ಪುಟ:27-Ghuntigalalli.pdf/೨೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೨೭ ಘಂಟೆಗಳಲ್ಲಿ
೨೩
 

ಯೇನು? ನಿನ್ನ ಪಾಡನ್ನು ನೀನು ನೋಡಿಕೋ' ಎಂದವನ ಮನಸ್ಸು ನುಡಿದರೂ ಅವನ ಅಂತರಾತ್ಮವು ಅದನ್ನೊಪ್ಪಲಿಲ್ಲ; "ಛಿ! ಅಂತಹ ಮತಿಗೇಡಿಯಾಗಬೇಡ'ವೆಂದು ಅಂದಿತು. ರೈಲು ರಾಯಚೂರನ್ನು ೮ ಘಂಟೆ ೧೭ ನಿಮಿಷಕ್ಕೆ ಬಿಟ್ಟಿತು. ಅಲ್ಲಿವರೆಗೂ ಸುಮ್ಮನಿದ್ದವನು, ಆಗ ಎದ್ದು ಒಂದು ಬಟ್ಟಲಿನಲ್ಲಿ ಟೀ ಬಗ್ಗಿಸಿ, ಅದನ್ನು ಶಶಿಯ ಮುಂದೆ ಹಿಡಿದು, 'ಸ್ವಲ್ಪ ಟೀ ತೆಗೆದುಕೊಳ್ಳಿ" ಎಂದು ಇಂಗ್ಲೀಷಿನಲ್ಲಿ ನುಡಿದ, ಶಶಿಯ ಮನಸ್ಸೆಲ್ಲೋ ಇದ್ದುದರಿಂದ ಅವಳಿಗದು ಕೇಳಿಸಲಿಲ್ಲ. ಗಿರೀಶನು ಮತ್ತೊಮ್ಮೆ ಘಟ್ಟಿಯಾಗಿ 'ದಯವಿಟ್ಟು ಇದನ್ನು ತೆಗೆದು ಕೊಳ್ಳುತ್ತೀರಾ?' ಎಂದ. ಆಗವಳು ಕಣ್ಣು ಬಿಟ್ಟು ನೋಡಿ, 'ನೋ ! ಥ್ಯಾಂಕ್ಸ್' ಎಂದು ಮತ್ತೆ ಕಣ್ಣು ಮುಚ್ಚಿಕೊಂಡಳು.

ಗಿರೀಶನು, 'ನಿಮ್ಮಿಷ್ಟ ಹಾಗಾದರೆ' ಎಂದುಕೊಂಡು ಬುಟ್ಟಿಯಿಂದ 'ಥರ್ಮಾಸ್ ಫ್ಲಾಸ್ಕ್'ನ್ನು ತೆಗೆದು ಇದ್ದ ಬದ್ದ ಟೀಯನ್ನೆಲ್ಲ ಅದಕ್ಕೆ ಹಾಕಿ ಮುಚ್ಚಿಟ್ಟು ಕುಳಿತ. ಅವನಿಗೆ ರೇಗಿಹೋಯಿತು. ಅವನು ಅದುವರೆಗೂ ಯಾವ ಹೆಂಗಸಿಗೂ ಈ ರೀತಿ ಉಪಾಚಾರ ಮಾಡಲು ಹೋಗಿರಲಿಲ್ಲ. ಈಗ ಆರೀತಿ ತನ್ನ ತತ್ವಕ್ಕೆ ವಿರುದ್ಧವಾಗಿ ಹೋಗಿ ಅಪಮಾನಕ್ಕೀಡಾದುದಾಗಿ ಭಾವಿಸಿದನು. ಹೆಂಗಸು-ಗಿಂಗಸೆಂಬ ಗೌರವಕ್ಕೆ ಮನಸೋಲದೆ ಅದೇ ಕೋಪದಲ್ಲಿ ಸಿಗರೇಟನ್ನು ಒಂದಾಗುತ್ತಲೊಂದರಂತೆ ಎರಡು ಮೂರು ಸೇದಿಹಾಕಿ ಬಿಟ್ಟ. ಅಲ್ಲಿಗೆ ಕೋಪವಿಳಿಯಿತು. ತನ್ನ ಹುಚ್ಚಿಗೆ ತಾನೇ ನಕ್ಕು ಒಂದುಕ್ಷಣ ಹಾಗೆಯೇ ಕುಳಿತ. ತಲೆಗೇನೋ ಹೊಳೆಯಿತು. ಎದ್ದು 'ಕಂಪಾರ್ಟ್‌ಮೆಂಟ'ನ ಬಾಗಿಲುಗಳ ಮೇಲೆ ಹಾಕಲ್ಪಟ್ಟಿದ್ದ ಚಿಲಕಗಳನ್ನು ಮುಂದಕ್ಕೆ ತಳ್ಳಿ, ಬಂದು ಸ್ವಸ್ಥವಾಗಿ ಮಲಗಿಕೊಂಡು ದೀಪವಾರಿಸಿಬಿಟ್ಟು, ಶಾಲನ್ನು ಮುಸುಕುಹಾಕಿಕೊಂಡ. ಹೊಟ್ಟೆಯಲ್ಲಿ ಹಸಿವಿನ ಬೇಗೆ ಹೆಚ್ಚಾಗಿದ್ದುದರಿಂದ ನಿದ್ದೆ ಬರುವಹಾಗಿರಲಿಲ್ಲ. ಕೊನೆಗೆ ಮನಸ್ಸಿಲ್ಲದಿದ್ದರೂ ಮುಖದಮೇಲಿನ ಮುಸುಕನ್ನು ಓರೆ