ಎಲ್ಲರಿಗೂ ಊಟಕ್ಕೆ ಹಾಕತೊಡಗಿದೆ, ಅದರ ಪುಣ್ಯವಾಗಲೇ ಫಲಿಸಿತು. ಭಾವನ ಗೆಳೆಯ ಬಂದು, 'ಹುಡುಗ ಬಂದಿದ್ದಾನೆ !' ಎಂದು ಹೇಳಿದ. ಆದರೇನು ಪ್ರವಾಸದ ಶ್ರಮದಿಂದಲೂ ಮಳೆಯಾಗಿದ್ದ ಮೂಲಕ ಬಿಟ್ಟ ಕೆಟ್ಟ ಚಳಿಯಿಂದ ಕಂಗೆಟ್ಟವನಾದುದರಿಂದ, ಮರುದಿವಸ ಮುಂಜಾನೆ ಬೆಳಕಲ್ಲಿ ನನ್ನನ್ನು ನೋಡಲು ಬರುವದಾಗಿ ಹೇಳಿದನು. ನಮ್ಮಕ್ಕನಿಗೆ ಒಳ್ಳೆಯ ಉಲ್ಲಾಸ, ಹೊಸ ಭಾವನನ್ನು ನೋಡಲಿಕ್ಕೆ. ಆಕೆ ಬಂದವರ ಕೂಡ, ' ನಮ್ಮ ತಂಗಿಯನ್ನು ನಾಳೆ ಬೆಳಕಿನ ನೋಡಲೊಲ್ಲರೇಕೆ, ಆದರೆ ಅವರನ್ನು ನಾವು ರಾತ್ರಿಯಿದ್ದರೂ ಈಗಲೇ ಯಾವ ಆಂತಕವೂ ಇಲ್ಲದೆ ನೋಡಬೇಕೆನ್ನುತೇವೆ ! ಒಂದೆರಡು ಗಳಿಗೆ ಈಗಲೆ ಕರಕೊಂಡು ಬನ್ನಿರಿ!' ಎಂದಳು. 'ಅವರಿ'ಗೂ ಸಹ ಈ ಮಾತು ರುಚಿಸಿತೇನೋ, ಬಂದೇ ಬಿಟ್ಟರು. ನನ್ನಿಂದಲೆ ಬೇರೆ ಫಲಾಹಾರವನ್ನು ತಯಾರಿಸಹಚ್ಚಿ, ಆ ದ ನ್ನೊ ಯ್ದು ಅಕ್ಕ ಹೊರಗೆ ಕೊಟ್ಟಳು. ಫಲಾಹಾರ ತಿನ್ನಲಿಕ್ಕೆ ಹೊಸ ಆಕೆಯ ದೇವರಿಗೆ ಕತ್ತಲೆಯಾದೀತೆಂಬ ಭಯ ತೋರಿಸಿದಂತೆ ನಟಿಸುತ್ತ, ಇನ್ನೂ ೩-೪ ದೀಪಗಳನ್ನು ಹಚ್ಚಿ, ಒಂದೆರಡು ಗೋಡೆಗೆ ಹಾಕಿ, ಒಂದೆರಡು ಅವರೆದುರಿಗಿಟ್ಟಳು. ಇದನ್ನು ನೋಡಿ ನನಗೊಳ್ಳೆಯ ನಗು ಬಂದಿತು. ಫಲಾಹಾರವಾಯಿತು. ಇನ್ನೇನು, ಮೂವರೂ ಎದ್ದು ಸಿನೇಮಾಕ್ಕೆ ಹೊರಟರು. ನನ್ನನ್ನಾರೂ ಆಗ ಕೆಳಲೆ ಇಲ್ಲ. ಸಿನೇಮಾ ಬಿಟ್ಟ ಬಳಿಕ, ಭಾವ ಒಬ್ಬರೇ ಮನೆಗೆ ಬಂದರು. 'ಅವರೂ' 'ಗೆಳೆಯ'ನೂ ಗೆಳೆಯನ ಮನೆಗೆ ಹೋದರಂತೆ.
ಮರುದಿವಸ ನಾವೆಲ್ಲರೂ ನಸುಕಿನಲ್ಲಿದ್ದು ಮನೆಯಲ್ಲಿ ಕಸಗೂಡಿಸಿದೆವು. ಅಕ್ಕನ ಆಗ್ರಹಕ್ಕೆ ಹಾಕಿಕೊಂಡೆನೇನೋ ಅನ್ನುವಂತೆ ನಾನು 'ಸಾರಸ್ವತ' ಫ್ಯಾಶನ್ನಿನ ಹೆಣಿಲು ಹಾಕಿಕೊಂಡೆನು. ಅಷ್ಟರಲ್ಲಿ ಸೂರ್ಯೋದಯವಾಯಿತು. ನನ್ನ 'ಸೂರ್ಯ'ನೂ ನಮ್ಮ ಮನೆಯಲ್ಲಿ ಮೂಡುವ ಹೊತ್ತು ಸಮೀಪಿಸಿತು. ಗುಲಾಬಿ ಬಣ್ಣದ ಪತ್ತಲ