ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನನ್ನನ್ನು ನೋಡಲಿಕ್ಕೆ ಬಂದಾಗ-
೫೭

ಮನಸಿಗೆ ಬಂದಿರುವೆನಾಗಿ ಹೇಳಿ, ನನ್ನ ಕೈಯಿಂದಲೇ ಸಾಯಂಕಾಲಕ್ಕೆ ಅಡಿಗೆ ಮಾಡಿಸಹೇಳಿದರು; ಏಕೆಂದರೆ, ನಾನು ಇಂಗ್ಲೀಷು ಕಲಿತವಳು. ಅಡಿಗೆಯ ಪರೀಕ್ಷೆಯೂ ಆಯಿತು. ಉತ್ತೀರ್ಣಳಾದೆ. 'ನೀರು ಹೊರುವ ಪರೀಕ್ಷೆ ಮಾಡುವಿರೇನು?' ಎಂದು ಭಾವ 'ಅವರಿ'ಗೆ ನಗೆಯಾಡಿದರು. 'ನಾವೂ ನಿನ್ನನ್ನು ಪರೀಕ್ಷಿಸುವವರಿದ್ದೇವೆ, ಕೇರಂ ಬೋರ್ಡಿನಲ್ಲಿ' ಎಂದು ನಮ್ಮ ತಂದೆ ನಗೆಯಾಡಿದರು. ಎಲ್ಲರೂ ತಾಂಬೂಲ ತಿಂದ ಬಳಿಕ ಅವರು ' ಗೆಳೆಯರೊಡನೆ ಹೊರಟರು. ಭಾವ ಕಳಿಸಲಿಕ್ಕೆಂದು ಮುಂಚೆಯ ಬಾಗಿಲವರೆಗೆ ಹೋದರು. ಅಷ್ಟರಲ್ಲಿ ಅಕ್ಕ, 'ಅವರು' ಸಾಕ್ಸುಗಳನ್ನೂ ಒಂದು ಪೇಪರನ್ನೂ ಮರೆತು ಹೋಗಿದ್ದಾರಾಗಿ ಹೇಳಿದಳು. ನನ್ನ 'ಅವರು' ಅವಳ ಮಾತನ್ನು ಕೇಳಿಯೂ ಕೇಳದಂತೆ ನಟಿಸಿ ಹೋಗಿಬಿಟ್ಟರು. ಓಹೋ, ಇನ್ನೊಮ್ಮೆ ಭಾವೀ ಪತ್ನಿಯನ್ನು ಆ ನಿಮಿತ್ತ ಮಾಡಿ ನೋಡಬರುವವರಿರುವರೇನು ?-ಎಂದು ಗುಣಗುಣಿಸುತ್ತ ಒಳಕ್ಕೆ ಹೋದಳು. ತಮಾಷೆ ನೋಡಿರಿ, ಅವನ್ನಾರೂ ತೆಗೆಯಲೇ ಇಲ್ಲ: ರಾತ್ರಿ ನನ್ನ ಹಾಸಿಗೆ ಹಾಸಿಕೊಳ್ಳಲೇ ಬೇಕಾಯಿತಾದ್ದರಿಂದ, ನನ್ನ ಪಾಲಿಗೆ ಆ ಕೆಲಸವು ಬಂತು. ಎಲ್ಲರಿಗೂ, ಆ ಸಾಮಾನುಗಳನ್ನು ನಾನೇ ಕದ್ದಿಟ್ಟೆನೆಂತಲೂ 'ಅವರೇ ' ಇಟ್ಟು ಹೋದರೆಂತಲೂ ಇಬ್ಬರೂ ಏನೇನು ಮಾಡಿದರೂ ಎಂತಲೂ ಹಾಸ್ಯಮಾಡಿ ನಗಲಿಕ್ಕೆ ಇದೊಂದು ನಿಮಿತ್ತವು ಸಿಕ್ಕಿತು. ಮರುದಿನ ಬೆಳಗಾಗುತ್ತಲೆ ಇನ್ನೂ ಮನೆಯೊಳಗಿನ ಕಸವು ಸಹ ಹೋಗಿರಲಿಲ್ಲ, ಆಗಲೇ ಬಂದು ಬಿಟ್ಟರಲ್ಲ ಅಳಿಯದೇವರು ! ಮತ್ತೆ ಉಪ್ಪಿಟ್ಟಿನ ಪರೀಕ್ಷೆಯಾಗಲಿಯೆಂದರು. ಉತ್ತೀರ್ಣಳಾದೆನೆಂದು ಬೇರೆ ಹೇಳಬೇಕೇ? ಹೊರಡಲಿಕ್ಕೆ ಎದ್ದರು, ಇನ್ನೂ ಅವಕಾಶವಿದ್ದಾಗಲೆ. ನಮ್ಮ ಭಾವನವರು ಆಗ 'ಹೋಗುವಿರಂತೆ ಬನ್ನಿರಿ' ಎಂದು ಅವರನ್ನು ಅಟ್ಟದ ಮೇಲಣ ಒಂದು ಕೋಣೆಗೆ ಕರೆದೊಯ್ದು ಬಾಗಿಲು ಇಕ್ಕಿಕೊಂಡರು; ಇವರದೊಂದು ಸರಳಸ್ವಭಾವ-ಯಾರೇ ಅವ-