ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಹೂಬಿಸಿಲು

ತಿಳಿಸಬೇಕಿತ್ತು ? ಸುಮ್ಮನೆ ಮಧಾಹ್ನಕ್ಕೆಂದು ಏತಕ್ಕೆ ಹೇಳಬೇಕು?' ಎಂದು ನಿರಾಶೆಯಿಂದಲೂ ಆಮೂಲಕ ಉಂಟಾದ ಸ್ವಲ್ಪ ಸಿಟ್ಟಿನಿಂದಲೂ ನಾನು ಒಳಗೊಳಗೇ ಕುದಿಯಹತ್ತಿದೆನು. "ಈಗಲೇ ಏತಕ್ಕೆ ಹಾಸಿಟ್ಟಿರಿ? ನೀವು ಹುಚ್ಚು ಮಂದಿ !” ಎನ್ನುತ್ತ ಹಾಸಿದ್ದನ್ನು ಗೂಡಿಸಹತ್ತಿದೆ.

ಅಂತೂ ಇಂತೂ ಸಾಯಂಕಾಲವಾಯಿತು; ರಾತ್ರಿಯೂ ಆಯಿತು. ಹೊರಗೆಲ್ಲ ಆಕಾಶದಲ್ಲಿ ಮೋಡ ಮುಸುಕಿತು; ಸುರಿಮಳೆಯು ಸುರಿಯುವಂತೆ ತೋರಿತು. ಇತ್ತ ನನ್ನೊಳಗೂ ಚಿಂತೆಯ ಕರೋಡ ಕವಿದು, ಅಳುವಿನ ಸುರಿಮಳೆಯಲ್ಲಿ ಸುರಿಯುವದೊ ಎಂದು ಎನಿಸಹತ್ತಿತು. ಮುಗಿಲಲ್ಲಿಯೆಂದರೆ ಆಗಾಗ ಚುಣುಕುತಲಿದ್ದ ಕೋಲ್ಕಿಂಚಿನ ಬೆಳಕೆ: ಹೊರತು, ಚಕ್ಕೆ-ಚಂದ್ರಮರ ಬೆಳಕಿರಲಿಲ್ಲ; ನೋಡಿದರೆ ಆಗ ಹುಣ್ಣಿವೆಯು ತೀರಾ ಹತ್ತಿರ ಬಂದಿತ್ತು. ನನ್ನಂತರಂಗದಲ್ಲಿ ಸಹ ನಿರಾಶೆಯ ಕಾರೊಡದ ಹಿಂದೆ ಆಸೆಯ ಮಿಂಚು ಮಿಂಚುತ್ತಿತ್ತು. ಹೊರಗೆಲ್ಲ ವಿದ್ಯುದ್ದೀಪಗಳು ಮಿಣುಗಿದವು. ದಾರಿಗಳೆಲ್ಲವೂ ಬೆಟ್ಟಿಂಗಳಿಂದ ತುಂಬಿದಂತೆಯೇ ಕಂಡವು. ಅಷ್ಟರಲ್ಲಿ ಗುಡುಗು-ಮಿಂಚು ಬಹಳವಾಗಿ, ಒಮ್ಮೆಲೇ ಆರ್ಭಟಿಸುತ್ತಲೇ ಬಂದಿತು ಮಳೆಯು; ಕಲ್ಲು ಸುರಿದಂತೆ ಸುರಿಯಿತು. ರಾತ್ರಿಯ ಹತ್ತು ಗಂಟೆಯವರೆಗೆ ಎಲ್ಲೆಲ್ಲಿಯೂ ನೀರೇ ನೀರಾಯಿತು. ಕಡೆಗೊಮ್ಮೆ ಮೋಡದೊಳಗಿನ ನೀರೆಲ್ಲ ಬಸಿದು ಹೋಯಿತೆನ್ನುವಂತೆ ಮಳೆಯು ನಿಂತಿತು. ಅದೊಂದು ನನ್ನ ಸುದೈವ. ಅಲ್ಲಲ್ಲಿ ಚಿಕ್ಕೆಗಳು ಕಳ್ಳನಂತೆ ಒಂದೊಂದಾಗಿ ಹಣಿಕಿ-ಮಿಣುಕಾಡಹತ್ತಿದವು. ಮೆಲ್ಲಗೆ ಚಂದ್ರನೂ ಕಾಣಹತ್ತಿದನು. ಆದರೆ ನನ್ನ 'ಚಂದ್ರಮ'ನು ಇನ್ನೂ ಕಾಣಲಿಲ್ಲವಲ್ಲ ? ಕೆಲಸವೂ ಊಟವೂ ಬೇಜಾರವಾದವು, ನಾನು ಊಟ ಬಿಟ್ಟರೆ ಮನೆಗೆ ಬಂದ ಅಕ್ಕ-ಭಾವ ಮೊದಲಾದವರೇಕೆ ಬಿಟ್ಟಾರು? ಚಿಂತೆಯು ನಸುವಾದರೂ ಕಡಿಮೆಯಾಗಲಿಯಂದು