ಬಹುದೆಂದು. ಹಾಗೆ ಊಹಿಸಿದ್ದರೆ ಊಹಿಸಬೇಡಿರೆಂದು ನಾನು ನಿಮಗೆ ಹೇಳುವೆ. ಯಾಕೆಂದರೆ, ನಾವು ಬಡವರಿದ್ದರೂ ನಮ್ಮ ಜನರಿಗಾಗಲಿ, ನೋಡಬಂದವರಿಗಾಗಲಿ, ತೋರಿಕೆಯ ಸಿರಿವಂತಿಕೆ, ಹುಡಗಿಯ ಚೆಲುವಿಕೆ ಯಾವುವೂ ಬೇಕಾಗಿರಲಿಲ್ಲ. ಆದ್ದರಿಂದ ಆ ಮಾತೇ ಬೇಡಿನ್ನು ಇಲ್ಲಿ.
ಗೆಳೆಯನೊಡನೆ ಇಂತಹ ದಿನ ಬರುವರೆಂಬುದಾಗಿ ಮುಂಗಡವಾಗಿಯೇ ತಿಳಿದಿತ್ತು. ನನ್ನನ್ನು ನೋಡಲಿಕ್ಕೆ ಬರುವ ಮುನ್ನಾ-ದಿನವೇ ನನ್ನಕ್ಕ-ಭಾವಂದಿರು ನಮ್ಮಲ್ಲಿಗೆ ಬಂದಿದ್ದರು. ಆಯಿತು. ಆ ದಿನವೂ ಬಂದಿತು. ಮನೆಯನ್ನು-ಮನೆಯೆನ್ನುವದಕ್ಕಿಂತ ನಾವಿರುವ ಮನೆಗೆ ಹುಲ್ಲುಗುಡಿಸಲು ಎಂದರೇನೇ ಹೆಚ್ಚಾಗಿ ಒಪ್ಪುವದು -ಜಳಜಳ ಕಸಗೂಡಿಸಿಟ್ಟು, ಒಂದು ಜಮಖಾನೆಯನ್ನು ಹಾಸಿಟ್ಟಿದ್ದರು. ಬಡವರ ಮನೆಯಲ್ಲಿ ಇದಕ್ಕೂ ಹೆಚ್ಚಿನ ಇನ್ನಾವ ಸಿದ್ಧತೆಯಾಗಬೇಕು ? ಸಾಲದ್ದಕ್ಕೆ ನಮ್ಮವ್ವ-ಅಕ್ಕ ಕೂಡಿ ಸ್ವಲ್ಪ ಚಹಾ-ಫಲಾಹಾರದ ಏರ್ಪಾಡನ್ನು ಮಾಡಿಟ್ಟುಕೊಂಡು ಏನೋ ಬಹಳೆ: ಗಡಿಬಿಡಿಯ ದೊಡ್ಡ ಕೆಲಸದಲ್ಲಿ ತೊಡಗಿದ್ದಂತೆ ಸುಮ್ಮಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡತೊಡಗಿದ್ದರು. ಮಧ್ಯಾಹ್ನವೂ ಆಯಿತು. ಅಳಿಯ ದೇವರು ಇನ್ನೂ ಏಕೆ ಬರಲಿಲ್ಲವೆಂಬ ಚಿಂತೆ ಮನೆಯವರಿಗೆ, ಮಧ್ಯಾಹ್ನಕ್ಕೆ ಸರಿಯಾಗಿ ಎರಡು ಗಂಟೆಗೆ ಬರುವದಾಗಿ ಹೇಳಿದ್ದರು. ಮೂರು ಬಡಿದು ಹೋಯಿತು. ನಮ್ಮ ತಾಯಿಯವರು ಇನ್ನೂ ಏಕೆ ಬರಲಿಲ್ಲ ?' ಎಂದು ಹುಬ್ಬು ಮೇಲಕ್ಕೇರಿಸಿ ಬೀದಿಯ ಕಡೆಗೆ ನೋಡಿಯೇ ನೋಡುವರು. 'ಏತಕ್ಕೆ ಸುಮ್ಮನೆ ದಾರಿ ನೋಡುವಿರಮ್ಮಾ? ಬರುವವರಾದರೆ ಬಂದಾರು, ಇಲ್ಲವಾದರೆ ಬಿಟ್ಟಾರು' ಎಂಬ ಅರ್ಥವನ್ನು ಸೂಚಿಸುತ್ತ, ಒಳಗೊಳಗೆ ಏತಕ್ಕೆ ಬರಲಿಲ್ಲವೋ ಎಂದು ಕಾತರಳಾಗುತ್ತ, ತಾಯಿಗೆ ಕೇಳುವ ನೆವಮಾಡಿ ನಾನು ಒಳಗೆ ಹೊರಗೆ ಸುಳಿದಾಡತೊಡಗಿದೆ. 'ಬರುವದು ಸ್ವಲ್ಪ ತಡವಿದ್ದರೆ ಹಾಗೆಯೇ