"ಹಾಗಂದರೆ, ನಿನ್ನ ನಾನು ಮನೇಲಿ ಬಿಟ್ಟು ನನ್ನ ಕೆಲಸದ
ಮೇಲೆ ಹೋಗಿರುವಾಗ ಅಲ್ಲಾ ಮಾಡ್ತಾ ಕೂತಿರೋದು ಏನಾದ್ರು
ಆ ಹೆಂಗಸರ ಕಣ್ಣಿಗೆ ಬಿದ್ರೆ, ಅಥವಾ ಮತ್ತೆ ನೀನೇನಾದ್ರೂ ಮತಿಗೆಟ್ಟು
ಮಹಡಿ ಗಿಹಡಿಯಿಂದ ಹಾರಿಕೊಂಡು ಪ್ರಾಣಾಬಿಟ್ರೆ ನನ್ನ ಗತಿ ಅಲ್ಲಿಗೆ
ಮುಗಿದ ಹಾಗೇಂತ; ನಿನಗೆ ಉಪಕಾರ ಮಾಡೋಕೆ ಹೋದ ತಪ್ಪಿಗೆ
ನಾನು ದಂಡ ತೆರಬೇಕಾಗಿ ಬರುತ್ತೆ, ಆದ್ರಿಂದ ನೀನು ಹಾಗೇನೂ
ಹುಚ್ಚು ಹುಚ್ಚಾಗಿ ಮಾಡೊಲ್ಲಾ, ನಗನಗುತ್ತಾ ಸಂತೋಷದಿಂದ
ಇರ್ತಿನೀಂತ ನನಗೆ ಮಾತುಕೊಡಬೇಕು.”
ಶಶಿಯು ಸ್ವಲ್ಪ ನಕ್ಕಳು. ಅವಳ ಮುಖದಲ್ಲಿ ಚಿತ್ರಿತವಾಗಿದ್ದ
ವೇದನೆಯು ಬಹುಮಟ್ಟಿಗೆ ಮಾಯವಾಯಿತು."ಆಗಲಿ ಮಾತು
ಕೊಡೇನೆ". ಜೀವನಕ್ಕಂಟಿಕೊಂಡಿರೋಕೆ ನನಗೇನಾದರೂ ಒಂದು
ಆಧಾರ ಬೇಕಾಗಿತ್ತು. ನಿನ್ನ ಕಷ್ಟ ಸುಖಗಳಿಗೆ ನಾನಿದ್ದೇನೆ,
ಭಯಪಡಬೇಡಾಂತ ಹೇಳೋರೊಬ್ಬರು ನನಗೆ ದಿಕ್ಕಿರಲಿಲ್ಲ. ನೀವು
ನನಗೆ ಆ ಭಾಗ್ಯ ಒದಗಿಸೋವಾಗ ನಿಮಗೆ ದ್ರೋಹಮಾಡಲೆ ?”
ಎಂದಳು. ಅವಳ ಕಣ್ಣಿನಲ್ಲಿ ನೀರುಕ್ಕಿ ಬರುವ ಚಿನ್ಹೆ ಕಂಡಿತು. ಅವಳ
ಮೂಗಿನ ತುದಿಯು ಕೆಂಪೇರಿತು. ಗಿರೀಶನಿಗೆ ಗಾಬರಿಯಾಗಿ
" ಅಗೋ ? ಅಗೋ !! ಇಲ್ಲೇ ಮತ್ತೆ ಆರಂಭವಾಗೋ ಹಾಗಿದೆ.
ಏನಾದರೂ ಅತ್ತುಗಿತ್ತರೆ ನಾನು ಹೇಳಿದ್ದೆಲ್ಲು ವಾಪ್ಸು ತಕೋತೇನೆ ?
ಎಂದು ಕಣ್ಣುಗಳಲ್ಲಿ ಕುಚೇಷ್ಟೆಯ ದೃಷ್ಟಿ ಬೀರುತ್ತಾ ನುಡಿದ. ಆಮೇಲೆ
ಗಡಿಯಾರ ನೋಡಿಕೊಂಡು ಬೆಪ್ಪಾಗಿ ಶಶಿಯಕಡೆ ತಿರುಗಿ, ಈ ಮೂರೂ
ಕಾಲು ಘಂಟೆ ! ದೇವೇಗತಿ, ಎಷ್ಟೊತ್ತು ಮಾತಾಡ್ತಾ ಕೂತ್ಬಿಟ್ಟಿದ್ದೀವಿ.
ಹೊಟ್ಗೆ , ಸೊಲ್ಹಾಪುರ್ ಸ್ಟೇಷನ್ನು ಗಳು ಕಳೆದುಹೋದ್ದೇ ಗೊತ್ತಾಗ
ಲಿಲ್ಲ. ಇನ್ನೇನು ಆರೇಳು ನಿಮಿಷಕ್ಕೆ ಕುರ್ದುವಾಡಿ ಸ್ಟೇಷನ್ನು ಬರುತ್ತೆ.
ಮೊದಲು ಒಂದಷ್ಟು ಏನಾದರೂ ಹೊಟ್ಟೆಗೆ ಹಾಕಿಕೊಳ್ಳೋಕೆ
ಪ್ರಯತ್ನ ಮಾಡೋಣ ಕುರ್ದುವಾಡೀಲಿ ಕಾಫಿ ಸಿಕ್ಕಬಹುದು ”
ಪುಟ:27-Ghuntigalalli.pdf/೪೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೯
ಬಿ. ಎಸ್. ವೆಂಕಟರಾಮ್
