ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೊಡ್ಡಮ್ಮ ನೋಡಿದ ವರ
೪೯

ಚೈತ್ರ ಮಾಸದ ಗೌರಿಯಂತೆ ಶೃಂಗರಿಸಿವರು ; ಬಳಿಕ ಮುಖದ ತುಂಬ ಜರದ 'ಮೇಲ್ದಿ'ಯನ್ನು (ಮೇಲುದವನ್ನು) ಹೆಚ್ಚಿದರು.

"ದೊಡ್ಡವರ ಮನೆತನ- ಒಮ್ಮೆಲೆ ಮುಸುಕು ತೆಗೆಯಬೇಡ. ಈ ಊರಿನವರ ವಾಡಿಕೆಗೆ ಮುಖದ ಸೆರಗು ತೆಗೆಯುವದು ಒಪ್ಪುವದಿಲ್ಲವಂತೆ ” ಎಂದು ಸೂಚಿಸಿ, ದೊಡ್ಡಮ್ಮ ಮುತ್ತೈದೆಯ ದೊಡನೆ ಅವಳನ್ನು ಹೊರಗೆ ಹಸೆಮಣೆಗೆ ಕಳುಹಿಸಿ, ಬೆನ್ನ ಗುಂಟ ತಾನೂ ನಡೆದಳು.

ಮದುವೆಗೆ ಏನಿಲ್ಲೆಂದರೂ ನೂರಾರು ಜನ ಬಂದಿದ್ದಿತು; ಆದರೂ ಚಿತ್ರದೊಳಗಿನ ಗೊಂಬೆಗಳಂತೆ ಎಲ್ಲರೂ ಸ್ತಬ್ಧರಾಗಿದ್ದರು. ಅಮ್ಮಯ್ಯಾ, ಇದೆಂಥ ಊರಿದು !' ನಾನೇನು Silent Film ನಲ್ಲಿ ಕೆಲ್ಸ ಮಾಡಲಿಕ್ಕೆ ಬಂದಿದ್ದೇನೆಯೆ ?' ಎಂದು ಕ್ಷಣಹೊತ್ತುದಿಗಿ ಬಿದ್ದಿತು ಸರೋಜಳಿಗೆ.

ಅಕ್ಷತೆಗಳು ಬಿದ್ದವು; ಮಾಂಗಲ್ಯ ಕಟ್ಟಿದರು; ಮುಸುಕಿನೊಳರುವಾಗಲೇ ಲಾಜಾಹೋಮವಾಯಿತು. ಹೊರಗೆ ಬ್ಯಾಂಡು ಆರ್ಭಟಿಸುತ್ತಿದ್ದಿತು. ವರನಿಗೆ ಹಾರ ಹಾಕುವದಕ್ಕೆಂದು ಅವಳ ಮೇಲ್ದಿಯನ್ನು ಸರಿಸಿದರು.

ಹುಡುಗಿಯು ಮೊದಲೆ? ನಾಚಿ ನಾಚಿಸತ್ತಿದ್ದಳು. ಆದರೂ ನಡುವೆಯೊಮ್ಮೆ ಮುಸುಕಿನೊಳಗಿಂದಲೇ ಮೆಲ್ಲಗೆ ಪತಿಯ ಪುಷ್ಟವಾದ ಕೆಂಪಾದ ಪಾದಗಳನ್ನು ನೋಡಿ ವಂದಿಸಿದ್ದಳು.

ಹಾರ ಹಾಕುವಾಗ ಮೆಲ್ಲಗೆ ಮುಖವನ್ನು ಮೇಲಕ್ಕೆ ಮಾಡಿದಳು. ಬೆಳ್ಳನೆಯ ಮೀಸೆ-ಗಡ್ಡಗಳ, ನೀರಿಗೆ ಬಿದ್ದ ಮುದಿಮುಖವನ್ನು ನೋಡಿದೊಡನೆಯೆ, “ಅಯ್ಯೋ, ದೊಡ್ಡಮ್ಮಾ, ನನ್ನನ್ನು ನೋಡಲಿಕ್ಕೆ....ಬಂದಿದ್ದ..... ಮಾವಂದಿರು....” ಎಂದು ಚೀರುತ್ತಲೇ ದೊಪ್ಪನೆ ನೆಲಕ್ಕೆ ಬಿದ್ದು ಮೂರ್ಛೆಹೋದಳು.