ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೮
ಬಿ. ಎಸ್. ವೆಂಕಟರಾಮ್

“ವಾಹ್ ! ಇಷ್ಟು ದಿನಕ್ಕೆ ನೀನು ಭಾಚೀನ ಮನೆಗೆ ಕಕ್ಕೊಂಡು ಬಂದಿದ್ದೀ. ಈ ಹೊತ್ತು ಹಬ್ಬ ಮಾಡದೇ ಆಫೀಸ್ನಲ್ಲಿ ಕೂತು ಅಂಕಿಗಳನ್ನು ಕೂಡ್ತಾ ಕೂತ್ಕಬೇಕೇನು, ಭಾಬೀ ಹೇಗಿ ದ್ದಾಳೋ ನೋಡೋಣಾಂತ ಕಾದಿದ್ದೀವಿ” ಎಂದವನ ಮಿತ್ರರು ಏಕಕಂಠದಿಂದ ನುಡಿದರು.

“ತುಮ್ ಕ್ಯಾಜಾನೋಗೆ ಭೈಯಾ !....ತುಮ್ ದೋನೋ ಕ್ಯೂ ಖಡೋ” ಎಂದು ಉಮಾದೇವಿಯು ಗಿರೀಶ ಶಶಿಯರನ್ನು ಬಾಗಿಲಿಗೆದುರಾಗಿ ನಿಲ್ಲಿಸಿ, ಅವರ ಹಣೆಗಳಿಗೆ ತಿಲಕ ಹಚ್ಚಿ ತನ್ನ ಗೆಳತಿಯರೊಂದಿಗೆ ಹಾಡು ಹೇಳಿಕೊಂಡು ಆರತಿ ಎತ್ತಿದಳು. ಶಶಿಗೆ ಇವರಾಡುತ್ತಿದ್ದ ಹಿಂದೀ ಮಾತು ಅರ್ಧವಾಯಿತು; ಆದರೆ ಆಶ್ಚರ್ಯವೂ ಆಯಿತು. ಅಲ್ಲಿ ತನ್ನೆ ಮರಿಗೆ ನೆರೆದಿದ್ದವರ ಮುಖಗಳನ್ನೆಲ್ಲ ಒಮ್ಮೆ ನೋಡಿದಳು. ಅನಂತರ ಗಿರೀಶನ ಮುಖ ನೋಡಿದಳು. ಗಿರೀಶನು ಅವಳ ಕಡೆಯೇ ನೋಡುತ್ತಿದ್ದವನು ನಗುಮುಖದಿಂದ ಉಮಾ ದೇವಿಯ ಆರತಿ ತಟ್ಟೆಯ ಕಡೆ ನೋಡಲಾರಂಭಿಸಿದ. ಶಶಿಯು ಈ ಸ್ವಾಗತಕ್ಕೆ ಕಾರಣವೇನೆಂಬುದನ್ನು ಕುರಿತು ಒಳಗೇ ಯೋಚಿಸಲಾ ರಂಭಿಸಿದಳು. ಉಮಾದೇವಿಯು ಅವರಿಬ್ಬರನ್ನೂ ಒಳಗೆ ಬರಹೇಳಿ, ಮೊದಲು ದೇವರಿಗೆ ನಮಸ್ಕಾರ ಹಾಕಬೇಕೆಂದೂ, ಶಶಿಯು ಬಾಗಿಲಲ್ಲಿದ್ದ ಅಕ್ಕಿಯ ಬಟ್ಟಲನ್ನು ಒದ್ದು ಕೊಂಡು ಬರಬೇಕೆಂದೂ ತಿಳಿಸಿದಳು. ಗಿರೀಶನು ಶಶಿಯನ್ನು ದೇವರ ಮಂದಾಸನದದೆದುರಿಗೆ ಹೆಚ್ಚು ಕಡಿಮೆ ಎಳೆದುಕೊಂಡೇ ಹೋಗಿ ನಿಲ್ಲಿಸಿದನೆನ್ನಬಹುದು. ಶಶಿಯ ಯಂತ್ರ ದಂತೆ ಗಿರೀಶನೊಡನೆ ದೇವರಿಗೆ ನಮಸ್ಕರಿಸಿದಳು. ನಮಸ್ಕರಿಸುವಾಗ ಮಂದಾಸನದೆದುರಿನಲ್ಲಿ ಬಣ್ಣ ಬಣ್ಣದ ರಂಗವಲ್ಲಿ ಹಾಕಿ ಅದರಮಧ್ಯೆ ಬಾದಾಮಿ, ಖರ್ಜೂರ ದ್ರಾಕ್ಷಿಗಳ ಕುಪ್ಪೆಯನ್ನಿಡಲಾಗಿದ್ದುದನ್ನು ಕಂಡಳು. ದೇವರ ವಿಗ್ರಹದ ಎದುರಿನಲ್ಲಿ ಕುಳಿತು ಹಿಂದೊಮ್ಮೆ ಎಂದೋ ಒಂದು ಪ್ರಾರ್ಥನೆ ಮಾಡಿಕೊಂಡಿದ್ದಳು. ಆಗ ಆರೀತಿ ಪ್ರಾರ್ಥಿಸ