ಪುಟ:27-Ghuntigalalli.pdf/೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
20
ಬಿ. ಎಸ್. ವೆಂಕಟರಾಮನ್
 

ಬಾಚಣಿಗೆ ಇವೆಲ್ಲವನ್ನೂ ಕೈಪೆಟ್ಟಿಗೆಗೆ ಮತ್ತೆ ಹಿಂದಿರುಗಿಸಿ, ಸ್ವಸ್ಥಚಿತ್ತಳಾಗಿ ಕುಳಿತು ಮತ್ತೆ ಕಿಟಕಿಯಿಂದ ಹೊರಗೆ ತನ್ನ ದೃಷ್ಟಿಯನ್ನು ನೆಟ್ಟಳು. ಗಿರೀಶನು ನಿರೀಕ್ಷಿಸಿದಂತೆ ಶಶಿಯು 'ಬರ್ತಿ'ನ ಕೆಳಗಿದ್ದ ದೊಡ್ಡ ಪೆಟ್ಟಿಗೆಯನ್ನು ತೆಗೆಯಲು ಹೋಗಲೇ ಇಲ್ಲ. ಇನ್ನದರ ಬದಿಗೆ ಬಿದ್ದಿದ್ದ ಕಾಗದದ ಕಡೆಗೆ ಅವಳ ಗಮನವನ್ನು ಸೆಳೆಯುವುದು ಹೇಗೆಂದು ಯೋಚಿಸಲಾರಂಭಿಸಿದನು, ಸರಿಯಾದ ಯಾವ ಉಪಾಯವೂ ಹೊಳೆಯಲಿಲ್ಲ. "ಸರಿ! ನಾನೇಕಿಷ್ಟು ಪೇಚಾಡಬೇಕು. ಅವಳ ಹಣೇಬರಹ ನನ್ನ ಕೆಲಸ ನಾನು ಮಾಡಿ, ಕೈ ತೊಳೆದು ಕೊಂಡುಬಿಡ್ತೀನಿ. ಆ ಮೇಲೆ ಎಲ್ಲಾದರೂ ಹಾಳಾಗಿ ಹೋಗಲಿ, ನನಗೇನಾಗಬೇಕಾಗಿದೆ” ಎಂದುಕೊಂಡು, "ಅದೇನೋ ಕಾಗದ ಕೆಳಗೆ ಬಿದ್ದಿದೆ ನೋಡಿ; ನಿಮ್ಮದೇ ಇರಬಹುದು. ಎಲ್ಲೊ ಗಾಳಿಗೆ ಕೆಳಗೆ ಬಿದ್ದಿರಬೇಕೂಂತ ಕಾಣುತ್ತೆ” ಎಂದೊದರಿಬಿಟ್ಟ. ಶಶಿಯು 'ಎಲ್ಲಿ?' ಎಂದು ಕೊಂಡು ಬಗ್ಗಿ 'ಬರ್ತಿ'ನ ಕೆಳಗೆ ನೋಡಿದಳು. ಪೆಟ್ಟಿಗೆಯ ಬದಿಗೆ ಬಿದ್ದಿದ್ದ ಲಕೋಟೆಯನ್ನು ನಿರಾಸಕ್ತಳಾಗಿ ಕೈಗೆತ್ತಿಕೊಂಡು ನೋಡಿದಳು. ಅದರೊಳಗೆ ಏನೋ ಕಾಗದವಿದ್ದಂತಿದ್ದರೂ ಲಕೋಟೆಯಮೇಲೆ ವಿಳಾಸವಾವುದೂ ಇರಲಿಲ್ಲವಾದ್ದರಿಂದ, ಗಿರೀಶನ ಕಡೆ ನೋಡಿ, ಇದು ಯಾರದ್ದೋ ಏನೋ ಒಂದೂ ಗೊತ್ತಾಗುವುದಿಲ್ಲ. ನಿಮ್ಮದೇ ಏನಾದರೂ ಇದ್ದೀತು ನೋಡಿ' ಎಂದು ಕೈಚಾಚಿ ಗಿರೀಶನಿಗೆ ಕೊಡಲು ಹೋದಳು, "ನನ್ನ ದಂತೂ ಅಲ್ಲಾನ್ನೋದು ಖಂಡಿತ. ನನ್ನ ಕಾಗದಗಳನ್ನ ಹಾಗೆ ನಾನು ಅಲ್ಲಿ ಇಲ್ಲಿ ಬೀಳಿಸಗೊಡೋದಿಲ್ಲ, ನಿಮ್ಮವರು ಇಲ್ಲಿಂದ ಇಳಿದು ಹೋಗೋಮುಂಚೆ ಅದು ಅವರ ಕೈಲಿತ್ತು. ಬಹುಶಃ ಅವರಿಗೆ ತಿಳೀದೆ ಅದೆಲ್ಲೋ ಅಲ್ಲಿ ಬಿದ್ದು ಹೋಗಿರಬೇಕು ಎಂದು ಗಿರೀಶನು ಉತ್ತರಕೊಟ್ಟ. ಅವನ ಮನಸ್ಸಿನಲ್ಲಿ "ನಾನಂತೂ