ಸಣ್ಣವ್ವನೂ ಇಂಥವನ ಹೆಂಡತಿ; ಅವಳೂ ಇವನಷ್ಟೇ ಬುದ್ದಿ-ವಂತಳು. ಕೇಳುವದೇನು? ನೆರೆಮನೆಯ ತುಂ ಗಾ ಸಾ ನಿ ಯ ಐಶ್ವರ್ಯವನ್ನು ನೋಡಿ, ತನ್ನ ಹಿರಿಯ ಮೂವರು ಹೆಣ್ಣು ಹುಡುಗಿಯರನ್ನೂ ಅವಳಲ್ಲಿ ಹಗಲು ರಾತ್ರಿ ದುಡಿಯಲು ಕಳಿಸಿ, ಅವಳಿಂದ ಅವರಿಗೆ ಸ್ವಲ್ಪ ಗಾಯನವಾದನವನ್ನು ಕಲಿಸಿದಳು. ತುಂಗಾಸಾನಿಯ ಕಡೆಯಿಂದಲೇ ಮೂವರಿಗೂ ವೇಶ್ಯಾ ಧರ್ಮದ ದೀಕ್ಷೆಕೊಡಿಸಿ, ತನ್ನ ಮನೆಯಲ್ಲಿ ಗಳಿಕೆಯ ಮಾರ್ಗವನ್ನು ಹುಡುಕಿ ತೆಗೆದಳು, ಹಿರಿಯ ಮಗಳು ಸೀತೆಯು; ಅವಳಾಗಲೇ ಮನೆ ಬಿಟ್ಟು, ಓಡಿದಳು, ನಡುವಿನವಳಾದ ಗಂಗೆಯು ಕೆಲದಿನಗಳ ಮೇಲೆ ಸಣ್ಣನ ಕಾಟಕ್ಕೆ ಬೇಸತ್ತು ಬಾವಿಯಲ್ಲಿ ಬಿದ್ದಳು. ತೀರ ಚಿಕ್ಕವಳಾದ ಚಂದ್ರನು ಒಂದು ವರುಷದ ವರೆಗೂ ತಾಯಿ-ತಂದೆಗಳನ್ನು ಸಲುಹಿಕೊಂಡು ಇರುತ್ತಾ ಬಂದಿದ್ದಳು. ಅವಳಿಗೂ ಸಹ ಸ್ವಲ್ಪ ದಿನಗಳಲ್ಲಿಯೇ ತಾಯಿಯ ಉಪದ್ರವವು ಬೇಜಾರ ಹುಟ್ಟಿಸಿತ್ತು, ಅದೇ ಮನೆಯ ನೆರೆಮನೆಗೆ ತಾನು ತನ್ನ ದೊಂದು ಬೇರೆ ವಾಸವನ್ನು ಹೂಡಿದಳು.
ಲಕ್ಷ್ಮೀರಮಣನ ಗುಡಿಯಲ್ಲಿ ದಿನಾಲು ಸಾಯಂಕಾಲಕ್ಕೆ ಆರತಿಯ ಸಮಯದಲ್ಲಿ 'ಆ'ಯೆಂದು ಬಾಯ್ದೆರೆದು ಚಂದ್ರೆಯು ಆಲಾಪನೆ ಮಾಡುವಳು. 'ಅಹಾ ಎಂಥದು ಈ ವೈಕುಂಠ ' 'ಗರುಡನೇದಿದ ದೊರೆಯೆ ' ಎಂದು ಮುಂತಾಗಿ ಹಾಡಹತ್ತಿದಳೆಂದರೆ, ಸ್ರ್ಗ ದ ದೇವರು ಭೂಮಿಗಿಳಿದು ಮೈದಾಳಿ ನಿಲ್ಲಬೇಕು !!
ಒಮ್ಮೆ ಕೀರ್ತನೆ ನಡೆದಾಗ ನೆರೆಯೂರಿನ ವೆಂಕಣ್ಣ ನಾಯಕರು ಅಕಸ್ಮಾತ್ತಾಗಿ ಗುಡಿಗೆ ಬಂದಿದ್ದರು. ದೇವರು ಅವರಿಗೆ ಅಪಾರ ಸಂಪತ್ತಿಯನ್ನೂ ದೊಡ್ಡ ಮನಸ್ಸನ್ನೂ ದ ಯ ಪಾ ಲಿ ಸಿ ದ್ದನು. ಚಂದ್ರವ್ವನು ಆಗ ಹೇಳಿದ ಭಕ್ತಿಗೀತಗಳನ್ನು ಕೇಳಿ ಮೋಹಿತರಾಗಿ ಅವಳ ಪರಿಚಯಮಾಡಿಕೊಂಡರು.