ಪುಟ:27-Ghuntigalalli.pdf/೧೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

viii

ಆದರೆ ನಮ್ಮ ಜನ, ನಮ್ಮ ಯುವಜನ ಈ ವಂಚನೆಗೆ ಸಿಕ್ಕಿ ತಮ್ಮ ಸಾಮಾಜಿಕ ಮತ್ತು ರಾಜಕೀಯ ಜೀವನಗಳಲ್ಲಿ ಮೊದಲಿಗೆ ಹಿಂದುಳಿಯುವ ದಂಡತೆತ್ತರೂ, ಜಾಗೃತ ಪರಪ್ರಾಂತೀಯ ಸಾಹಿತ್ಯದಿಂದ, ಜನರ ಸಂಪರ್ಕದಿಂದ ಈಗ ಸ್ವತಃ ಎಚ್ಚರಗೊಂಡಿದ್ದಾರೆ; ಜಾಗೃತರಾಗುತ್ತ ಮುಂದುವರಿಯುತ್ತಲೂ ಇದ್ದಾರೆ. ಅದಕ್ಕನುಗುಣವಾಗಿ ಯುವಜನಸ್ತೋಮ ತನ್ನ ಮುಂದಿನ ಭವ್ಯ ಜೀವನಕ್ಕೆ ಅಡಿಗಲ್ಲಾಗುವಂತಹ ಸತ್ವಯುತ ಸಾಹಿತ್ಯವನ್ನು ರಚಿಸಿ, ನಮ್ಮ ಸಾಮಾಜಿಕ ಮತ್ತು ರಾಜಕೀಯ ಜೀವನದ ಪ್ರಗತಿಯನ್ನು ಸಾಧಿಸುವ ಹಂಬಲದಿಂದ ಕೂಡಿ ಶ್ರಮಿಸುತ್ತಿರುವರೆಂಬುದಕ್ಕೆ ಈಗಾಗಲೇ ಸಾಕಷ್ಟು ನಿದರ್ಶನಗಳು ದೊರೆತಿವೆ.

ನಮ್ಮ ಈ ದ್ವಿಮುಖ ಜೀವನದಲ್ಲಿ ಅನೇಕ ಸಮಸ್ಯೆಗಳು ಎಮರಾ ವಗತಿಯ ಸಾಧ್ಯವಾಗದಂತಾಗಿದೆ. ಆ ಸಮಸ್ಯೆಗಳ ಪರಿಹಾರವಾಗಬೇಕು; ಅದಕ್ಕೆ ಯುವಜನರಲ್ಲಿ ಕಲ್ಪನಾಶಕ್ತಿ, ಭಾವನಾ ವೈಶಾಲ್ಯ, ವಿಚಾರಶಕ್ತಿ ಮತ್ತು ಸುಧಾರಣೆಗಳನ್ನು ಸುಸಂಘಟಿತರಾಗಿ ಸಾಧಿಸುವ ಕಾರ್ಯೋನ್ಮುಖತೆ ಬೇಕಾದಂತಿವೆ. ಅವುಗಳಿಗೆ ವಿಶ್ರಾಂತಿ ಕೊಡದೆ ಯುವಜನರು ಕಾರ್ಯವಾಸಿಗಳಾಗಿ ಮುಂದುವರಿಯಲು ಅಲ್ಪ ಸ್ವಲ್ಪವಾದರೂ ನೆರವಾಗಲೆಂದು 'ಛಾಯಾ ಬಳಗ'ದ ಯುವಜನರ ಒಂದು ತಂಡ 'ಛಾಯಾ ಭಂಡಾರ'ದ ಮೊದಲ ಪ್ರಕಟಣೆಯನ್ನು ಹೊರಗಿಟ್ಟದೆ.
೧೯೪೪

ವ್ಯವಸ್ಥಾಪಕ
ಛಾಯಾ ಪ್ರಕಟನಾಲಯ

__________