ಕರುಳ ಕತ್ತರಿ
"ಚಂದ್ರ, ಚಂದ್ರಾ, ಬಾಗಲಾ ತಗೀಯವ್ವಾ ಚಂದ್ರ, ಚಂದ್ರಕ್ಯಾ, ಚಂದ್ರಮಾ ! ”
ನಾಲ್ಕು ವರುಷಗಳ ತರುವಾಯ ಇವೊತ್ತು ಚಂದ್ರನು ಈ ಅಕ್ಕರತೆಯ ದನಿಯನ್ನು ಕೇಳಿದ್ದು.
ಮೂರೂ ಸಂಜೆಯಾಗಿತ್ತು. ತಲೆಯ ಮೇಲೆ ಸಣ್ಣದೊ೦ದು ಹಸಿಬೆ, ಕೈಯ್ಯಲ್ಲೊಂದು ತಂಬಿಗೆ, ಎಲೆಯಡಿಕೆಗಳನ್ನು ಮಿತಿ ಮೀರಿ ತಿಂದಿದ್ದನು. ಅವನ ಪಾದಗಳ ಮೇಲೆ ಮುಸುಕಿದ್ದ ಕೆಂಬಣ್ಣದ ಹುಡಿಯನ್ನು ನೋಡಿದೊಡನೆ ಇವನು ಕಾಲ್ನಡಿಗೆಯಿಂದಲೇ ಬಹು ದೂರದ ವರೆಗೆ ಪ್ರಯಾಣ ಮಾಡಿರಬೇಕೆನಿಸುವ ಹಾಗಿತ್ತು.
ದೇವರ ಮುಂದೆ ದೀಪಹಚ್ಚಿ ಹಿತ್ತಿಲಲ್ಲಿ ತುಲಸೀವೃಂದಾವನವೆ. ದುರಿಗೆ ಕೈ ಮುಗಿದು ಕುಳಿತಿದ್ದಳು ಚಂದ್ರಾ, ತಂದೆಯ ಧ್ವನಿಯನ್ನು ಕೇಳಿದೊಡನೆಯೆ ಹಿಂದಿನ ದುಃಖವನ್ನೆಲ್ಲ ಮರೆತು ಕಕ್ಕಾವಿಕ್ಕ- ಯಾದವಳಂತೆ ತಂಬಿಗೆ- ಕರಡಿಗೆಗಳನ್ನು ಅಲ್ಲಿಯೇಬಿಟ್ಟು ಓಡಿಬಂದು ಬಾಗಿಲ ತೆರೆದಳು.
"ಅಪ್ಪಾ ಬಾರಪ್ಪಾ ಒಳಗ, ಇದೇನಪ್ಪಾ ಭಾಳ ದಿವಸಕ್ಕ ಬಡ ಚಂದ್ರ ನೆನಪಾತೂ, ಅಂತೂ ನಾ ಜೀವಂತ ಇದ್ದೆನಂತ ನೆನಪಿಟ್ಟ ಅನ್ನು ..." ಹೊಯ್ಕೆಂದು ಅಳತೊಡಗಿದಳು.
"ಅಲ್ಲವ್ವಾ, ಮೂರೂಸಜಿ, ದೇವರ ಮುಂದ ಹಚ್ಚದಿ, ತುಳಸೀಮುಂದ ಹಚ್ಚದಿ, ಮುಂಚಿ ಬಾಗಲಾ ಯಾಕ ಹಾಕಿಟ್ಟ ದೆವ್ವಾ? ಮೂರೂ ಸುಜಿ, ಲಕ್ಷ್ಮೀದೇವಿ ಬರೂವ್ಯಾಳ್ಳ್ಯೆ..."