ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೬೨
ಹೂಬಿಸಿಲು

ಭಾವ:- ಆಗಲಿ, ಹೋಗಿಬನ್ನಿರಿ, ನಮಸ್ಕಾರ, ಸುರಕ್ಷಿತ ಮುಟ್ಟಿದ್ದಕ್ಕೆ ಪತ್ರ ಬರೆಯಿರಿ.

ಇನ್ನು ಹೊರಬೀಳುವರೆಂದು ತಿಳಿದು ಮೆಲ್ಲನೆ ಪಾವಟಿಗೆಗಳನ್ನಿ-ಇದು ಅಡಿಗೆಯ ಮನೆಯ ಕಡೆಗೆ ಓಡಿದೆನು.

ಅವರು ಹೋದರು. ಮಧ್ಯಾಹ್ನದ ನಾಲ್ಕು ಗಂಟೆಯಾಗಿತ್ತು. ನಾವೆಲ್ಲರೂ ಕೂಡಿ ಚಹಾ ಕುಡಿಯುತ್ತ ಕುಳಿತಿದ್ದೆವು. ಬಂದಿತಲ್ಲ ಸವಾರಿಯು ಮತ್ತೆ ನಮ್ಮೆದುರಿಗೆ ಧುತ್ತೆಂದು ! ನಾನು ಫಕ್ಕನೆದ್ದು ಓಡಿದೆ. ನಮ್ಮಕ್ಕ ಕೇಳಿದಳು. "ಏಕೆ ಅಳಿಯದೇವರೇ? ಮೋಟಾರು ತಪ್ಪಿತೇ ?" "ಅಹುದು. " ಎಂದರು. "ಹಾಗಾದರೆ ಇಷ್ಟೊತ್ತು ಎಲ್ಲಿದ್ದೀರಿ? ” ಎಂದು ಭಾವ ಆತುರದಿಂದ ಕೇಳಿದರು. "ಗೆಳೆಯನಲ್ಲಿ ” ಎಂದರು.

ಈ ಬಾರಿ ಮಾತ್ರ "ಅವರು” ಹೊರಗೆ ಎದುರಿಗೆ ಇರುಇರುವಾಗಲೇ ನನ್ನ ಭಾವ ನನ್ನ ಕೈಯಿಂದಲೇ ಹಣಸಿಸಿದರು, ಚಹಾ ಕೊಡಿಸಿದರು, ದೀಪಗಳನ್ನ ೦ಟಸಹೇಳಿದರು, ಮತ್ತೇನೇನೋ ಕೆಲಸಗಳನ್ನು ಹೇಳಿ ಅವರೆದುರಿನಿಂದ ನಾನು ಏಳೆಂಟು ಬಾರಿ ಹಾಯ್ದು ಹೋಗುವಂತೆ ಮಾಡಿದರು. ನಿಜ ! ಮುಂಜಾನೆ ಕುರುಡಿ-ಕುಂಟ ಅಂದದ್ದಕ್ಕೆ ಭಾವನಿಗೆ ನೋವಾಗಿರಬೇಕು; 'ಅವರಿ' ಗೂ ಪರೀಕ್ಷೆ ಮಾಡಬೇಕೆನಿಸಿರಬೇಕು; ಅ೦ತೇ ಅವರೂ ಬಂದರು; ಇವರೂ-ನಾನು ಕಿವಿಗೊಟ್ಟಾಗ ನಡೆದ ಮಾತಿನಂತೆ ಸಂಜೆಯಾದ ಬಳಿಕ ನನ್ನನ್ನು ಓಡಾಡಿಸಿ ನನ್ನ ಪರೀಕ್ಷೆಯನ್ನು ಅವರಿಗೆ ಮಾಡಿಕೊಟ್ಟರು.

'ನೋಡಲಿಕ್ಕೆ ಬಂದಾಗ ' ನಡೆದ ಅವರಿಬ್ಬರ ಮಾತನ್ನು ನಾನು ಯಾರ ಮುಂದೆಯೂ ಹೇಳಲಿಲ್ಲ. ನನಗೆ ಆದ ಅವಮಾನವನ್ನು ಮಂದಿಗೆ ತೋರಿಸಿ, ಇನ್ನಿಷ್ಟು ಅಪಹಾಸ್ಯಕ್ಕೆ ನಾನಾಗಿ ಏಕೆ ಗುರಿಯಾಗಲಿ? ಒಳಗೊಳಗೆ ಮಾತ್ರ ಎಷ್ಟೋ ಸಾರೆ ಕುದಿಯುತ್ತಿದ್ದೆ. ಹೀಗೆಯೆ ಕಳವಳಿಸುತ್ತಿರುವಾಗಲೇ ಆರು ತಿಂಗಳಾಗಿ ಹೋದವು ಆ