ಪುಟ:27-Ghuntigalalli.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೭ ಘಂಟೆಗಳಲ್ಲಿ

ಶಶಿಯು ತಲೆ ಎತ್ತದೆಯೇ "ಸುಮ್ಮನೆ ನನಗೇಕೆ ಹಿಂಸೆ ಕೊಡುತ್ತೀರಿ ; ನನಗೆ ಬದುಕೋ ಆಸೆಯಿಲ್ಲ. ನನ್ನ ಬಿಟ್ಟು ಬಿಡಿ" ಎಂದಳು. ಗಿರೀಶನಿಗೆ ಮತ್ತೆ ರೇಗಿಹೋಯಿತು. ಟೀ ಲೋಟವನ್ನೊಂದು ಕಡೆ ಇಟ್ಟು,

“ಮಹಾತಾಯಿ ! ನೀನು ಸತ್ತರೆ ನನಗೇನಾಗಬೇಕು. ನಾನೇನೂ ನಿನಗೆ ಹಿಂಸೆ ಕೊಡುತ್ತಿಲ್ಲವಲ್ಲ. ನನ್ನ ನಾನು ಉಳಿಸಿಕೊಳ್ಳೋಕೆ ಪ್ರಯತ್ನ ಮಾಡ್ತಾ ಇದ್ದೇನೆ. ನೀನೇನಾದರೂ ಈ ಗಾಡಿಯಿಂದ ಹಾರಿಕೊಂಡು ಪ್ರಾಣಬಿಟ್ಟರೆ ನಾಳೆ ಬೊಂಬಾಯಿ ಸ್ಟೇಷನ್ನಿನಲ್ಲಿ ನಾನು ರೈಲಿನಿಂದ ಇಳಿಯೋಹೊತ್ತಿಗೆ ಸರಿಯಾಗಿ ನನಗೆ ಕೈಕೋಳಗಳು ಕಾದಿರುತ್ವೆ. ನಿನಗ್ಹೇಗೆ ಗೊತ್ತಾದೀತು ನನ್ನ ಗತಿ ಏನಾಗುತ್ತೇಂತ?” ಎಂದ.

ಶಶಿಯು ಮೆಲ್ಲನೆ ತಲೆಯೆತ್ತಿ ಅವನಕಡೆ ನೋಡಿ, “ ನನ್ನ ಗತಿ ಏನೂನ್ನೋದು ನಿಮಗ್ಹೇಗೆ ಗೊತ್ತಾಗ್ಬೇಕು. ನಾನು ಸಾಯಲೇಬೇಕು; ಸತ್ತೇ ಸಾಯ್ತನೆ” ಎಂದು ಹಲ್ಲು ಕಚ್ಚಿದಳು.

“ ನೀನು ಸಾಯೋದೊಂದೇ ಅಲ್ಲ, ಹುಟ್ಟಿದಾಗಿನಿಂದ ಕನಸ್ನಲ್ಲೂ ನಿನ್ನ ಮುಖ ಕಾಣದೇ ಇದ್ದ ನನ್ನ ಕುತ್ತಿಗೇಗೆ ಒಂದು ಉರುಲೂ ಸಿದ್ಧವಾಗಿಟ್ಟು ಸಾಯೋ ನಿರ್ಧರಾನೂ ಮಾಡಿಬಿಟ್ಟಿದ್ದೀಯಲ್ಲಾ... ಅದೇ ಆಶ್ಚರ್ಯ.”

“ ನಾನು ಸತ್ತರೆ ನಿಮ್ಮ ಕುತ್ತಿಗೇಗೆ ಯಾಕೆ ಉರುಲು ಬೀಳ ಬೇಕು ? ನಿಮಗೂ ನನಗೂ ಏನು ಸಂಬಂಧ ?”

" ಅದೇ ನನಗೀಗ ಬಂದಿರೋ ಪ್ರಾಣಸಂಕಟ!ನಿನಗೂ ನನಗೂ ಈಗ ಸಂಬಂಧವೇನೂ ಇಲ್ಲದಿದ್ರೂ, ನಾಳೆ ಬೆಳಿಗ್ಗೆ ಪೋಲೀಸಿನವರು ಒಂದು ಸಂಬಂಧಾನ ಗಂಟುಹಾಕಿಬಿಡ್ತಾರೆ. ನಿನಗೆ ಸಂಬಂಧವಿದ್ದ ಮನುಷ್ಯ ಗುಂತಕಲ್ ಸ್ಟೇಷನ್ನಿನಲ್ಲೇ ಸಾಯಂಕಾಲ ಇಳಿದುಬಿಟ್ಟು, ಈ ಗಾಡೀಲಿ ನಿನ್ನ ಜೊತೇಗೆ ನಾನು ಉಳುಕೊಂಡಿದ್ದರಿಂದ ರೈಲ್ವೆ