಹೀಗೆಯೇ ಹೇಳುತ್ತಿರಬೆಕಂತೆ,

ನಾನು ಸಂಬಳ ಕೊಡಹತ್ತಿದಾಗಿನಿಂದಲೂ ಇದೇ ಪ್ರಕಾರವೇ ನಡೆದಿದ್ದಿತು. ಅಲ್ಲದೆ ಅವನಲ್ಲಿ ಇನ್ನೊಂದು ವಿಶೇಷಗುಣವಿದ್ದಿತು.