ವಂತಿಕೆ. ಅದು ಬಿಟ್ಟು ನಡೆಯೋದೇ ನಿಲ್ಲಿಸಿಬಿಟ್ರೆ ಅದು ಮಂಕುತನ, ಹುಚ್ಚರೂಂತಾರೆ, ಇರಬೇಕು ಇದ್ದು ಗೆಲ್ಲಬೇಕು."
" ಸರಿ! ಆಯಿತು ಇದ್ದು ಮುಂದೆ ನಾನೇನು ಮಾಡಬೇಕೂಂತ ನಿಮ್ಮಭಿಪ್ರಾಯ?"
" ಅದು ನಿನ್ನ ತಲೆಗೆ ಹತ್ತಿದ್ದು, ನನಗೇನು, ಏನುಬೇಕಾದರೂ ಮಾಡಿಕೊ. ಹಳ್ಳಕ್ಕೆ ಬಿದ್ದೋಳು ನೀನು; ಮೇಲಕ್ಕೆ ಬರೋ ದಾರಿ ನೀನೇ ಹುಡುಕಿಕೋಬೇಕು."
ದಯವಿಟ್ಟು ನನ್ನ ಮನಸ್ಸಿಗಿನ್ನಷ್ಟು ನೋವುಂಟುಮಾಡಬೇಡಿ; ನನ್ನ ಸ್ಥಿತಿ ನೋಡೀನೂ ನೀವು ಹೀಗೆ ಪದೇ ಪದೇ ಕೊರಳು ಕೊಯ್ಯುತ್ತ ಹೋಗಬೇಡಿ." ಎಂದು ಶಶಿಯು ಗದ್ಗದ ಸ್ವರದಿಂದ ನುಡಿದುದನ್ನು ಕೇಳಿ, ಗಿರೀಶನು ತಟಕ್ಕನೆ ತನ್ನ ಸಿಗರೇಟಿನ ಹೊಗೆಯ ಕಡೆಯಿಂದ ಅವಳ ಮುಖದ ಕಡೆ ದೃಷ್ಟಿ ಹೊರಳಿಸಿ " ನಾನು ನಿಜವಾದ ಮಾತುತ್ತಾನೆ ಹೇಳಿದ್ದು?" ಎಂದು ಕೇಳಿದ. ಶಶಿಯ ಅಳು ತಡೆಯಲಾರದೆ ತನ್ನ ಸೆರಗಿನಿಂದ ಮುಖ ಮುಚ್ಚಿಕೊಂಡಳು. ಗಿರೀಶನು ಮತ್ತೆ ಎದೆಗೆಟ್ಟು ಕಕ್ಕಾಬಿಕ್ಕಿಯಾದ. ಅವನ ದೃಷ್ಟಿಗೆ ಟೀ ಲೋಟಗಳು ಬಿದ್ದವು. ಅದನ್ನು ಸಂಪೂರ್ಣವಾಗಿ ಮರತೆ ಬಿಟ್ಟಿದ್ದ. ಈಗ ಮತ್ತೆ ಅದರ ಕಡೆಗೆ ಗಮನಕೊಟ್ಟ. ಟೀ ಅರ್ಧ ಮುಕ್ಕಾಲು ತಣ್ಣಗಾಗಿತ್ತು. ಮತ್ತೆ ಪ್ಲಾಸ್ಕಿನಲ್ಲಿದ್ದುವನ್ನು ಅದಕ್ಕೆ ಬೆರೆಸಿ ಸರಿಮಾಡಿಕೊಂಡು, * ಇಗೋ! ಈ ಟೀ ಕುಡಿ " ಎಂದು ಒಂದು ಬಟ್ಟಲನ್ನು ಎರಡನೆಯಬಾರಿ ಶಶಿಯ ಮುಂದೆ ಹಿಡಿವ, ಶಶಿಗೆ ಕೋಪ ಬಂತು. " ಏನು ಟೀ-ಟೀ ಟೀಂತ ನನಗೆ ಬಲವಂತ ಮಾಡ್ತೀರಿ? ನಿಮಗೆ ಬೇಕಿದ್ರೆ ನೀವು ತಕೊಳ್ಳಿ; ನನಗೆ ಬೇಡ ಎಂದಳು.
ಗಿರೀಶನು ಗಂಭೀರವಾದ, ಗಡುಸುವನಿಯಲ್ಲಿ " ತೆಗೆದುಕೋ ಎಂದವಳಕಡೆ ತೀಕ್ಷ್ಣ ದೃಷ್ಟಿ ಬೀರಿದ, ಶಶಿಯು ತಲೆಯೆತ್ತಿ ಅವನ