ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡಮ್ಮ ನೋಡಿದ ವರ
೪೩


ಪತ್ರವನ್ನೋದುತ್ತ ಓದುತ್ತ ಸುಂದರಮ್ಮನು, "ನಮ್ಮಿಷ್ಟದಂತೆ ತಾವು ಒಪ್ಪಿದ್ದಕ್ಕೆ ಸಂತೋಷ; ತಮ್ಮಿಷ್ಟದಂತೆ ನಡೆಯಲು ನಾವು ಸಹ ಸಿದ್ಧರಿದ್ದೇವೆ. ಥಿಮ್ಮ ಹುಡುಗಿಯು ಸ್ವತ: ನೋಡಲಿಯೆಂದು ನನ್ನ ಮಗನ ಫೋಟೋವನ್ನು ಇನ್ನೆರಡು ದಿನಗಳಲ್ಲಿ ಕಳಿಸುವೆನು” ಎಂದು ಗಟ್ಟಿಯಾಗಿ ಓದಿಕೊಂಡು, ಮರಳಿ ಅದಕ್ಕೆ ಉತ್ತರ ಬರೆದುಬಿಟ್ಟಳು. ಎರಡು ಮೂರು ದಿನಗಳು ಕಳೆದವು. ಒಂದು ದಿವಸ ಸಾಯಂಕಾಲ. ಸುಮಾರು ನಾಲ್ಕು ಗಂಟೆಯಾಗಿತ್ತು. ಇದ್ದಲಿನ ಒಲೆಯನ್ನು ನಾಲ್ಕೇ ಇದ್ದಲುತುಂಡುಗಳಿಂದ ಹೊತ್ತಿಸಿ, ಆದರ ಮೇಲೆ ಕಾಫಿಗೆಂದು ಎರಡು ಲೋಟ ನೀರನ್ನೇರಿಸಿ, ಸುಂದರಮ್ಮ ಮಗ್ಗುಲಮನೆಗೆ ಹೆರಳಿಗೆ ಹೋಗಿದ್ದಳು; ಸರೋಜಳು ಶಾಲೆಯಿಂದ ಆದೇ ಬಂದು ಬಟ್ಟಿ ಬದಲಾಯಿಸುತ್ತಿದ್ದಳು....

ಟಪಾಲಿನವನು ಬಂದು ಒಂದು ಕಟ್ಟಿದ ಪಾರ್ಸಲನ್ನೂ ಒಂದು ಪಾಕೀಟನ್ನೊ ಕೊಟ್ಟು ಹೋದನು. ಸರೋಜಳು, "ಇದೇ ಇರಬಹುದೇ ಅವರ ಚಿತ್ರ? ನೋಡಿಯಾದರೂ ನೋಡಲೆ ? ಮೊದಲು ಕಾಗದವನ್ನೇ ನೋಡೋಣ....... ದೊಡ್ಡಮ್ಮ ನನಗೊಂದೂ ಕಾಗದ ತೋರಿಸುವದಿಲ್ಲ, ಇಂದು ಹ್ಯಾಗೂ ಆಕೆ ಎಲ್ಲಿಗೋ ಹೋಗಿದ್ದಾಳೆ ಎನ್ನುತ್ತ, ಕವರನ್ನು ಒಡೆದು ಓದಿದಳು. “ಮುಖ್ಯವಾಗಿ ಹುಡುಗಿಯು ನೋಡಲೆಂದು ಫೋಟೋ ಕಳುಹಿಸಿದ್ದೇವೆ, ಮದುವೆಯ ಸಿದ್ಧತೆಯನ್ನು ಸಂಪೂರ್ಣವಾಗಿ ಮಾಡಿ ತಮಗೆ ತಿಳಿಸಿದಕೂಡಲೆ ತೀವ್ರ ಹೊರಟು ಬನ್ಸಿರಿ. ತಾವು ಕೇಳಿದ ಮೇರೆಗೆ ತಮ್ಮ ಹೋಗುಬರುವ ಪ್ರವಾಸದ ವೆಚ್ಚವನ್ನು ಸಹ ನಾನಿಲ್ಲಿಯೇ ನಿಮಗೆ ಕೊಡಲು ಸಿದ್ಧ- ರಿದ್ದೇವೆ" ಎಂದು ಬರೆದಿದ್ದಿತು.

"ಹುಡುಗಿಯು ನೋಡಲೆಂದು....... " ಎಂದೋದಿದೊಡನೆಯೆ ಸರೋಜಳಿಗೆ ಅತ್ಯಾನಂದವಾಯಿತು. "ಎಲ್ಲಿ ನೋಡೋಣ!"

ಎಂದವಳೇ ಪಾರ್ಸಲನ್ನು ಒಡೆದಳು.