ನಮ್ಮ ತಂದೆಯಿನ್ನೂ ಚಿಕ್ಕವನಿದ್ದಾಗ ನಮ್ಮಜ್ಜ ಅವನನ್ನು, ಹುಬ್ಬಳ್ಳಿಗೆ ಕಳುಹಿಸಿ ಕನ್ನಡ ನಾಲ್ಕನೆಯ ಇಯತ್ತೆಯ ವರೆಗೆ ಕಲಿಸಿದ್ದಕ್ಕೆ, ಊರೂರಿನ ಜನರೆಲ್ಲ ನಮ್ಮ ತಂದೆಯನ್ನು, 'ಸಾಯಬಾ' 'ಸಾಯಬಾ' (ಸಾಹೇಬ) ಎಂದು ಕರೆಯತೊಡಗಿದರಂತೆ.
ಇದನ್ನು ನೋಡಿ ಹೇಳಕ್ಕೆ ಬಿದ್ದು ನಮ್ಮೂರ ಕಲ್ಲನಗೌಡರು ತಮ್ಮ ಮಗನನ್ನೂ ಕಲಿಯಲಿಕ್ಕೆ ಇಟ್ಟರು. ಅವನ ಹೆಸರು ಬಾಬೂ-ಗೌಡ. ಆದರೆ ಒಂದು ದಿನ ಗೆಳೆಯರೆಲ್ಲರೂ ಕೂಡಿ ಗುಡ್ಡಕ್ಕೆ ಅತ್ತೀ ಹಣ್ಣು ತರಲಿಕ್ಕೆ ಹೋದಾಗ, ಈ ಎತ್ತರವಾಗಿ ಬಾಬುವಿನಂತೆ ಬೆಳೆದ ಬಾಬುವನ್ನು ಅವನ ಸ್ನೇಹಿತರು ನಗೆಯಿಂದ ಬಾಂಬುಗೌಡರೆಂದು ಕರೆದರು. ಮೊದಲೇ ಹಳ್ಳಿಯ ಊರು; ಕೆಳುವುದೆನು? ಹಾ, ಹಾ, ಅನ್ನು ವಷ್ಟರಲ್ಲಿ ಈ ಸುದ್ದಿಯು ಕರ್ಣೋಸಕರ್ಣವಾಗಿ ಊರೆಲ್ಲ ಹಬ್ಬಿತು; ಅಂದಿನಿಂದ ಚಿಕ್ಕ ಮಕ್ಕಳು ಮೊದಲು ಮಾಡಿ ಅವನನ್ನು ಬಾಂಬೂಗೌಡರೆನ್ನ ಹತ್ತಿದರು, ಇರಲಿ. ಅಂತೂ ಬಾಂಬೂಗೌಡರಿಗೆ ತಂದೆಯವರು 'ಮುಳ್ಳಕ್ಕೀ (ಮುಲ್ಕಿ) ಪರೀಕಿಶೆ (ಪರೀಕ್ಷೆ)' ಮಾಡಿಸಿಬಿಟ್ಟರಂತೆ.
ಅಷ್ಟರಲ್ಲಿ ಹೇಗೆ ನಮ್ಮೆಲ್ಲರ ದೈವಬಲದಿಂದ ಊರೂರಿಗೆ ಅದಾವುದೋ ಊರಿನ ಬೋರ್ಡಿನಿಂದ ಕನ್ನಡೆಶಾಲೆಯನ್ನು ಸ್ಥಾಪಿಸುವ ಹುಕುಮು ಬರದಿತು. ಆಯಿತು, ಇನ್ನೇನು ಬಾಂಬೂಗೌಡರೇ ಆ ಶಾಲೆಗೆ ಹೆಡ್‌ಮಾಸ್ತರರು; ಇನ್ನೂ ಒಬ್ಬಿಬ್ಬರು ಅವರೊಡನೆ ೫-೬ ಇಯತ್ತೆಗಳ ವರೆಗೆ ಕಲಿತು ಬಿಟ್ಟಿದ್ದವರು ಕೆಳಗಿನ ಮಾಸ್ತರರಾದರು.
ವರ್ಷರಡು ವರ್ಷಗಳಲ್ಲಿ ಬಾಂಬೂ ಮಾಸ್ತರರ ಪ್ರಯತ್ನದಿಂದ ಅರವತ್ತು ಗಂಡುಹುಡುಗರೂ, ಹದಿಮೂರು ಹೆಣ್ಣು ಹುಡುಗಿಯರೂ ಸೇರಿದರು. ಆಗ ತನ್ನೆಲ್ಲ ವಿದ್ಯಾರ್ಥಿಗಳಿಗೆ ಓದಲಿಕ್ಕೆ ಚಿಕ್ಕದೊಂದು ಲಾಯಬ್ರರಿಯನ್ನು ಏರ್ಪಡಿಸಬೇಕೆಂದು ಮಾಸ್ತರರು ವಿಚಾರಿಸಿದರು; ಮತ್ತು ತನ್ನ ಹಲಕೆಲವು ಹುಡುಗರನ್ನು ಸಾಹಸದಿಂದ ಊರೂರಿನ