ಪುಟ:27-Ghuntigalalli.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಬಿ. ಎಸ್. ವೆಂಕಟರಾಮ್

ಕೊಂಡು 'ತಕೊಳ್ಳಿ ಸಾರ್' ಎಂದು ಗಿರೀಶನ ಗಮನವನ್ನು ಸೆಳೆದನು. ಗಿರೀಶನು ಪತ್ರಿಕೆಯಿಂದ ತಲೆಯನ್ನತ್ತ ಹೊರಳಿಸಿ ನೋಡಿ, 'ದಯವಿಟ್ಟು ಕ್ಷಮಿಸಿ; ನಾನೀ ಬೆಳಿಗ್ಗೆ ಸ್ವಲ್ಪ ಹೆಚ್ಚಾಗಿಯೇ ಕಾಫಿ ಕುಡಿದುಬಿಟ್ಟಿದ್ದೇನೆ' ಎಂದುತ್ತರ ಕೊಟ್ಟ.

"ಇರಲಿ ಇನ್ನೊಂದು ಬಟ್ಟಲು ಹೆಚ್ಚಾಗಿ ತಾನೇ ಕುಡಿದೀರಿ; ಇದರಿಂದ ನಿಮಗೇನೂ ಬಾಧಕವಿಲ್ಲ ತಕೊಳ್ಳಿ" ಎಂದಾತ ಒತ್ತಾಯ ಪೂರ್ವಕವಾಗಿ ಗಿರೀಶನಿಗೆ ಕೊಟ್ಟು ಉಳಿದೆರಡು ಬಟ್ಟಲುಗಳಲ್ಲಿ ಒಂದು ಬಟ್ಟಲನ್ನು ತೆಗೆದುಕೊಂಡ, ಕಾಫಿ ಕುಡಿಯುತ್ತ ಆತನು ರೈಲ್ವೆ ಪ್ರಯಾಣೀಕರಿಗೆ ಸ್ವಭಾವ ಸಹಜವಾದ ರೀತಿಯಲ್ಲಿ ಮಾತಿಗಾರಂಭಿಸಿ, ಗಿರೀಶನ ಹೆಸರು, ಕುಲ-ಗೋತ್ರ, ಉದ್ಯೋಗ, ಉತ್ಪನ್ನಗಳನ್ನೆಲ್ಲ ಕೇಳಲಾರಂಭಿಸಿದ. ಸಾಕಷ್ಟು ರೈಲ್ವೆ ಪ್ರಯಾಣದ ಅನುಭವ ಪಡೆದಿದ್ದ ಗಿರೀಶನು ಹೆಚ್ಚು ಮಾತನ್ನು ಖರ್ಚು ಮಾಡಲೆಳಸದೆ ತನ್ನ ಕೋಟನ ಕಿಸೆಯಿಂದ ಒಂದು 'ವಿಸಿಟಿಂಗ್ ಕಾರ್ಡ್' ತೆಗೆದು ಆತನ ಕೈಲಿಟ್ಟು, "ನೀವು ಯಾವ ಊರಿನವರು? ನಿನ್ನ ಹೆಸರೇನು?" ಎಂದು ಮುಂತಾಗಿ ಪ್ರಶ್ನಿಸಿದ. ಅದಕ್ಕಾತನು ಉತ್ತರಕೊಟ್ಟಾಗ ತರುಣಿಯು ಕಿಟಕಿಯಿಂದ ತನ್ನ ಮುಖವನ್ನ ಆತನಕಡೆಗೊಮ್ಮೆ ಚಕಿತಳಾಗಿ ನೋಡಿ ಮತ್ತೆ ತನ್ನ ದೃಷ್ಟಿಯನ್ನು ಕಿಟಕಿಗೇ ತಿರುಗಿಸಿದಳು. ಆಕೆಯ ಮುಖದಲ್ಲಿ ಆಗ ಆಶ್ಚರ ಭಾವವು ಮೂಡಿದುದನ್ನು ಕಂಡ ಗಿರೀಶನಿಗೆ ಆತನು ನಿಜ ಹೇಳುತ್ತಿಲ್ಲವೆಂದೂ, ಏಕೊ ತನ್ನ ನಿಜನಾಮಧೇಯ, ಊರು, ಉದ್ಯೋಗಗಳನ್ನು ಹೇಳಲು ಮರೆಮಾಚಿದನೆಂದೂ ಹೊಳೆಯಿತು.

ಕಾಫಿ ಕುಡಿದಮೇಲೆ, ಅಥವಾ ಊಟವಾದಮೇಲೆ ಒಂದು ಸಿಗರೇಟನ್ನು ಹಚ್ಚುವ ಅಭ್ಯಾಸ ಗಿರೀಶನಿಗಿತ್ತು. 'ಕಂಪಾರ್ಟ್‌ಮೆಂಟ'ನಲ್ಲಿ ಮಹಿಳೆಯೊಬ್ಬಳಿದ್ದುದರಿಂದ ಅವನು ಮಯ್ಯಾದೆಗಾಗಿ ಸ್ವಲ್ಪ ಹೊತ್ತು ಸುಮ್ಮನಿದ್ದ. ಆದರೆ ಅಭ್ಯಾಸಬಲದ ಒತ್ತಾಯ ಹೆಚ್ಚಾದ್ದರಿಂದ