ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೬
ಹೂಬಿಸಿಲು

ವನ್ನುಟ್ಟು, ಮುಗಿಲುಬಣ್ಣದ ರೇಶಿಮೆಯ ಜರಿಯಂಚಿನ ಬ್ಲಾವುಜ್ ಹಾಕಿಕೊಂಡಿದ್ದೆನು. ಬರಿಯ ನನ್ನ ಹೆಳಲನ್ನು ನೋಡಿದರೇನೇ ನನ್ನ ನಾಗ 'ನಾಗವೇಣಿ'ಯೆಂದು ಕರೆಯಬಹುವಾಗಿತ್ತು, ಕಿವಿಯಲ್ಲಿ ಮುತ್ತಿನವೆರಡು ಬೆಂಡೋಲೆಗಳು, ಕೊರಳಲ್ಲಿಯೊಂದು ಏಕಾವಳಿ, ಇದು ನನ್ನ ದಿನದ ಪದ್ಧತಿಯೇ. ಅಂತೂ ಆಯಿತು ನನ್ನ ಶೃಂಗಾರ. ಗೆಳೆಯನ ಕೂಡ ನನ್ನ 'ಅವರೂ' ಬಂದರು. ನನಗೆ ತಮ್ಮೆದುರಿಗೆ ಬರಹೇಳಿ ಕಳುಹಿದರು. ನನ್ನಲ್ಲಿ ತುಂಬಿದ ಉತ್ಸಾಹ ಉಲ್ಲಾಸಗಳು ಆಗ ಒಮ್ಮೆಲೇ ಮಾಯವಾದವು. ಎದೆಯು ಡವಡವ ಹಾರಹತ್ತಿತು; ಮೈಯೆಲ್ಲ ಬೆವರಡರಿತು. ನಾಚಿಕೆಯು ನನ್ನ ಮೇಲೆ ಸಂಪೂರ್ಣವಾಗಿ ತನ್ನ ಮುಸುಕನ್ನು ಹಾಕಿಬಿಟ್ಟಿತು, ಗಾಬರಿಯಾದಂತಾದೆ. ಹೇಗೋ ಬಂದು ಅಕ್ಕ-ಭಾವ ಇವರ ನಡುವೆ ಕುಳಿತೆ. 'ಅವರು' ನನ್ನನ್ನು ನೋಡಿಯೂ ಆಯಿತು. ನಾನೂ ನಡುನಡುವೆ ಸ್ವಲ್ಪ ಕಳುವಿನಿಂದಲೇ ಓರೆನೋಟ ಚೆಲ್ಲಿ ನನ್ನ ಭಾವೀ 'ಅವರನ್ನು' ನೋಡುತ್ತಿದ್ದೆ. ಹುಡುಗಿಗೆ ಓದಹೇಳಿರೆಂದರು. ಮೊದಲು ಕನ್ನಡ ಓದಿದೆ; ಆ ಬಳಿಕ ಮರಾಠಿಯೂ ಆಯಿತು; ಮರಾಠಿಯೆಂದರೆ, ವಿದ್ಯಾಹರಣ ನಾಟಕದೊಳಗಿನ ಕಚ-ದೇವಯಾನಿಯರದೊಂದು ದೃಶ್ಯವಿದ್ದಿತು. ಇಂಗ್ಲೀಷು ಓದಿಸಿರೆಂದರು. ಅಕ್ಕ ಚಟಕ್ಕನೆದ್ದು ಒಂದು ಪುಸ್ತಕ ತೆಗೆದು, ಆದರೊಳಗಿನದೊಂದು ಪಾಠ ಓದಹೇಳಿದಳು, ಆದೂ ನನ್ನ ಪಾಲಿಗೆ, ಶೇಕ್ಸಪಿಯರನ 'ಮರ್ಚಂಟ್ ಆಫ್ ವೆನಿಸ್ ದೊಳಗಿನ ಆ್ಯಂಟೋನಿಯೋ? ನೊಡನೆ ಪೊರ್ಶಿಯಾ ಮಾಡಿದ ಭಾಷಣವೇ ಇರಬಾರದೇಕೆ? ಎಲ್ಲರಿಗೂ ರುಚಿಸುವಂತೆ ಒಳಗೊಳಗೆ ನನಗೂ ರುಚಿಸಿತು. ಹೇಗಿದ್ದರೂ ಓದಲೇಬೇಕಾದ್ದರಿಂದ ಓದಿದೆ. ' ಹಾಡಲಿಕ್ಕೆ ಬರುವದೆ? ' ಎಂದರು. ನನ್ನ ಮುಖ ನೋಡಿ ನಮ್ಮ ಈ ಬರುವದು, ಹಾಡಲು ನಾಚಿಕೊಳ್ಳುವಳು ' ಎಂದಳು. 'ಹಾಡಲಿಕ್ಕೆ ಬರುತ್ತಿರಬೇಕೆಂದು ಓದುವಾಗ ಕೇಳಿದ ಆಕೆಯ ಇಂಪು ಧ್ವನಿಯ ಮೇಲಿಂದ ನನಗಾಗಲೇ ಅನಿಸಿತು' ಎಂದು ಅವರ ಕಡೆಯಿಂದ ಆಕಾಶವಾಣಿಯಾಯಿತು. ನಾನು ತಮ್ಮ