ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೫
ಬಿ. ಎಸ್. ವೆಂಕಟರಾಮ್


“ನಾನೇನೂ ಆ ಪ್ರಯತ್ನಾನೇ ಮಾಡಲಿಲ್ಲವಲ್ಲ, ನನ್ನ ಮನಸ್ಸಿ ಗೇನು ತೋಚಿತೋ ಅದನ್ನು ಹೇಳಿದೆ.” ಎಂದು ನಿಧಾನವಾಗಿ ಟೀ ಸೇವಿಸುತ್ತ “ಏನು ಆಮೇಲೆ ಮಾತಾಡೋಣಾಂತ ಅಂದಿದ್ರಲ್ಲಾ?” ಎಂದು ಶಶಿಯು ಕೇಳಿದಳು.

“ಏನೂ ಇಲ್ಲ. ನೀವು ಆಗಿಹೋದದ್ದನ್ನ ಕಟ್ಟಿಕೊಂಡು ಅಲ್ಲಿದ್ದೀರೇ ಹೊರ್ತು ಮುಂದೇನು ಮಾಡಬೇಕೂನ್ನೋದನ್ನ ಯೋಚಿಸ್ಲಿಲ್ಲ.”

“ಹೌದು! ಮುಂದೆ ಮಾಡೋದಾದ್ರೂ ಏನಿದೆ ಯೋಚಿಸೋಕೆ? ಇದ್ದದ್ದೊಂದೇ ದಾರಿ - ಅದರಿಂದ ನೀವೇ ತಡೆದಿರಿ.”

“ಬೊಂಬಾಯಿಯಲ್ಲಿ ನಿಮ್ಮೋರು ಯಾರಿದ್ದಾರೆ???”

“ಯಾರೂ ಇಲ್ಲ. ಆತ ತನ್ನ ಕಡೆಯೋರಿದ್ದಾರೆ; ಅಲ್ಲಿ ಹೋಗಿಳಕೊಳ್ಳೋಣಾಂತ ಹೇಳಿ ಕರೆತಂದ.”

“ಹುಂ! ಹಾಗಾದರೆ ಈಗ ಏನು ಮಾಡ್ತೀರಿ ?”

“ಬೊಂಬಾಯಿಯಲ್ಲಿ ನನ್ನ೦ಥಾವರಿಗೆ ಜಾಗ ಸಿಕ್ಕೋ ಆಶ್ರಮ ಗೀಶ್ರಮ ಯಾವುದೂ ಇಲ್ವೇ ?”

“ಆಶ್ರಮಗಳಿಗೇನು ಬೇಕಾದ ಹಾಗಿವೆ. ಕೆಲವೆಲ್ಲಾ ಹೆಸರಿಗೆ ಮಾತ್ರ ಆಶ್ರಮಗಳಾಗಿವೆ ; ಅಲ್ಲಿರೋ ಹೊಲಸು ಇನ್ನೆಲ್ಲೂ ಇಲ್ಲ.”

“ಹಾಗಾದರೆ ನಿಮಗೆ ಯಾವುದು ಒಳ್ಳೆ ಆಶ್ರಮಾಂತ ಕಂಡು ಬಂದಿದ್ಯೋ ಅಲ್ಲಿ ನನ್ನ ಕರಕೊಂಡು ಹೋಗಿ ಸೇರಿಸಿಬಿಡಿ.”

ಗಿರೀಶನು ಬೆಚ್ಚಿ ಬಿದ್ದು “ಏನೂ? ನಾನೇ? ಜನ್ಮೇಪಿ ಇಲ್ಲ; ನಾನು ನಿನ್ನನ್ನಲ್ಲಿಗೆ ಕಾರಕೊಂಡ ಹೋಗಿ ಸೇರಿಸೋಕೆ ಪ್ರಯತ್ನ ನಡೆಸಿದೆ ಅವರು ನನ್ನ ವಿಚಾರ ಏನಂಡ್ಕೊಂಡಾರು? ಆ ಮಾತು ಸುತರಾಂ ಆಗೋ ಅಂಥಾದ್ದಲ್ಲ. ನನ್ನಿಂದ ಅದಾಗೋದೇ ಇಲ್ಲ” ಎಂದ.