೨೭ ಘಂಟೆಗಳಲ್ಲಿ
೩೪
ಕಡೆ ನೋಡಿದಳು. ಅವಳ ನೋಟದಲ್ಲಿ ದೈನ್ಯತೆಯು ಮೂಡಿತ್ತು.
ಅವಳ ಆಗಿನ ಅಸಹಾಯಕತೆಯು ಮುಖಮುದ್ರೆಯಲ್ಲಿ ಸ್ಪಷ್ಟವಾಗಿ
ಎದ್ದು ಕಾಣುತ್ತ, 'ದಯವಿಟ್ಟು ಇಷ್ಟು ಕಲ್ಲು ಮನಸ್ಸಿನವರಾಗಬೇಡಿ.
ನಿಮ್ಮ ಹೃದಯದ ನುಡಿಗೂ ಸ್ವಲ್ಪ ಮನ್ನಣೆ ಕೊಡಿ' ಎಂದು
ಗಿರೀಶನನ್ನು ಪ್ರಾರ್ಥಿಸುವಂತಿತ್ತು.
ಗಿರೀಶನ ಮುಖವು ಕೊಂಚ ಕೆಂಪೇರಿತು. ಅವನ ಮನಸ್ಸು
ಕದಡಿಹೋಗಿ ಅಸ್ತವ್ಯಸ್ತವಾಯಿತು. * ಆಯಾಂ
ಸಾರಿ, ನಾನೀಗ
ನಿಮ್ಮ ವೈದ್ಯಾಂತ ಭಾವಿಸ್ಕೊಳ್ಳಿ. ವೈದ್ಯರು ಹೇಳಿದಹಾಗೆ ರೋಗಿಗಳು
ಕೇಳಬೇಕು. ಮೊದಲು ಈ ಟೀ ಕುಡೀರಿ, ಮನಸ್ಸಿಗೆ ಸ್ವಲ್ಪ ಸಮಾ
ಧಾನವಾಗಲಿ ; ಆಮೇಲೆ ಮಾತಾಡೋಣ ” ಎಂದ.
ಶಶಿಯು, “ ನಿಮಗೀಗ ಮುಖ್ಯವಾಗಿ ಟೀ ಕುಡಿಯಬೇಕೆನ್ನಿಸಿ
ದೇಂತ ಕಾಣುತ್ತೆ. ನನಗೇಕೆ ಈ ಬಲವಂತ ? ನೀವು ಕುಡಿಯ
ಬಾರದೇನು ?!” ಎಂದು ಕೇಳಿದಳು.
" ಬೆಳಿಗ್ಗೆ ನಾನೆದುರಿಗಿದ್ದಾಗ ಹೇಗೆ ನಿಮ್ಮ ಪಾಡಿಗೆ ನೀವು ಕಾಫಿ
ತಕ್ಕೊಳ್ಳೋಕೆ ಹಿಂಜರಿದಿರೋ ಹಾಗೇ ನಾನೂ ಈಗ ಹಿಂಜರೀತಿದೇನೆ”
ಎಂದುತ್ತರಕೊಟ್ಟ, ಗಿರೀಶ,
ಶಶಿಯು ಆ ದುಃಖದ ಭರದಲ್ಲೂ ಒಂದು ಕಿರುನಗೆ ಬೀರಿ,
" ನಿಮಗೆ ಹೃದಯಾನ್ನೋದೇ ಇಲ್ಲಾಂತಿದ್ದೆ ” ಎಂದು ಟೀ ಬಟ್ಟಲನ್ನು
ತೆಗೆದುಕೊಂಡಳು. ಗಿರೀಶನು ತಾನೇಕೊ ಕ್ರಮವಾಗಿ ಸೋಲು
ತಿರುವುದಾಗಿ ಭಾವಿಸಿದನು. ಅವನ ಮನಸ್ಸು ಈ ಸೋಲನ್ನು
ಪ್ರತಿಭಟಿಸಿತು. ಅವನು ಮತ್ತೆ ತನ್ನ ನಿಶ್ಚಿಂತ ಮನೋಭಾವವನ್ನು
ಸಾಧಿಸಿಕೊಳ್ಳಲು ಪ್ರಯತ್ನಿಸಿದನು.
" ಮೆಲ್ಲನೆ ನನ್ನ ಹೊಗಳಿ ಬಲೆಗೆ ಸಿಕ್ಕಿಸಿಕೊಳ್ಳೋಕೇನೂ ಪ್ರಯತ್ನಿಸಬೇಡಿ. ನಾನವಕ್ಕೆಲ್ಲ ಮೋಸಹೋಗೊಲ್ಲ.”