"ದಯವಿಟ್ಟು ನನ್ನ ಇದಕ್ಕೆಲ್ಲ ಎಳೀಬೇಡಿ, ಇನ್ನೊಬ್ಬರ ವ್ಯವಹಾರವನ್ನ ನನ್ನ ತಲೆಗೆ ಕಟ್ಟಿಕೊಳ್ಳೋ ಸ್ವಭಾವ ನನಗಿಲ್ಲ".
"ನಿಮಗೇನೂ ನಾನು ತೊಂದರೆ ಕೊಡೊಲ್ಲ. ಅವಳಿಂದ ದೂರವಾಗಬೇಕೂಂತ ಪ್ರಯತ್ನ ಪಡ್ತಿದೇನೆ. ಆದರೆ ಅವಳೆದುರಿಗೆ ಮಾತನಾಡುವುದಕ್ಕಾಗುವುದಿಲ್ಲ."
"ಏಕೆ? ನಿಮ್ಮನ್ನು ತಿಂದುಬಿಡುವಳೇನು? ನಿನ್ನ ಮದುವೆಯಾಗೋದು ನನ್ನಿಂದ ಸಾಧ್ಯವಿಲ್ಲಾಂತ ಬಾಯಿಬಿಟ್ಟು ಹೇಳಿಬಿಡಿ. ಮುಂದೆ ಕಾಲಮಾರಿಬಂದಾಗ ಅವಳ ಕೈ ಬಿಡೋದಕ್ಕಿಂತ ಈಗಲೇ ಆ ಕೆಲಸಮಾಡಿಬಿಟ್ರೆ ಆಕೆಗೂ ಕ್ಷೇಮ, ಅಲ್ವೇ."
"ಹೌದೌದು! ಅದಕ್ಕಾಗೇ ಈ ಬಾರಿ ಸಿದ್ದವಾಗಿ ಬಂದಿದ್ದೇನೆ. ಆದ್ದರಿಂದಲೇ ನಿಮ್ಮ ಸಹಾಯಬೇಡಿದ್ದು."
"ಏಕೆ? ಆಕೆ ಸಹವಾಸ ನೀವು ಮೊದಲು ಮಾಡಿದಾಗಲೇ ನಾದರೂ ನಾನು ನೆರವಾಗಿದ್ದೆನೆ?"
"…ಇ…ಇಲ್ಲ!"
"ಮತ್ತೆ ಈಗೇಕೆ ನಾನು? ನಿಮ್ಮ ತುರಿಕೆ; ನೀವೇ ತುರಿಸಿಕೊಳ್ಳಿ………"
"ಅದುಸರಿ ಸಾರ್……! ಆದರೆ As a man to man…… ನಿಮ್ಮನ್ನ 'ರಿಕ್ವೆಸ್ಟ್' ಮಾಡಿಕೊಳ್ತೇನೆ……"
"ಅದು ಮಾತ್ರ ಮಾಡಬೇಡಿ!"
"ನೀವೊಂದ್ಮಾತು ಆಕೆಗೆ………"
"ನಾನ್ಯಾವ ಮಾತೂ ಆಕೆಗೆ ಹೇಳೋಕೆ ಹೋಗೊಲ್ಲ. ನೀವುಂಟು-ಆಕೆಯುಂಟು."
"ಇಲ್ಲ ಇಲ್ಲ! ನೀವೇನೂ ಹೇಳಬೇಡಿ. ಆಕೆಗೊಂದು ಕಾಗದ ಕೊಡುತ್ತೇನೆ. ಆದನ್ನವಳ ಕೈಗೆ ಕೊಟ್ಟು ಬಿಟ್ಟರಾಯಿತು. ಅಷ್ಟೆ!"