ಪುಟ:27-Ghuntigalalli.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೨

ಬಿ. ಎಸ್. ವೆಂಕಟರಾಮನ್

ತನ್ನ ಸರ್ವಸ್ವಕ್ಕೆ ೨೦ ರೂ.ಗಳ ಬೆಲೆ ಕಟ್ಟಿ ಕೊಟ್ಟು ಅಪಮಾನಗೊಳಿಸಿಯೂ ಹೋಗಿದ್ದಾನೆಂದು ರೋಷಗೊಂಡು ರೊಚ್ಚಿಗೆದ್ದಳು. ಕೈಯಲ್ಲಿ, ಲಕ್ಕೋಟೆಯಲ್ಲಿದ್ದ ಎರಡು ೧೦ ರೂಪಾಯಿ ನೋಟುಗಳೂ, ಕಾಗದವೂ ಹಾಗೆಯೇ ಇದನ್ನು ಕಣ್ಣಿಗೆ ಬಿತ್ತು. ಅವುಡುಗಚ್ಚಿಕೊಂಡು ಅವೆರಡನ್ನೂ ಹರಿದು ಚೂರು ಚೂರು ಮಾಡಿ ಕಿಟಕಿಯಿಂದ ಹೊರಕ್ಕೆಸೆದಳು. ಗಿರೀಶನು ತನ್ನ ಕಡೆಯೇ ನೋಡುತ್ತಿದ್ದಾನೆಂದು ಅವಳ ಮನಸ್ಸಿಗೆ ಹೊಳೆಯಿತೇನೋ ಉಕ್ಕಿ ಬರುತ್ತಿದ್ದ ದುಃಖವನ್ನಡಗಿಸಿಟ್ಟುಕೊಂಡು ಕಿಟಕಿಯ ಚೌಕಟ್ಟಿಗೆ ತಲೆಕೊಟ್ಟು ಕಣ್ಣು ಮುಚ್ಚಿದಳು.

ನೋಟುಗಳನ್ನೂ ಹರಿದೊಗೆದುದು ಗಿರೀಶನ ಕಣ್ಣಿಗೆ ಬೀಳದೆ ಹೋಗಲಿಲ್ಲ 'ನಾನು ಮಾಡಿದ ಕೆಲಸ ಒಳ್ಳೆಯದೇ ಆಯಿತು, ಇಲ್ಲದೇ ಇದ್ದಿದ್ರೆ ೫೦೦ ರೂಪಾಯಿಗಳೂ ಆ ೨೦ ರೂಪಾಯಿ ಹೋದದಾರಿಗೆ ಹೋಗಿಬಿಡುತ್ತಿತ್ತು. ಇರಲಿ; ಅಮ್ಮಾವರಿಗೆ ರೂಪಾಯಿಯ ಬೆಲೆ ಗೊತ್ತಾಗುವ ಕಾಲವೂ ಬರುತ್ತೆ' ಎಂದು ಗಿರೀಶನು ಮನಸ್ಸಿನಲ್ಲೇ ಅಂದುಕೊಂಡ. ಹೊಟ್ಟೆ ಕೆರೆಯಲಾರಂಭಿಸಿತು. ಸಂಜೆ ಅವನೇನೂ ಉಪಾಹಾರ ಸೇವಿಸಿರಲಿಲ್ಲ. ರಾಯಚೂರು ಸ್ಟೇಷನ್ನನ್ನು ತಲಪುತ್ತಲೇ ಟೀ ತರಿಸಿಕೊಳ್ಳುವುದಾಗಿ ನಿರ್ಧರಿಸಿದನು. ಗಾಡಿಯು ರಾಯಚೂರನ್ನು ಸಂಜೆ ೭-೫೭ ಘಂಟೆಗೆ ಮುಟ್ಟಿತು. ಗಿರೀಶನು ಮೊದಲೇ ನಿರ್ಧರಿಸಿದ್ದ೦ತೆ ಟೀ ತರಿಸಿಕೊಂಡನು. ಕೊನೆಗೆ ಟೀ ಒಂದೇ ಸಾಲದೆಂದು ಕೆಲವು ಇಡ್ಲಿಗಳನ್ನೂ, ಬಿಸ್ಕತ್ತನ್ನೂ ತರಿಸಿಕೊಂಡನು. ಅವೆಲ್ಲ ಒಂದು ಹಲಗೆಯ ಮೇಲೆ ಹಾಗೇ ಉಳಿದುವು, ತನ್ನೆ ದುರಿನಲ್ಲಿ ಒಂದು ವ್ಯಕ್ತಿಯು ಕೊರಗುತ್ತ ಕುಳಿತಿದ್ದಾಗ ತಾನು ನಿಶ್ಚಿಂತೆಯಿಂದ ತನ್ನ ಹೊಟ್ಟೆಯಾಡನ್ನು ನೋಡಿ ಕೊಳ್ಳಲು ಗಿರೀಶನು ಹಿಂಜರಿದನು," ಇದ್ದರೇನಂತೆ ಪ್ರಪಂಚದಲ್ಲಿ ಇಂತಹವರೆಷ್ಟೋ ಮಂದಿ ಇದ್ದಾರೆ; ಅವರ ಯೋಚನೆಯೆಲ್ಲ ನಿನಗಿದೆ