ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬
ಬಿ. ಎಸ್. ವೆಂಕಟರಾಮ್

“ಹೋಗಲಿ ! ದೂರದಿಂದ ಆಶ್ರಮಾನ ನನಗೆ ತೋರಿಸಿ ಹೋಗಿ.”

“ಅದಾಗಬಹುದು. ಆದರೆ ನೀನು ಆಶ್ರಮದಲ್ಲಿದ್ದಾಗ ಆತನೇ ನಾದರೂ ವಶ್ಚಾತ್ತಾಪಪಟ್ಟು ಕರಕೊಂಡೋಗೋಕೆ ಬಂದರೆ....??”

“ಯಾರೂ ಒಂದುಬಾರಿ ಸುಟ್ಟುಕೊಂಡ ಕಡೇನೆ ಇನ್ನೊಂದು ಸಲ ಸುಟ್ಟುಕೊಳ್ಳೋಲ್ಲ.”

“ಏನೋ ಒಂದ್ವೇಳೆ ಅವನು ಬಂದು ತನ್ನ ತಪ್ಪೋಪ್ಪಿಕೊಂಡು ಕ್ಷಮಾಪಣೆ ಕೇಳಿಕೊಂಡ್ರೆ ?”

“ಹೆಂಗಸು ಒಂದುಸಲ ಮಾತ್ರ ನಂಬಿ ಸೋಲುವಳು. ನಂಬಿಕೆಗೆ ದ್ರೋಹಮಾಡಿದರೆ ಆ ಅವಮಾನಾನ ಅವಳೆಂದೆಂದಿಗೂ ಮರೆಯೊಲ್ಲ. ಆಮೇಲೆ ಎಚ್ಚರಿಕೆಯಿಂದ ಇರ್ತಾಳೆ...........ನಿಮಗೆ ಮದುವೇ ಆಗಿಲ್ವೇನು ???”

‘ಆಗಿದೆ. ಅದನ್ನಡ್ಕೊಂಡು ನಿಮಗೇನು?’

“ನನಗೇನೂ ಇಲ್ಲ. ಅವರು ನಿ ಮ್ಜೊ ತೇ ಲಿ ಸಂಸಾರ ಮಾಡ್ಕೊಂಡ್ಹೋಗೋಕೆ ಅದೆಷ್ಟು ಕಷ್ಟಪಡ್ತಿದಾರೋ ಕಾಣೆ.”

“ಕಷ್ಟಾ ಏಕೆ ಪಡಬೇಕು?”

“ಆವರೂ ನಿಮ್ಹಾಗೇ ಒಬ್ಬ ಮನುಷ್ಯರೂಂತ ತಿಳ್ಕೊಳ್ಳೋ ಜಾತಿಗೆ ನೀವು ಸೇರಿದೋರಲ್ಲ. ನಿಮ್ಮ ಮನಸ್ಸು ಏನು ಹೇಳುತ್ತೆ ಅದರಂತೆ ನಡೆಯೋಹಾಗೆ ನಿಮ್ಮ ಹೃದಯಕ್ಕೆ ಕಲಿಸಿದ್ದೀರಿ. ಅದೂ ಒಂದು ಯಂತ್ರದಹಾಗೆ ಆಗಿಹೋಗಿದೆ. ಅವರು ನಿಮ್ಮನ್ನೇ ಅನುಸರಣೆ ಮಾಡಿಕೊಂಡು ಹೋಗೋಹಾಗೆ ಕಾಣುತ್ತೆ. ಅಥವಾ ಅವರು ನಿಮ್ಮ ಹತ್ತಿರಾನೆ ಇಲ್ಲೇ ಇದ್ರೂ ಇರಬಹುದು. ಆದ್ದರಿಂದ ನಿಮಗಿನ್ನೂ ಹೆಂಗಸರ ವಿಚಾರ ತಿಳೀದು.”