ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನನ್ನು ನೋಡಲಿಕ್ಕೆ ಬಂದಾಗ-

೬೧

(ನನ್ನ ಮೈ-ಕೈಗೇನಾಗಿದೆ? ನಾನೇನು ಗಟ್ಟಿ ಮುಟ್ಟಿ, ಇಲ್ಲವೇ? ಕಳಿತ ಕವಳಿ ಹಣ್ಣಾಗಿದೆ ನನ್ನ ಕಣ್ಣುಗಳು ನನ್ನ ಕಣ್ಣಲ್ಲಿದ್ದಷ್ಟು ತೇಜವು ನಮ್ಮ ಮನೆಯಲ್ಲಾರಿಗೂ ತನ್ನ ಮಕ್ಕಳಲ್ಲಿ ಇಲ್ಲವೆಂದು ನನ್ನ ತಾಯಿ ಹೇಳುವರಲ್ಲ?)

ಅವರು :- ನೂರರಲ್ಲಿ ತೊಂಬತ್ತೊಂಬತ್ತು ಪಾಲು ನಮ್ಮ ತಾಯಿಯ ಒಪ್ಪಿಗೆ ಆ ಮಾತಿಗೆ ಸಿಕ್ಕುವದೆಂಬ ಆಸೆ ನನಗಿದೆ.

(ಹಾಗಾದರೆ ಆ ಹುಡುಗಿಯನ್ನೇ ಲಗ್ನ ಮಾಡಿಕೊಳ್ಳುವರಲ್ಲವೇ? ಮಾಡಿಕೊಳ್ಳಲೊಲ್ಲರೆಕೆ! ಆದರೆ ಸುಮ್ಮಸುಮ್ಮನೆ ನನಗೆ ಕುರುಡಿ. ಕುಂಟಿಯೆಂದು ಹೆಸರಿಡುವದು ಏನು ಕಾರಣ? ಇತ್ತ ಮದುವೆ ಮಾಡಿಕೊಳ್ಳುವ ಹಾಗೂ ಇಲ್ಲ, ಅತ್ತ ಸುಮ್ಮನಾಗಿಯೂ ಇರುವಂತಿಲ್ಲ! ಇದೇನು ಅಸಹ್ಯನಿದು ?)

ಭಾವನವರು:- ವಿಚಾರ ಮಾಡಿ ನೋಡಿರಿ; ಮನಸಿಗೆ ಬಂದಂತೆ ಬಗೆಹರಿಸಿದರಾಯಿತು.

(ಬಗೆಯೆನೆಂದು ಹರಿಸುವರು ? ಇಷ್ಟೇಕೆ ನಮ್ಮ ಭಾವನವರು ಅವರಿಗೆ ಹೇಳಿಕೊಳ್ಳಹತ್ತಿರುವರೋ ಏನೋ! ನಮ್ಮ ಭಾವನವರೂ ಎಲ್ಲಿಯೋ ಅರೆಹುಚ್ಚರೇ ಇದ್ದಾರೆ ಇನ್ನೆಲ್ಲಿಯೂ ನನಗೆ ವರ ಸಿಗುವದಿಲ್ಲೆಂದು ತಿಳಿದಿದ್ದಾರೆ!)

ಅವರು :- ಒಳ್ಳೇದು ನೋಡುವಾ. ಒಂದು ' ಕಾರನ್ನೇ? ಕೊಳ್ಳಬೇಕೆಂದು ನನ್ನ ಮನಸ್ಸಿನಲ್ಲಿದೆ; ಅಪ್ಪಣೆ ಕೊಡಿರಿ, ಹೋಗಿ ಬರುವೆ. ವಾರವೊಂದು ಕಳೆದ ಬಳಿಕ ನಮ್ಮ ತಾಯಿಯನ್ನು ಕರಕೊಂಡು ಬರುವೆನು.

(ಓಹೋ, ಕಾರೇನು ಪಂಢರಪುರದ ಹೆಂಡತಿಯೊಡನೆ ಸಮುದ್ರದ ದಂಡೆಗೆ ತಿರುಗಾಡಲಿಕ್ಕೆ ಹೋಗಲಿಕ್ಕೆಂದೇನು ? ಹಾ ಗ ದ ರೆ ತಾಯಿಯನ್ನು ಕರಕೊಂಡು ಇಲ್ಲಿಗೇಕೆ ಮತ್ತೆ ಬರುವದಂತೆ......... ಈ ಕುರುಡಿಕುಂಟಿಯ ಪರಿಹಾಸ ಮಾಡಲಿಕ್ಕಲ್ಲವೇ ?)