ನಾಳೆ ನೀ ಕಲ್ತ ಬಂದೆಂದ್ರ, ಧೊಡ್ಡಾವಾಗಿ ಇದನ್ನs ಇನ್ನಿಷ್ಟು ಸುಧಾರಿಸಿಗೊ೦ಡು ಸಾಗು ಆತು ಎನ್ನುತ್ತ ನನ್ನ ಕೈಗೆ ಅದನ್ನು ಕೊಟ್ಟರು. ಓದಿದೆ, ಖೊಕ್ಕೆಂದು ನಗುವಂತಾಯಿತು. ಹೇಗೋ ಕೈವಸ್ತ್ರವನ್ನು ಬಾಯಿಯಲ್ಲಿ ತುಂಬಿಕೊಂಡು ಕೆಮ್ಮಿನ ಮೇಲೆ ಹಾಕಿದೆನು.
ಸುಮಾರು ಹದಿನೈದು ದಿನಗಳ ಹಿಂದೆ ಕಾಲೇಜಿನ ಹಾಸ್ಟಲಿನಲ್ಲಿ ದೊಡ್ಡ ದೊಡ್ಡ ಇಂಗೀಷ-ಮರಾಠಿ-ಕನ್ನಡ ದೈನಿಕಗಳಲ್ಲಿ ಓದಿದ ವಿಷಯದ ಅನಾವರಣಸಮಾರಂಭವು ಅಂದು ನಮ್ಮೂರ ಪೇಪರಿನಲ್ಲಿ ಆಗಿತ್ತು.
“ಮಾಸ್ತರ ಸಾಹೇಬರೆ, ಹದಿನೈದು ದಿವಸದ ಹಿಂದಿನ ಸುದ್ದೀನ ಈಗ ಹಾಕೀರೆಲ್ಲಾ?.... ಮತ್ತೆ ನಿಮ್ಮ ಪೇಪರಿಗೆ 'ಬಕಪಕ್ಷಿ' ಅಂತ ಯಾಕ ಹೆಸರೀಟ್ಟಿರಿ? ” ಎಂದು ಕೇಳುವ ಧೈರ್ಯವನ್ನೇನೋ ಮಾಡಿದೆ. ಮುದುಕರೆಲ್ಲಿ ಸಿಬ್ಬಾಗುವರೊ ಎಂದು ಎದೆಯಲ್ಲಿ ಚಕ್ಕೆ೦ದಿತು. ಬಾಂಬೂಗೌಡರು ವಿಚಾರಪೂರ್ವಕವಾಗಿ ಉತ್ತರವಿತ್ತರು: "ತಮ್ಮಾ, ನೀ ಕೇಳಿದ್ದೆಲ್ಲಾ ಖರೆ, ಹದಿನೈದು ದಿನದ ಹಿಂದಿನ ಸುದ್ದೆಂತ ನನಗೆ ಗೊತ್ತದ; ಆದ್ರ ಈ ಸುದ್ದೆರ ನಮ್ಮ ಊರೂರಿನ ಜನಕ್ಕೆ ಇಷ್ಟು ದಿವಸ ಎಲ್ಲೆ ತಿಳಿದಿತ್ತು? ಅಲ್ಲ ನಮ್ಮ ಊರೂರಿಗೆ ವಾರಕ್ಕೊಮ್ಮೆ ಟಪಾಲು ಬರ್ತದಪ್ಪಾ. ಮತ್ತೆ ಈ ಹಳ್ಳೀ ಊರೊಳಗ ಯಾವ ಕೇಳ್ತಾನೊ ಇದನ್ನೆಲ್ಲಾ ? ನೀ ಒಬ್ಬಾಂವಾ ಶಾಣ್ಯಾ ಇವೊತ್ತ ಕೇಳ್ದೀ-ನಾಳೆ ಹೊಂಟಿ ಪುಣೆ ಮುಂಬೈ ಕಡೆ!...."
"ಇನ್ನ 'ಬಕಪಕ್ಷಿ' ಅಂತೀಯಾ ವನದೊಳಗಿನ ಬಕಪಕ್ಷಿ ಹ್ಯಾಂಗ ಸಿಕ್ಕಲ್ಲಿಂದ ಹುಳಹುಪ್ಪಡಿ ಸಂಗ್ರಹ ಮಾಡಿಕೊಂಡು ತನ್ನ ಹೊಟ್ಟೀ ಭರತೀ ಮಾಡಿತದ ನೋಡು, ಹಾಂಗ ನನ್ನ 'ಬಕಪಕ್ಷಿ' ಸುದ್ಧಾ ಸಿಕ್ಕ ಪೇಪರಿನೊಳಗಿಂದ ಸುದ್ದೀ ನೆಗವಿಹಾಕಿ ತನ್ನ ಭರತೀ ಮಾಚಕೋತದ, ಅದಕಃ ಭಾಳವಿಚಾರಮಾಡಿ ಹೆಸರಿಟ್ಟೀನಿ.