ಪುಟ:27-Ghuntigalalli.pdf/೩೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೨೭ ಘ೦ಟೆಗಳಲ್ಲಿ
೨೬

"ನಿನಗೆ ಮ್ಯಾನರ್ಸ್' ಕೂಡಾ ಇಲ್ಲ"

"'ಮ್ಯಾನರ್ಸ್' ಇಲ್ಲದಿದ್ರೂ ಬುದ್ದಿ - ವಿವೇಕಗಳಾದರೂ ಇವೆ, ನಿನ್ನ ಹಾಗೆ ಮತಿಗೆಟ್ಟಿಲ್ಲ" ಎಂದುತ್ತರ ಕೊಟ್ಟ, ಶಶಿಗೆ ಕೋಪವು ಉಕ್ಕೇರಿ ದಿಕ್ಕು ತೋಚದಂತಾಗಿ, ಕೊನೆಗೆ ಕಣ್ಣಿನಲ್ಲಿ ನೀರುಕ್ಕಿತು. ಅದುವರೆಗೂ ಅಡಗಿಸಿಟ್ಟುಕೊಂಡಿದ್ದ ಅವಳ ಹೃದಯ ವೇದನೆಯು ಅಳುವಿನ ರೂಪದಲ್ಲಿ ಸಾ ರಾ ಗಿ ಹೋಗಲು ಅವಕಾಶವಾಯಿತು. ಹಾಸಿಗೆಯ ದಿಂಬಿನಲ್ಲಿ ಮುಖವನ್ನು ಮುಚ್ಚಿಟ್ಟುಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಅದನ್ನು ಕಂಡು ಗಿರೀಶನಿಗೂ ಧೈರ್ಯವುಂಟಾಯಿತು. ಒಂದು ನಿಟ್ಟುಸಿರು ಬಿಟ್ಟು, 'ದೇರ್ ಯು ಆರ್! ದಟೀಸ್ಬೆ ಟರ್,' ಮನಃಪೂರ್ತಿಯಾಗಿ ಅತ್ತು ಬಿಡು, ಅಲ್ಲಿಗೆ ಹೊರೆ ಸ್ವಲ್ಪ ಕಡಿಮೆಯಾಗತ್ತೆ” ಎಂದು ಹೋಗಿ ತನ್ನ ಜಾಗದಲ್ಲಿ ಕುಳಿತನು.

ಗಿರೀಶನು ನಾಲ್ಕು ಮಂದಿ ಪುಂಡರನ್ನು ಎದುರಿಸಬಲ್ಲಂತಹ ಕೆಚ್ಚೆದೆಯವನು. ವಾಗ್ಯುದಕ್ಕೆ ನಿಂತರೂ ಸೋಲದಂತಹ ಚುರುಕು ಬುದ್ದಿಯವನು ; ಹೆಂಗುಸರ ನಾಲಿಗೆಗೆ ಹೆದರುವಂತಹ ಭೀರುವಲ್ಲ ; ಮಾತಿಗೆ ಮಾತನ್ನು ಮನಸ್ಸಿಗೆ ಚುಚ್ಚುವಂತೆ ಆಡುವ ಸ್ವಭಾವದವನು, ಕಷ್ಟ ಪರಿಸ್ಥಿತಿಯಲ್ಲಿ ಸಿಕ್ಕಿ ಅವನ ಕಣ್ಣೆದುರಿಗೇ ಯಾರಾದರೂ ನರಳು ತಿರುವುದನ್ನು ಕಂಡು ಅವನ ಹೃದಯವು “ ಅಯ್ಯೋ ಪಾಪ ! ? ವೆಂದರೂ, ಅವನ ಮನಸ್ಸು ' ನನಗೇಕೆ ಇದರ ಗೊಡವೆ ; ಅವರವರ ಪಾಡು ಅವರಿಗೆ ಎನ್ನುವಂತಹುದು. ಸಾಧಾರಣವಾಗಿ ಅವನ ಹೃದಯ- ಮನಸ್ಸುಗಳಿಗೆ ದ್ವಂದ್ವ ಯುದ್ಧವಾದರೆ ಅವನ ಮನಸ್ಸೇ ಕೊನೆಗೆ ಜಯಭೇರಿ ಹೊಡೆದುಕೊಂಡು ಮೇಲೆದ್ದು ಬರುತ್ತಿತ್ತು. ಇಂತಹ ಶಕ್ತಿಯುತ ಪುರುಷನು ಒಬ್ಬ ಹೆಂಗುಸಿನ ಅಳುವನ್ನು ಎದುರಿಸಲಾಗದವನಾಗಿದ್ದನು. ಇದುವರೆಗೆ ಅವನ ಮೇಲೆ ಅಳುವಿನ ಅಸ್ತ್ರ- ಬ್ರಹ್ಮಾಸ್ತ್ರವನ್ನು ಯಾರೂ ಪ್ರಯೋಗಿಸಿರಲಿಲ್ಲವಾದ್ದರಿಂದ ಅವನೀಗ ನಿರುಪಾಯನಾಗಿ ಅಸಹಾಯಕನಾಗಿ ಕುಳಿತನು. ಶಶಿಗೆ ಆಗ ಏನು