ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನನ್ನು ನೋಡಲಿಕ್ಕೆ ಬಂದಾಗ

ನಾನೇನು ನಿಮ್ಮಂತೆ ದೊಡ್ಡ ಕವಯಿತ್ರಿಯೂ ಅಲ್ಲ, ಕತೆಗಾರ್ತಿಯೂ ಆಲ್ಲ, ಏನೋ, ನಿಮ್ಮಂಥ ದೊಡ್ಡ ಬರಹಗಾರರು ಬರೆದವುಗಳನ್ನು ಓದಿ ತಿಳಿದುಕೊಳ್ಳಬೇಕೆಂಬ ಲವಲವಿಕೆ ಮಾತ್ರ ಇದೆ. ಇದೇನು, ಏನನ್ನೋ ಹೇಳಲಿಕ್ಕೆಂದು ಹೊರಟವಳು ಎಲ್ಲಿಗೋ ಬಂದೆನಲ್ಲ.... ? ನೆನಪಾಯಿತು. ನಾನು ಹೇಳಬೇಕೆಂದು ಮಾಡಿದ್ದು ನನ್ನನ್ನು ನೋಡಲಿಕ್ಕೆ ಬಂದಾಗಿನ ವಿಷಯ, ವಿಷಯವೆಂದೊಡನೆ ಅದೇನು ಗಹನವಾದ ವಿಷಯವೆಂದು ತಿಳಿಯಬೇಡಿರಿ ಮತ್ತೆ ! ಏನೋ ಒಂದು ನಗೆಮಾತು. "ನನ್ನನ್ನು ನೋಡಲಿಕ್ಕೆ ಬಂದಾಗ ” ಎಂದು ಕೇಳಿದೊಡನೆಯೇ ( ನಾನು ಆಗ ವಿಪುಲವಾಗಿ ಚಿನ್ನದಾಭರಣಗಳನ್ನಿಟ್ಟು ಕೊಂಡು, ಜರತಾರಿಯ ಉ ಡಿ ಗೆ ಯ ನ್ನು ಟ್ಟು ಕೊ೦ಡು, ಥಳಕು - ಬೆಳಕು - ಒನಪು - ಒಯ್ಯಾರಗಳಿಂದ ಮೆರೆಯುತ್ತ ಬಂದು, ಮುಖ್ಯ ಅವರೆ 'ದುರಿಗಾಗಲಿ, 'ಅತ್ತೆ 'ಯವರೆದುರಿಗಾಗಲಿ ಅಥವಾ ಮತ್ತಿನ್ಯಾರೋ ನೋಡಲಿಕ್ಕೆ ಬಂದ ಜನರೆದುರಿಗಾಗಲಿ ಕು ಳಿ ತು ಗೊಂ ಡ ಸಂಗತಿ ಇರಬಹುದು" ಎಂದು ತಾವು ಊಹಿಸಿರಬಹುದು. ಏಕೆಂದರೆ, ನನ್ನಂತಹ ಇನ್ನಾವ ಹುಡುಗಿಯನ್ನೇ ಆಗಲಿ ನೋಡಲಿಕ್ಕೆ ಬಂದಾಗ, ಹುಡುಗಿಗೂ ಸಿಂಗಾರ. ಬಂಗುರಗಳೆಂದ ಅಂದಚಂದವಾಗಿ ಕಾಣಬೇಕೆಂಬ ಆಸೆಯಾಗುವದುಂಟು; ಇವಳ ತಾಯಿತಂದೆಯವರಿಗೂ, ಹೆರವರಿಂದಾದರೂ ಆಗಲಿ, ನಾಲ್ಕು ಎರವಿನ ಒಡವೆಗಳನ್ನು ತಂದು ಹುಡುಗಿಯ ಮೈಮೆಲಿಟ್ಟು, ಹುಡುಗಿಯ ಸೌಂದರ್ಯವನ್ನು ಹೆಚ್ಚಿಸಿ ತೋರಿಸಿ, ತಾವು ಬಡವರಿದ್ದರೂ ಬಲ್ಲಿದರಂತೆ ಬಿಗರೆದುರಿಗೆ ತೋರಿಸಿಕೊಳ್ಳಬೇಕೆಂದು ಹಾತೊರೆಯುವ ವಾಡಿಕೆಯೂ ಉಂಟು. ಅದಕ್ಕೆ ಯೇ ನಾನಂದದ್ದು ಸಿ೦ಗಾರದ ಸೊಬಗನ್ನು ನಾನು ಹೇಳಲಿರುವೆನೆಂದು ನೀವು ತರ್ಕಿಸಿರಿ