ಪುಟ:27-Ghuntigalalli.pdf/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


________________

೨೬ ಘಂಟೆಗಳಲ್ಲಿ ಅವನು ಕಿಸೆಯಿಂದ ಸಿಗರೇಟ್ ಸೆಟ್ಟಿಗೆಯನ್ನು ತೆಗೆದುಕೊಂಡು, “ನಾನು ಸಿಗರೇಟು ಸೇದುವವ; ನಿಮ್ಮ ಪತ್ನಿಯ ಆಕ್ಷೇಪಣೆಯಿಲ್ಲದಿದ್ದರೆ ನಾನೊಂದು ಸಿಗರೇಟ್ ಹಚ್ಚಿಕೊಳ್ಳಿನೆ' ಎಂದಾತನ ಅನುಮತಿ ಯನ್ನು ಬೇಡಿದ. ತರುಣಿಯ ಮೊದಲನೆಯಭಾರಿ, ಗಿರೀಶನ ಕಡೆ ನೋಡಿ ಕಿರುನಗೆ ಬೀರುತ್ತ, 'ನನ್ನ ದೇನೂ ಆಕ್ಷೇಪಣೆಯಿಲ್ಲ ; ನೀವು ಸಿಗರೇಟನ್ನು ಹಚ್ಚಿಕೊಳ್ಳಬಹುದು' ಎಂದಳು. ಹಿಂದೆಯೇ ಆತನು, ಈಕೆ ನನ್ನ ತಂಗಿ ; ಹೆಂಡತಿಯಲ್ಲ' ಎಂದುಬಿಟ್ಟ. ತರುಣಿಯ ಮುಖದಲ್ಲಿದ್ದ ಕಿರುನಗೆಯು ಮಾಯವಾಯಿತು. ಆತನ ಕಡೆ ಮುಖ ತಿರುಗಿಸಿದಳು ; ಆತನ ಮಾತುಕತೆಗಳೇಕೊ ಒಂದು ಬಗೆಹರಿಯದ ಸಮಸ್ಯೆಯಾಗಿ ಅವಳಿಗೆ ಕಂಡಿತು. ಆದರೆ ಆಕೆಗೆ ಮುಖತೋರಿಸುವ ಧೈಶ್ಯ ಆತನಿಗಿರಲಿಲ್ಲ. ಗಿರೀಶನು ಸಿಗರೇಟು ಹಚ್ಚಿಕೊಳ್ಳುವ ಉದ್ಯಮ ದಲ್ಲಿ ಅವರಿಬ್ಬರ ಮುಖಭಾವಗಳನ್ನೂ ಕಂಡು, ತನ್ನ ಪತ್ರಿಕೆಗಳ ಕಡೆಗೆ ಗಮನಕೊಡಲು ಪ್ರಯತ್ನಿಸಿದ. ಮತ್ತೆ ಯಾರಬಾಯಿಂದಲಾಗಲಿ ಒಂದು ಮಾತೂ ಹೊರಡಲಿಲ್ಲ, ಗಿರೀಶನ ದೃಷ್ಟಿ ಪತ್ರಿಕೆಯಮೇಲಿದ್ದರೂ, ಮನಸ್ಸೆಲ್ಲೋ ಇತ್ತು. ರೈಲು ವಂದಲೂರು ಸ್ಟೇಷನ್ನಿಗೆ ಬಂದು ನಿಂತಿತು. ಗಿರೀಶನು ಸ್ವಲ್ಪ ನಡೆದಾಡಿಕೊಂಡು ಬರಬೇಕೆಂದಿಟ್ಟಿಸಿ ಗಾಡಿಯಿಂದಿಳಿದುಹೋದ. ಅವನು ತನ್ನ ' ಕಂಪಾರ್ಟ್‌ಮೆಂಟ 'ನಿಂದ ಬಹಳ ದೂರದವರೆಗೂ ಹೋಗುವಹಾಗಿರಲಿಲ್ಲ. ಆದ್ದರಿಂದ ಹತ್ತಿರಲೇ ಇಲ್ಲಿಂದಲ್ಲಿಗೆ ಓಡಾಡ ಲಾರಂಭಿಸಿದ. ಅವನು ತನ್ನ ಕಂಪಾರ್ಟ್‌ಮೆಂಟಿ 'ನ ಬಳಿ ಬಂದ ಪ್ರತಿಸಲವೂ ಅವನಿಗೆ ನಾಲ್ಕಾರುಮಾತು ಕಿವಿಗೆ ಬೀಳುತ್ತಿತ್ತು, ಇವನ ತಲೆ ಕಾಣುತ್ತಲೇ ಅವರಿಬ್ಬರ ಮಾತು ನಿಲ್ಲುತ್ತಿತ್ತು. ಒಂದುಬಾರಿ ಗಿರೀಶನು, 'ಸರಿ ! ಅವನಿಗೆ ಶಾಸ್ತಿಯಾಗ್ತಾ ಇದೆ' ಎಂದುಕೊಂಡ. ಮತ್ತೊಮ್ಮೆ, ' ಹುಂ! ಏನೋ ಸಮಾಧಾನ ಹೇಳಿದ್ದಾನೆ. ಇನ್ನು ಪರವಾಯಿಲ್ಲ. ಹೋಗಿ ಕೂಡಬಹುದು' ಎಂದು ತನ್ನ ಜಾಗಕ್ಕೆ