ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಾಜೀಬಾನ ಬ್ಯಾಂಕು
೩೭


" ಅಲ್ಲೆ ನಿನ್ನ ಠೇವು ಈಗೆಷ್ಟಾಗಿರಬಹುದಪಾ ?"

" ನೀವs ನೋಡ್ರೆಲ್ರಿ ಲೆಕ್ಕಾ ಹಾಕಿ--ನಾ ನಿಮ್ಮನ್ಯಾಗ ಚಾಕ್ರೀ ಮಾಡಾಕ್ಹತ್ತೇ ಈಗ ನೋಡ್ರೆವ್ವಾ ಮೂವತ್ತು ವರ್ಸಾಗಾಕ ಬಂತೂ---ಚಾಕ್ರೀ ಮಾಡಾಕ್ಹತ್ತೀದ ಯಾಡ್ದ ವರ್ಸಕ ಸುರು ಮಾಡೇನ್ನೋಡ್ರಿ....... ವಾರಾ ಒಂದ ರೂಪಾಯದಂತ ಇಟಗೊಂತ ಬಂದೇನ್ರಿ.,. ಆ ಸೊಳೇಮಕ್ಕಳೇನ ನಾನ್ನ ಹಣಾ ಪರತ ಮಾಡತಾರ್ರೀಯವ್ವಾ !"

"ಅರ್ಬನ್‌ ಬ್ಯಾಂಕಂತೀದೆಲ್ಲೋ ಮತ್ತ, ಪರತ ಬಾರದ ಏನ ಮಾಡೆತದ ?"

"ಹೌದೆಲ್ಲಾ ಕರೇನ್ರೀ, ಆದ್ರ ಒಂದ ವ್ಯಾಳ್ಸೇಕ, ಬಗಾನ ಮುಣಗಿಗಿಣಗಿ ಹ್ವಾದರರೀ ?"

"ಅದೆಲ್ಲಾ ಇರ್ಲೆಪಾ, ನೀನು ಹುಬ್ಬಳ್ಳಿಗೆ ಹೊಗಿ ಬರೂದು ಮಂಗಳವಾರ ಮಧ್ಯಾಹ್ನಕ್ಕ. ಮತ್ತ ಬುಧವಾರ ಮಧ್ಯಾಹ್ನದ ತನಕಾ ಕೆಲಸಕ್ಕ ಯಾಕ ಬರೂದುಲ್ಲಪಾ? ತಪ್ಪಿಸೇ ಬಿಡತೀದೆಲ್ಲಾ ?"

"ಮತ್ತೇನ ಮಾಡ್ಲಿರೀ ? ಮಂಗಳಾರ ದಿನಾ ಮದ್ಯಾಣಕ ಪಗಾರಾ ಇಸಗೊಂಡೆಕ್ಯಾರಾ ಹುಬ್ಬಳ್ಳಿಗೆ ಹೊಕ್ಕೇನ್ರೇ. ಮುಂದಾಲ್ಲಿಂದ ನಡಕೊಂಡಕ್ಯಾರs ಅಟ ಜಾಆ-ಗಿಆ ಕುಡದು ಬ್ಯಾಂಕಿಗೆ ಹೋಕ್ಕೇನಿ. ಅಲ್ಲೇಟ ಒಂದ ರೂಪಾಯಿ ಇಟ್ಟಕ್ಯಾರಾ ಗೆಣ್ಯಾನ ಮನೀಗೆ ಹೋಗತೇನಿ. ರಾತರನ್ಯಾಗೆಲ್ಲೆ ಬರೂದಂತ, ಅಲ್ಲೇ ಉಳದಬಿಡ್ತೇನಿ. ದೊಡ್ಡ ನಸಿಕಿನ್ಯಾಗ ಎದ್ದ ಹೊಂಡಾಕ ನಿಂತ್ರ ಆ ಗೆಣ್ಯಾ ಒಂದ ಕೇಳಬೇಕಲ್ರಿ? ಮತ್ತ ಅವನ ಜುಲುಮಿಗೆ ಆಟ ಉಂಡಕ್ಯಾರಾ ಬರೂಮಟಾ ಮದ್ಯಾಣಾನs ಆಗತೈತ್ರಿ."

"ಅಂತೂ ಇವೊತ್ತಿನ ವರೆಗೆಂದ್ರ ವರ್ಷಕ್ಕ ಐವತ್ತರಂತ ಹಿಡದ್ರೂ ಸುದ್ದಾ, ಸುಮಾರು ಒಂದೂವರಿ ಸಾವಿರ ನಗದ ಮಾಡೀಯನ್ನಪಾ. "