ಪುಟ:27-Ghuntigalalli.pdf/೧೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೭ ಘಂಟೆಗಳಲ್ಲಿ
೧೧
 

"ಅಯ್ಯೋ! ಹಾಗುಂಟೆ? ನೀವೂ ಬಹಳ ದೂರ ಪ್ರಯಾಣ ಮಾಡೋರು; ಅಲ್ಲದೆ ಈ ಜಾಗಕ್ಕೆ ನೀವೇಮೊದಲು ಬಂದಿದ್ದಿರಾದ್ರಿಂದ ನಿಮಗೇ ಇದರ ಮೇಲೆ ಹಕ್ಕು ಹೆಚ್ಚು. ನಿಮಗೆ ರಾತ್ರಿ ಮಲಗಲು ಈ 'ಬರ್ತು' ಬೇಕೇಬೇಕಾಗುತ್ತೆ. ನನ್ನಿಂದ ನಿಮಗೆ ತೊಂದರೆ ಯಾಗುವುದು ಸರಿಯಲ್ಲ."

"ಅದಕ್ಕಾಗಿ ನೀವೆನೂ ಚಿಂತೆಮಾಡಬೇಡಿ. ಒಂದೇ ಬರ್ತಿನಲ್ಲೇ ನಾವು ಸುಧಾರಿಸಿಕೊಳ್ತೇವೆ" ಎಂದಾತ ಉತ್ತರ ಕೊಟ್ಟ. ತರುಣಿಯು ತಟಕ್ಕನೆ ಆತನ ಮುಖ ನೋಡಿದಳು. ಆತನ ಮುಖದಲ್ಲಿ ಸ್ವಲ್ಪ ಮಾರ್ಪಾಟಾಯಿತು. ಆತನ ಮಾತು ಅವಳಿಗೆ ಹೇಗೆ ಅರ್ಥವಾಗಲಿಲ್ಲವೋ ಹಾಗೆಯೇ, ಗಿರೀಶನಿಗೂ ಅರ್ಥವಾಗಲಿಲ್ಲ. ಆದರೆ ಅವನದನ್ನು ವಿಶೇಷವಾಗಿ ತಲೆಗೆ ಹಚ್ಚಿಕೊಳ್ಳದೆ 'ಸರಿ ಹಾಗಾದರೆ' ಎಂದು ತನ್ನ ತಲೆದಿಂಬಿನ ಅಡಿಯಲ್ಲಿದ್ದ 'ಮಾಸಪತ್ರಿಕೆ'ಗಳನ್ನು ಹೊರಕ್ಕೆಳೆದುಕೊಂಡು, ಸರಿಯಾಗಿ ಒರಗಿ ಕೂಡಲು ದಿಂಬುಗಳನ್ನು ಜೋಡಿಸಿ ಓದುತ್ತ ಕುಳಿತ.

ಗಾಡಿಯು ಅರಕೋಣಂ ಸ್ಟೇಷನನ್ನು ದಾಟಿ, ರೇಣಿಗುಂಟದಲ್ಲಿ ೧೦-೪೮ಕ್ಕೆ ಬಂದು ನಿಂತಿತು. ಅಲ್ಲಿ ಆತನು 'ಕಾಫಿ ತರಿಸಲೇ' ಎಂದು ತರುಣಿಯನ್ನು ಕೇಳಿದ, ಆಕೆಯು ಬೇಡವೆನ್ನದಿದ್ದರೂ, 'ಇವರು ಬೇರೆ ಕುಳಿತಿದ್ದಾರಲ್ಲಾ?' ಎನ್ನುವ ಅಭಿಪ್ರಾಯ ಬರುವಂತೆ ತನ್ನ ಕಣ್ಣುಗಳನ್ನು ಗಿರೀಶನ ಕಡೆ ಹೊರಳಿಸಿ ವ್ಯಕ್ತಪಡಿಸಿದಳು. ಆತನೂ 'ಇದ್ದರೇನು ಪರವಾಯಿಲ್ಲ' ಎನ್ನುವ ಅರ್ಥ ಕೊಡುವಹಾಗೆ ಲೊಚಗುಟ್ಟಿ, 'ಉಪಾಹಾರದ ಗಾಡಿ'ಯ ಆಳಿನ ಗಮನವನ್ನು ತನ್ನ ಕಡೆಗೆ ಸೆಳೆದುಕೊಂಡು, ಅವನಿಗೆ ಮೂರು ಬಟ್ಟಲು ಕಾಫಿ ತರುವಂತೆ ಹೇಳಿದ, ಕಾಫಿ ಬಂದಮೇಲೆ ಆತನು ತರುಣಿಗೆ ಒಂದು ಬಟ್ಟಲನ್ನು ಕೊಡಲುಹೋದ, ಆಕೆಯು 'ಅವರಿಗೆ ಮೊದಲು ಕೊಡಿ' ಎಂದು ಮೆಲ್ಲನುಸುರಿದಳು, ಆತನು ಅದೇ ಬಟ್ಟಲನ್ನೇ ಕೈಯಲ್ಲಿ ಹಿಡಿದು