ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ಹೂಬಿಸಿಲು

"ಅವ್ವಾ, ಹಿಂಗೇನ ಮಾಡ್ತೀಯ ? ಇದ್ದದ್ದರೊಳಗ ಹಂಚಿಗೊಂಡ ಅಂತೇನಿ. ಹಿಂಗೆಲ್ಲಾ ಮಾಡಬ್ಯಾಡಾ......... ” ಎಂದು ಪರಿಪರಿಯಿಂದ ಹೇಳಿದಳು.

ಮರುದಿನ ಮುಂಜಾನೆಯ ಹತ್ತು ಬಡಿದರೂ ಚಂದ್ರವ್ವ ಏಳಲಿಲ್ಲ........ ಮನೆಯವರು ಗಾಬರಿಯಾದರು. ಎಬ್ಬಿಸಿದರು. 'ಆ....... ನಾ....... ಎಲ್ಲಿದ್ದೆನಿ ? ನನ್ನ ತಲೀ ಇವೊತ್ತು ಹಿಂಗ್ಯಾಕ ಆಗಲಿಕ್ಹತ್ತೇದ ? ” ಎನ್ನುತ್ತ ಹಿತ್ತಿಲಿಗೆ ಬಂದಳು.

"ಅವ್ವಾ, ಧೋತ್ರದ ಕಾಯಿ ಜಜ್ಜಿ ಜಜ್ಜಿ ಎಷ್ಟ ಚಲ್ಲೀಯ ?.... ಇವ್ಯಾತಕ್ಕೆ ಬೇಕಾಗಿದ್ದ ನಿನಗ ?........ ಹಾ........ ನನ್ನ ತಲಿನ.... ಹಿಂಗ್ಯಾಕ ಹುಚ್ಚುಚ್ಚರ ಆಗೈಕ್ಷದ ನನ್ನ ತಲೀ ಒಳಗ ?........ ಅಪ್ಪಾ, ಇವೊತ್ತು ಹೋಗಿ ನನ್ನ ರಾಯತ್ನ ಕರಕೊಂಡು ಬಾರೋ....” ದೊಪ್ಪನೆ ನೆಲಕ್ಕೆ ಬಿದ್ದಳು.

ಗದಿಗೆಪ್ಪನು ನಾಯಕರೂರಿಗೆ ಬಂದನು. ಅವರಿಗೆ ಮುಜುರೆ ಮಾಡಿ “ರಾಯ್ರ, ಲಗೂನ ಊರಿಗೆ ನಡೀರಿ, ನನ್ನ ಮಗಳು ಚಂದ್ರಾ ನಿನ್ನ ನೆನಪು ಮಾಡಿ ಮಾಡಿ ಹ್ಯಾಂಗ್ಯಾಂಗರ ಮಾಡಲಿಕ್ಹತ್ಯಾಳ. ಲಗೂ ಬರ್ರಿ ರಾಯರ, ನಿಮ್ಮ ಕಾಲಿಗೆ ಬೀಳತೇನಿ, ಅಬ್ದ ಬರುವಾಗ ಅಕಿ ಗಂಟುಗದಡೀ ಎಲ್ಲಾ ತರಬೇಕಂತ."

ರಾಯರಿಗೆ ಗದಿಗೆಪ್ಪನ ಮಾತು ಕೇಳಿ ಸ್ವಲ್ಪ ಸೋಜಿಗವಾಗಿ, ದಿಗಿಲು ಬಿದ್ದಿತು; ಚಂದ್ರಾ ತನ್ನನ್ನು ಆಗಲಿ ಹೊರಟಳೇನೋ ಎಂಬ ಇಲ್ಲದಸಲ್ಲದ ಸಾವಿರ ವಿಚಾರಗಳು ಬರಹ ಮನಸಿಗೆ ಖೇದವೂ ಆಯಿತು. ಮರುಮಾತನಾಡದೆ ಅವಳ ಎಲ್ಲ ಪ್ರಪಂಚವನ್ನು ಕಟ್ಟಿಕೊಂಡು ಗದಿಗೆಪ್ಪನ ಬೆನ್ನು ಹತ್ತಿ ಹೊರಟುಬಂದರು.

ಚಂದ್ರವ್ವ ಮೈಮೇಲಿನ ಚೂರು ಚಾರುಗಳನ್ನೆಲ್ಲ ತೆಗೆದೊಗೆದಿದ್ದಳು. ಕೂದಲುಗಳನ್ನು ಕೆದರಿಕೊಂಡಿದ್ದಳು. ಬಟ್ಟೆಬರೆಗಳ-