"ಅಯ್ಯೋ, ಹೀಗೇನೇ ಎದ್ದು ಬಿಟ್ಟ ? ಇವತ್ತೇನಾದ್ರೂ ತಿಂಡಿಗಿ೦ಡಿ ತಂದಿದ್ದೀರಿಯೆನು ಮತ್ತೆ ? ”
"ಇಲ್ಲವಮ್ಮಾ........ ಒಂದು ಚಿತ್ರ, ಒಂದು ಕಾಗದ ಬಂದಿವೆ, ನಿನು ಮನೆಯಲ್ಲಿರಲಿಲ್ಲ, ನಾನೇ ಒಡೆದೆ, ಇಲ್ಲಿ ನೋಡು, ”
ಸುಂದರಮ್ಮ ಚಿತ್ರವನ್ನು ಕೈಗೆ ತೆಗೆದುಕೊಂಡು, " ಇದೇನೆ? ಇದು ನಿನ್ನದೇ ಚಿತ್ರ: ಮರೆತು ನಿನ್ನದನ್ನೆ ಮರಳಿ ಕಳಿಸಿದರೋ ಏನು ?...."
“ಅಲ್ಲವಮ್ಮಾ, ಚೆನ್ನಾಗಿ ನೋಡು ” ಎನ್ನುತ್ತ ಕಾಫಿಯನ್ನು ಕುಡಿದು, ಬಟ್ಟಲನ್ನು ಕೆಳಗಿಡುತ್ತ, ತಾನೂ ಆ ಚಿತ್ರದ ಕಡೆಗೆ ಹಣಿಕಿ ಹಾಕಿದಳು. ದೊಡ್ಡಮ್ಮ ಬರುವಳೆಂಬ ಹೆದರಿಕೆಯಿಂದ ಅವಸರದಲ್ಲಿ ಭಾಸ್ಕರರಾಯನ ಚಿತ್ರವನ್ನು ತನ್ನ ಬೀಗದಲ್ಲಿಟ್ಟು, ತನ್ನ ದನ್ನು ಅದರ ಬದಲಾಗಿ ಪತ್ರದ ಜೊತೆಯಲ್ಲಿ ದೊಡ್ಡಮ್ಮನ ಕೈಗೆ ತಪ್ಪಿ ಕೊಟ್ಟೆನೆಂದು ಆಗವಳಿಗೆ ಹೊಳೆಯಿತು. ನಾಚಿಕೆ-ಭಯಗಳಿಂದ ಮುಖವು ಕೆಂಪಡರಿತು.
"ಅಂದ್ರೆ, ಆ ಚಿತ್ರ ಬಂದಕೂಡಲೆ ನಿನ್ನ ದನ್ನ ನೀನು ಹೊರಗೆ ತೆಗೆದಿದ್ದಿಯೇನು ? ........ಇಲ್ಲವೆ ಈಗಾಗಲೆ ಹುಡುಗನನ್ನ ನಿನ್ನವನನ್ನಾಗಿ ಮಾಡಿಕೊಂಡುಬಿಟ್ಟು, ಬೀಗದಲ್ಲಿ ಸೇರಿಸಿದೆಯೊ? ?........”
ಮರಳಿ ತನ್ನ ದನ್ನು ಒಳಗಿಟ್ಟು, ಭಾಸ್ಕರನ ಚಿತ್ರವನ್ನು ತಂದು ದೊಡ್ಡಮ್ಮನ ಕೈಗಿತ್ತಳು.
ನೋಡಿದ ಕೂಡಲೆ ಸುಂದರಮ್ಮನು, "ಆಹಾ, ಎಂತಹ ಸುಕುಮಾರನನ್ನಾ? ಸರೋಜ, ನಿನಗೆ ನಿಜವಾಗಿಯೂ ತಕ್ಕ ವರ; ನಿನ್ನ ರೂಪಕ್ಕೂ ಗುಣಕ್ಕೂ ಮಿರುಗಿಡೊ ತರುಣ. ಆದರೆ....!
"......ನಿನಗೆ ಮನಸಿಗೆ ಬಾನೆಯೋ ಇಲ್ಲವೋ ? ” ಎಂದು ದೊಡ್ಡಮ್ಮ ಮಾತುಮುಗಿಸಿ, ನಗೆಯಾಡುವಳೇನೋ ಎಂದು ತಿಳಿದು,