ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೨
ಬಿ.ಎಸ್.ವೆಂಕಟರಾಮ್

ನೋಡಿ ಮುಗುಳ್ನಗೆ ಬೀರಿದಳು. ಗಿರೀಶನು, "ಏಳು ಏಳು ಆರೂವರೆಯಾಯಿತು. ಇನ್ನೇನು ಪೂನಾ ಸ್ಟೇಷನ್ನು ಬರುತ್ತೆ"ಎಂದ.ಶಶಿಯು ಅವನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ನಗುಮುಖಳಾಗಿ ಅವನ ಮುಖವನ್ನೇ ನೋದುತ್ತಾ ಮಲಗಿದ್ದಳು. "ನನ್ನ ಮುಖ ನೋಡ್ತಾ ಮಲಗಿದ್ದರೆ ಏನು ಹೊಟ್ಟೆ ತುಂಬೀತು? ಬೇಗ ಎದ್ದು ಮುಖ ತೊಳೆದುಕೊಂಡು ಬಂದರೆ ಪೂನಾ ಸ್ಟೇಷನ್ನಿನಲ್ಲಿ ಬ್ರೆಡ್ಡು. ಕಾಫೀಯಿಂದಲಾದರೂ ಹೊಟ್ಟೆ ತುಂಬಿಸಿಕೋಬಹುದು" ಎಂದು ಗಿರೀಶನೂ ನಸುನಗುತ್ತು ನುಡಿದ. ಶಶಿಯು ಮೆಲ್ಲನೊಮ್ಮೆ ಆಕಳಿಸಿ ಮೈ ಮುರಿದು ಎದ್ದು ತನ್ನ ಸಲಕರಣೆಗಳನ್ನೊದಗಿಸಿಕೊಂಡು ಮುಖ ತೊಳೆದುಕೊಳ್ಳಲು ಹೋದಳು.೬-೩೫ಕ್ಕೆ ಸರಿಯಾಗಿ ರೈ ಲುಗಾಡಿಯು ಪೂನಾ ಸ್ಟೇಷನ್ನಿನಲ್ಲಿ ಹೋಗಿ ನಿಂತಿತು.

ಗಿರೀಶನು ಕೂಡಲೆ ಗಾಡಿಯಿಂದ ಇಳೀದು ಹೋಗಿ ತನ್ನ ಗೆಳೆಯನಿಗೆ ಒಂದು ತಂತಿಕೊಟ್ಟು ಹಿಂತಿರುಗುತ್ತ, ಜೊತೆಯಲ್ಲೇ ರಿಫ್ರೆಷ್ ಮೆಂಟ್ ಕಾರಿನಿಂದ ಉಪಹಾರ ತೆಗೆಸಿಕೊಡು ಬಂದ.ಶಶಿಯು ಆ ವೇಳೆಗೆ ಮುಖವನ್ನು ತೊಳೆದುಕೊಂಡಾಗಿತ್ತು.ಕನ್ನಡಿಯ ಮುಂದೆ ನಿಂತು ತಲೆಗೂದಲನ್ನು ಬಾಚಿಕೊಂಡು ಗಂಟು ಹಾಕಿಕೊಳ್ಳುತ್ತದ್ದಳು. ಆಳು ಕಾಫಿ-ಬ್ರೆಡ್ಡುಗಳ ತಟ್ಟೆಯನ್ನು ಒಳಗಿಟ್ಟು ಹೋದ.ಶಶಿಯೂ ತನ್ನ ಹಾಸಿಗೆಯನ್ನು ಸುತ್ತಿಟ್ಟು ಕುಳಿತಳು.

ಪೂನಾದಿಂದ ಆಚೆಗೆ ಒಂದರೆಡು ಸ್ಟೇಷನ್ ಕಳೆಯುವವರೆಗೆ ಗಿರೇಶನು ವಿಚಾರಪರವಶನಾಗಿ ಕುಳಿತಿದ್ದ. ಶಶಿಯು ತನ್ನ ಸುತ್ತ ಮುತ್ತಲಿದ್ದ ಘಾಟ್ ಪ್ರದೇಶದ ಸೊಬಗನ್ನು ನೋಡುತ್ತಿದ್ದಳು.ಆ ಪ್ರಕತಿ ಸೌಂದರ್ಯದ ಸವಿಗಂಡಾದಮೇಲೆ ಒಮ್ಮೆ ಗಿರೀಶನ ಕಡೆ ನೋಡಿ "ಏನು ಯೋಚಿಸುತ್ತಿದ್ದೀರಿ?" ಎಂದು ಕೇಳಿದಳು. "ಏನೂ