ನ್ನೆಲ್ಲ ಹರಿದುಕೊಳ್ಳುತ್ತ, ಹಿತ್ತಿಲಲ್ಲಿ ಬಜ್ಜಿ ಒಗೆದ ಆ ಧತ್ತೂರಿಯ ಕಾಯಿಗಳನ್ನು ನೋಡಿ ಅಳುತ್ತ, ತಾಯಿತಂದೆಗಳನ್ನು ಬಾಯಿಗೆ ಬಂದಂತೆ ಶಪಿಸುತ್ತ ಕುಳಿತಿದ್ದಳು,
ಒಂದೇ ದಿನದಲ್ಲಾದ ಅವಳೀ ದುರವಸ್ಥೆಯನ್ನು ಕಂಡು ನಾಯಕರಿಗೆ ಸಿಡಿಲು ಬಡಿದಂತಾಯಿತು. ಕುತ್ತಿಗೆಶಿರಗಳು ಬಿಗಿದು ಬಂದವು, ಮೆಲ್ಲಗೆ ಅವಳ ಬಳಿಗೆ ಬಂದು, “ಚಂದ್ರಾ!" ಎಂದರು, ಕೂಡಲೆ ನಾಗಿಣಿಯಂತೆ ಬುಸುಗುಡುತ್ತ ಚಂದ್ರಕ್ಕನು "ಅಯ್ಯಯ್ಯೋ ರಾಯಾರ ಈ ದುಷ್ಟರ ಮನೀಗೆ ನನ್ನನ್ನ ಚಾಕರ ಕಳಿಸಿದಿರೀ...... ನನಗ ರಾತ್ರೀನ ಈ ಭಾಗಾದಿ ಎರದ್ಲೂ, ಒಬ್ಬಾಕೀಗೇ ಊಟಕ್ಕೆ ಹಾಕಿದ್ರೂ....ನನಗೇನೋ ಮಾಟಾ ಮಾಡ್ಯಾರಿ........ ನನ್ನ ಹೊಟ್ಟೀಯೊಳಗ ಬೆಂಕಿ ಹಾಕಿದ್ದಾಂಗಾಗೆದ ನನ್ನ ತಲೀಯೆಲ್ಲಾ ತಿರಿಗಿ ತಿರಿಗಿ ದಿಕ್ಕು ತಪ್ಪಿಸೇದ.... ನಾಯಕರ, ನನ್ನ ರಾಯ್ರ....... ಅವ್ವಾನ್ನ ಯಾಕ ತರ್‍ಲಿಲ್ಲಾ........ ರಾಯ್ರ........ ರಾಯ್ರ....... ನನ್ನ ಗತೀ........”
ರಾಯರು ಕಷ್ಟಬಟ್ಟು ಅಳುತ್ತಲೆಃ ಕೇಳಿದರು, “ನಿನ್ನ ನಾ ಒಡಿವೀ, ಬೆಳ್ಳಿ, ಭಾಂಡೇ~ ಎಲ್ಲಾ ಸಾಮಾನಾ ತರ್‍ಲಿಕ್ಕೆ ಹೇಳಿದ್ದ್ಯಾ? ನಿಮ್ಮಪ್ಪಾ ತಂದಾನ!”
ನಾಯೇನ "ಹೇಳಿಲ್ಲಾ, ಗಂಟನ ದಶಿಂದನs ಹೀಂದ ಆತೂ.... (ಭ್ರಮೆಯಾಯಿತೋ ಏನೊ)....ಆ ಯಾರಲ್ಲೆ?....ಅಲ್ಲೇನದು? .... ನನ್ನ ದುಡ್ಡೆಲ್ಲಾ ಒಮ್ಮೆಲೇ ತಗೊಂಡು ಆಕಾಶಕ್ಕನ ಹಾರಿ ಬಿಟ್ರಲ್ಲಾ... ನನ್ನ ದಾಗೀನೇ, ಕೊಯಿಮತ್ತೂರ ಪತ್ಲಾ, ಎಲ್ಲಾ ಒತ್ತೀ ಇಡಲಿಕ್ಕೆ ಒಯ್ದರು....”
ಅವಳಿಗೆ ಬುದ್ಧಿಭ್ರಮೆಯಾದದ್ದನ್ನು ನಾಯಕರು ಚೆನ್ನಾಗಿ ಅರಿತರು, ಪಂಚರ ಸಾಕ್ಷಿಯನ್ನಿಟ್ಟು ಅವಳ ತಾಯಿತಂದೆಗಳ ಮೇಲೆ ವ್ಯಾಜ್ಯ ಹೂಡಿದರು.