ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದುಬಂದ ಲಕ್ಷ್ಮಿ

ನಾನು ಹೇಳುತ್ತಿರುವದು ಹೋದ ವರುಷ ನಮ್ಮೂರಲ್ಲಿ ಜರುಗಿದ ಸಂಗತಿ. ಆ ಮಾತಿಗೆ ಆರಂಭವಾದದ್ದು ಭಾರತ ಹುಣ್ಣಿಮೆಯ ದಿವಸವೇ; ಅದು ಕೊನೆಗಂಡದ್ದು ಮುಂದೆ ಒಂದೇ ವಾರದ ಅಲ್ಪಾವಧಿಯಲ್ಲಿ.

ಭಾರತ ಹುಣ್ಣಿಮೆಗೆ ಎಲ್ಲಮ್ಮನ ಜಾತ್ರೆಯಾಗುವದುಂಟು ಆಗ ಎಲ್ಲ ಕಡೆಯ ಭಕ್ತರಂತೆ, ನಮ್ಮೂರ ಆಕೆಯ ಒಕ್ಕಲೆನಿಸಿಕೊಳ್ಳುವ ಎಲ್ಲ ಜನರೂ ಅಲ್ಲಿಗೆ ಹೋಗಿ ಸಡಗರದಡಿಗೆಮಾಡಿ, ದೇವಿಗೆ ಕಾಯಿ-ಹಣ್ಣುಗಳನ್ನು ಮೀಸಲಿಟ್ಟು, ಹಡ್ಡಲಿಗೆ ತುಂಬಿ ಬರುವರು, ಆಗ ಗುಡ್ಡದಲ್ಲಿ ನೀರಿನ ಬರ ಮಾತ್ರ ಬಹಳ, ಜಾತಿಯ ಜನರು ಬರುವರು, ಬಲು ಹೊಲಸು ಮಾಡುವರು. ಔಷಧ. ಸ್ವಚ್ಛತೆಗಳ ಬಗ್ಗೆ ಆಗ ಸರಕಾರದ ವ್ಯವಸ್ಥೆ ಅಲ್ಲಿ ಸಾಕಷ್ಟಿದ್ದರೂ, ಎಲ್ಲಿ ನೋಡಿದಲ್ಲಿ ಹೊಲಸೇ ! ಇರಲಿ.

ವಿಶೇಷವಾಗಿ ಹೋಗುವ ಜನರೆಂದರೆ, ಮುತ್ತೈದೆ ಹುಣ್ಣಿಮೆಯೆಂದು ಹುಂಬ ಜನರಲ್ಲಿ ದೇವಿಯ ಹೆಸರಲ್ಲಿ ಬಿಟ್ಟು ಕೊಂಡ ಹಲವು ಹೆಣ್ಣು ಮಕ್ಕಳು, ಆಗ ಗುಡ್ಡಕ್ಕೆ ಬಂದು ಹೊಸಬಳೆಗಳನ್ನಿರಿಸಿಕೊಂಡು, ದೇವಿಯ ಚಾಕರಿ ಮಾಡುತ್ತಾರೆ. ವರ್ಷಾನುಗಟ್ಟಲೆ ದೂರದೂರ ದಿಂದ ಭ ಕ ರು ಬಂದು ದೇವಿಗೆ ಏರಿ ಸಿದ, ಬೆಲೆಬಾಳುವ ಜರತಾರಿ ಸೀರೆ-ಕುಪ್ಪಸಗಳ ಕಕ್ಕಡಗಳನ್ನು ಮಾಡಿ, ಲೆಕ್ಕವಿಲ್ಲದೆ ಸುಡುತ್ತ ಪೌಳಿಯಲ್ಲಿ ಭಕ್ತಿಯಿಂದ ಕುಣಿದಾಡುತ್ತಾರೆ. ಎಷ್ಟೋ ಜೋಗಿತಿಯರು-ಹುಣ್ಣಿಮೆಯ ಮುಂಚಿತವಾಗಿಯೆ ಎಂಟಾನೆಂಟು ದಿನ ಬಂದವರು- ಅಮಾವಾಸ್ಯೆಯ ವರೆಗೆ ಗುಡ್ಡವನ್ನೇ ಹಿಡಿದಿರುವದುಂಟು. ಆಗವರು, ಜಾತ್ರೆಗೆ ಬಂದ ಭಕ್ತರು ತುಂಬಿದ ತಮ್ಮ ಹಡ್ಡಲಿಗೆಯೂಟವನ್ನೇ ಉಂಡುಕೊಂಡು ಇರುವರು; ಮಹಾತಾಯಿಯ