ಕೊಂಡೇ ಮಾತಿಗಾರಂಭಿಸಿ, ಶಶಿಯ ಪೂರ್ಣ ಪರಿಚಯ ಪಡೆಯಲಿಚ್ಚಿಸಿದನು.ಶಶಿಯು ತನ್ನ ತಂದೆತಾಯಿಗಳು ಯಾರೆಂಂಬುದನ್ನೂ ತನ್ನ ಬಂಧುಗಳೆಲ್ಲೆಲ್ಲಿದ್ದಾರೆಂಬುದನ್ನೂ, ಹೇಳಿದಳು.ಮತ್ತು ತಾನು ಬಾಲವಿಧವೆಯೆಂದೂ, ಆದ್ದರಿಂದ ತನ್ನನ್ನು ತಂದೆಯು ಓದಿಗೆ ಹಾಕಿದರೆಂದೂ ಮತ್ತು ಅನಂತರ ತನಗೂ ದೇವರತ್ನನಿಗೂ ಹೇಗೆ ಸಂಬಂಧ ಬೆಳೆಯಿತೆಂದೂ, ತಾನು ಈ ಸಂಬಂಧದಿಂದ ತನ್ನವರಿಗೆ ತ್ಯಾಜ್ಯಳಾದುದನ್ನೂ ಸೂಕ್ಷ್ಮವಾಗಿ ವಿವರಿಸಿದಳು.ಅವಳು ತನ್ನ ಕತೆಯನ್ನು ಆರಂಭಿಸಿದಾಗಲಿಂದ ಗಿರೀಶನು ಹೂಗುಟ್ಟುತ್ತಿದ್ದವನು ಕ್ರಮೇಣ ನಿಲ್ಲಿಸಿ ಬಿಟ್ಟನು.ಶಶಿಯು ತನ್ನ ಕತೆ ಮುಗಿಸಿ ಆತನ ಕುತೂಹಲದಿಂದ ಎದ್ದು ದೀಪಹಚ್ಚಿ ನೋಡಿದಳು. ಗಿರೀಶನು ಸುಖವಾಗಿ ನಿದ್ರಿಸುತ್ತದ್ದನು.ಒಂದೆರಡು ನಿಮಿಷಗಳ ಕಾಲ ಅವನ ಮುಖವನ್ನೇ ನೋಡುತ್ತ ನಿಂತಳು.ಗಿರೀಶನು ಅಷ್ಟೇನೂ ನುರೂಪಿಯಲ್ಲದಿದ್ದರೂ ಮಲಗಿ ನಿದ್ರಿಸುತ್ತಿದ್ದಾಗ ಶಶಿಯು ಅವನನ್ನು ನೋಡುವುದರಲ್ಲಿ ಆದೇನೋ ಒಂದುಬಗೆಯ ಆನಂದ ಪಡೆದಳು.ಗಿರೀಶನು ಆಗವಳಿಗೆ ಸುಗುಣಸುಂದರನಾಗಿ ಕಂಡನು. ಅವನ ಮೇಲುಹೊದಿಕೆಯು ಕಾಲ ಕೆಳಗೇ ಬಿದ್ದಿತ್ತು.ಕಿರುನಗೆಯಿಂದ ಶಶಿಯು ಅವನಿಗೆ ಶಾಲನ್ನು ಹೊಚ್ಚಿ,ದೀಪವಾರಿಸಿ ತನ್ನ ವಾಡಿಗೆ ತಾನು ಮಲಗಿದಳು.
ಗಿರೀಶನಿಗೆಚ‍್ಚರವಾದಾಗ ಬೆಳಿಗ್ಗೆ ೬ ಘಂಟೆಯಾಗಿತ್ತು. ಎಚ್ಚರನಾದೊಡನೆ ಶಶಿಯು ಮಲಗಿದ್ದ ಬರ್ತಿನಕಡೆ ತಲೆ ಹೊರಳಸಿ ನೋಡಿದ. ಶಶಿಯು ಇನ್ನೂ ನಿದ್ರಿಸುತ್ತಲೇ ಇದ್ದಳು. ಒಂದು ಹತ್ತು ನಿಮಿಷ ಗಿರೀಶನು ಯೋಚಿಸುತ್ತಾ ಹಾಗೆಯೇ ಮಲಗಿದ್ದ.ಅನಂತರ ತಟ್ಟನೆದ್ದು ಹೋಗಿ ಮುಖ ತೊಳೆದುಕೊಂಡು ಬಂದು, ಬಟ್ಟೆ ಬದಲಾಯಿಸಿಕೊಂಡು, ತನ್ನ ಹೋಲ್ಡಾಲನ್ನು ಕಟ್ಟಿಟ್ಟು, ಶಶಿಯನ್ನೆಚ್ಚರಗೊಳಿಸಿದನು. ಶಶಿಯು ನಿಧಾನವಾಗೆಚ್ಚತ್ತು ಅವನ ಮುಖ