ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಹೂಬಿಸಿಲು

ಸರೋಜ ಧಟಕ್ಕನೆದ್ದು ಹೊರಕ್ಕೆ ಬಂದಳು. ಆದರೂ “ ಆದರೆ,........ ನಿನ್ನ ಹಣೆಬರಹ........ ನಿನ್ನ ಹಡೆದಾಕೆ ಇದ್ದಿದ್ದರೆ ಹೀಗೆ ಮಾಡುತ್ತಿದ್ದಳೆ?..."ಎಂಬ ಪಿಸುಮಾತುಗಳು ಅವಳ ಕಿವಿಗೆ ಬಿದ್ದೆ ತೀರಿದವು, ಮುಂದಿನ ಜಿನುಗುಮಾತು ಕೇಳಿಸದೆ, ದೊಡ್ಡದೊಂದು ನಿಟ್ಟುಸಿದು ಕೇಳಿಸಿತು.

ಸರೋಜಳು ರೂಮಿನಲ್ಲಿ ವಿಶ್ರಾಂತಿಗಾಗಿಯೆಂದು ಏನನ್ನೋ ? ಓದಲು ಕುಳಿತಳು; ಓದಿನ ಕಡೆಗೆ ಮನಸೆ ಹರಿಯಲೊಲ್ಲದು ತಟ್ಟನೆದ್ದು ಪಾರ್ಕಿನ ಕಡೆಗಾದರೂ ಹೊಗಿಬರೋಣವೆಂದು, ಮನೆಯಲ್ಲಿ ಹೇಳಿ ಹೊರಬಿದ್ದಳು.

ದೊಡ್ಡಮ್ಮ ಹಾಕಿದ ನಿಟ್ಟುಸಿರಿನ ಅರ್ಥವೇನು ? 'ನಿನ್ನಮ್ಮ ಇದ್ದಿದ್ದರೆ ಹೀಗೆ ಮಾಡುತ್ತಿದ್ದಳೆ ? ' ಎಂಬುದರ ಅರ್ಥವಾದರೂ ಏನಿರಬಹುದು ?.... ಅಮ್ಮನ ನೆನಪಾಗಿ ದೊಡ್ಡಮ್ಮನಿಗೆ ನಿಟ್ಟುಸಿರು ಹೊರಟಿರಬೇಕು. ನನ್ನನ್ನು ತನ್ನಷ್ಟು ಚುರುಕಳೂ ಜಾಣ ಇದ್ದಿರಲಿಲ್ಲವೆಂದು ದೊಡ್ಡಮ್ಮ ಆಗಾಗ ಹೇಳುತ್ತಿರುತ್ತಾಳೆ; ಅವಳು ಇದ್ದಿದ್ದರೆ ಭಾಸ್ಕರನಂತಹ ಸುಶಿಕ್ಷಿತ ವರನನ್ನು ನೋಡುವವಕ್ಕಾಗುತಿದ್ದಿಲ್ಲವೆಂದು ದೊಡ್ಡಮ್ಮ ಹಿಗೆ ಅಂದಿರಬೇಕು. ಸರಿ; ಹೀಗೆಯೆ? ಇರಲು ಸಾಕು. ನಮ್ಮ ಅಮ್ಮನ ನೆನಪು ಸಹ ನನಗಾಗದಂತೆ ಪ್ರೇಮದಿಂದ ನನ್ನನ್ನು ಕಾಣುತ್ತಿರುವ ಸುಂದರಮ್ಮನ ವಿಚಾರದಲ್ಲಿ ಅನ್ಯಥಾ ಭಾವಿಸಲಾರೆ........

ಮನೆ ಬಿಡುವಾಗ ಒಡಮನಸಿನಿಂದ ಹೊರಬಿದ್ದಿದ್ದಳು; ಎಷ್ಟೆಂದರೂ ಸರಳ ಮನಸಿನ ಬಾಲೆಯವಳು. ಮರಳುವಾಗ ಸದ್ವಿ-ಚಾರದಿಂದ ಸಮಾಧಾನ ಹೊಂದಿದವಳಾಗಿ, ತಿಳಿಮನಸಿನಿಂದ ಮನೆಗೆ ಬಂದಳು; ಊಟಉಡಿಗೆಗಳನ್ನು ತಿರಿಸಿ, ಸುಖವಾಗಿ ನಿದ್ರಿಸಿದಳು.

****

ದಿನಗಳು ಕಳೆದವು. ತಿಂಗಳುಗಳು ಸಂದವು. ಕೊನೆಗೆ ಎಪ್ರಿಲ ತಿಂಗಳು ಮುಗಿಯಬಂದಿತು.