ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೊಡ್ಡಮ್ಮ ನೋಡಿದ ವರ
೪೭

ಧಾರವಾಡದಿಂದ ಸುಂದರಮ್ಮನಿಗೆ ಪತ್ರವೊಂದು ಬಂದಿತು-ಮೇ ತಿಂಗಳ ಎರಡನೆಯ ವಾರದಲ್ಲಿ ಮದುವೆಯ ಸಿದ್ಧತೆ ಮಾಡುವದಾಗಿ.

****

ಗೊಪಾಳಪುರವಲ್ಲ, ಬಡ್ಡಿಯ ವ್ಯವಹಾರಸ್ಥರಾದ ರಂಗನಾಥರಾವ ಸಾಹುಕಾರರೆದರೆ ಇಡಿಯ ಊರಿಗೆಲ್ಲ ಗೊತ್ತು. ಬಡವರು ಮೊದಲ್ಗೊಂಡು ಬಲ್ಲಿದರ ವರೆಗೂ ಎಲ್ಲರ ವ್ಯವಹಾರವು ಅವರಲ್ಲಿ. ಅವರಿಗೀಗ ಏನಿಲ್ಲೆಂದರೂ ಅರವತ್ತು ವರುಷಗಳಾಗುತ್ತ ಬಂದಿದ್ದವು. ಆದರೂ ಮೊದಲಿನಿಂದ ನಿರ್ವ್ಯಸನಿಗಳಾದುದರಿಂದ, ಅವರ ಮೈ ಕಟ್ಟು ದಷ್ಟಪುಷ್ಟವಾಗಿತ್ತು. ಮನೆಯಲ್ಲಿ ಅವರು, ಅವರ ಎರಡನೆಯ ಹೆಂಡತಿಯ ಮಗ ಭಾಸ್ಕರರಾಯ, ಒಬ್ಬ ಅಡಿಗೆಯನ-ಮೂವರೇ. ರಾಯರ ನಾಲ್ಕು ಜನ ಹೆಂಡಂದಿರೂ ತೀರಿಹೋಗಿ, ನಮ್ಮ ಭಾಸ್ಕರ- ರಾಯನು ತಾಯಿಯರಿಲ್ಲದ ಪರದೆಶಿ ಮಗನಾಗಿದ್ದನು.

ಭಾಸ್ಕರನಿಗ ಪುಣೆಯಲ್ಲಿದ್ದನು. ವಕಿಲಿ ಅಭ್ಯಾಸವನ್ನು ನಡೆಯಿಸಿದ್ದನು; ಅವನಿಗೆ ಹುಡುಗಿಯ ಫೋಟೋ ನೋಡಲಿಕ್ಕೆ ಕಳುಹಿಸಿ, ಅವನ ಒಪ್ಪಿಗೆಯನ್ನು ಪಡೆದೂ ಆಗಿತ್ತು. "ಹಿರಿಯರಿಗೆ.... ತಿಳಿದ..ವರಿಗೇನು ಹೇಳಬೇಕು ? ತಮ್ಮ ಮನಸಿಗೆ ಬಂದಂತೆ ಮಾಡಬಹುದು? ಎಂದು ವಿನಯದಿಂದಲೂ ನಾಚಿಕೆಯಿಂದಲೂ ಪತ್ರ ಬರೆದಿದ್ದನು; ಅಲ್ಲದೆ ಭಾಸ್ಕರನಿಂದ ಅವನ ಫೋಟೋವನ್ನು ತರಿಸಿ ಸುಂದರಮ್ಮನ ಊರಿಗೂ ಕಹಿಸಲಾಗಿತ್ತು.

ಮೇ ತಿಂಗಳಲ್ಲಿ ಸುಂದರಮ್ಮನಿಗೊಂದು ದಿವಸ ತಂತಿಯು ಬಂದಿತು; ಕೂಡಲೆ ಸುಂದರಮ್ಮ ನಾಲ್ಕ ಬಳಕೆಯ ಅರಿವೆಗಳನ್ನು ಕಟ್ಟಿಕೊಂಡು ಸರೋ ಒಳೊಡನೆ ಹೊರಟೇ ಬಿಟ್ಟಳು.

"ದೊಡ್ಡಮ್ಮಾ, ಮತ್ತಾರೂ ಮಂದಿಮಕ್ಕಳು ಇಲ್ಲೇನೇ ಮದುವೆಗೆ ಹೊರಡೋಣವೆ ? ” ಗಟ್ಟಿ ಧೈರ್ಯ ಮಾಡಿ ಕೇಳಿದಳು.

"ಯಾತಕ್ಕೆ ಮಗೂ, ನಾನೇನು ಅವರಿಗೆ ಒಂದು ಕಾಸನ್ನಾ