೬೬
ಸ್ವಲ್ಪ ನಾಚಿಕೆಯಾಯಿತು. ರಾಜಿಯ ಕೈಯನ್ನು ಹಾಗೆಯೇ ಹಣೆ
ಗೊತ್ತಿಕೊಂಡು,
“....ಇಲ್ಲಾ ರಾಜೀ ! ಜ್ವರಾಗಿರಾ ಏನಿಲ್ಲ........ ಮನಸ್ಸಿಗೆ
ನಾದ್ರೂ ಬೇಸರವಾದಾಗ ನಿಶ್ಯಕ್ತಿಯಿಂದ ಹಣೇ ಕಾವು ಬರುತ್ತೆ ಅಷ್ಟೆ.
ನೀನು ಹಾಗೇ ಸ್ವಲ್ಪ ಹೊತ್ತು ಹಣೆಯಮೇಲೆ ನಿನ್ನ ಕೈ ಇಟ್ಟರು.
ಹಣೆಯ ಕಾವು ತಾನಾಗೇ ಇಳಿಯುತ್ತೆ....ಎಂದ,
ರಾಜಿಯು ಮೆಲ್ಲನೆ ಕೈ ಬಿಡಿಸಿಕೊಂಡು, “....ನೀವು ಸುಮ್ಮನೆ
ಮಾತಾಡಬೇಡಿ ; ಹಾಸಿಗೆ ಹಾಸ್ತೇನೆ ; ಸ್ವಸ್ಥವಾಗಿ ಮಲಗಿ, ಡಾಕ್ಟರು
ಬಂದು ನೋಡೋದು ನೋಡಿ ; ನಿಮಗೇನು ಅದ್ರಿಂದ ನಷ್ಟ....?”
ಎಂದು ಹಾಸಿಗೆಯನ್ನು ಹಾಸಿ, ಮೂರ್ತಿಯ ' ವೀಲ್ ಚೇರನ್ನು
ಹಾಸಿಗೆಯ ಮಗ್ಗುಲಿಗೆ ತಳ್ಳಿ ನಿಲ್ಲಿಸಿ, ಮೂರ್ತಿಯ ಕೈ ಹಿಡಿದು
ಮೆಲ್ಲನೆಬ್ಬಿಸಿ, ಅವನನ್ನು ಹಾಸಿಗೆಗೆ ವರ್ಗಾಯಿಸಿದಳು. ಮೂರ್ತಿಯು
ರಾಜಿಯ ಸಹಾಯದಿಂದ ತನ್ನ ಸೈನ್ಯದ ಉಡುಪನ್ನು ಬಿಚ್ಚುತ್ತಾ,
“ ಅಲ್ವೇ ಹುಚ್ಚಿ ! ನಾನೇನು ಡಾಕ್ಟರಲ್ವೆ ? ನನಗೆ ಜ್ವರವಿದೆಯೇ
ಇಲ್ವೇ ಅನ್ನೋದು ನಂಗೆ ಗೊತ್ತಾಗೋಕಿಂತ್ಲು ಮುಂಚೆ ನಿಂಗೇ
ಗೊತ್ತಾಗಿರೋಹಾಗಿದೆ ನೋಡಿದ್ರೆ ;
“ ಹೌದು; ಗೊತ್ತಾದಿಂದ್ದೇ ಹೇಳಿದ್ದು, ಡಾಕ್ಟ್ರು ಬರೋವರೂ
ಸುಮ್ಮೆ ಮಲಗಿಂತ.”
" ಇಷ್ಟೆಲ್ಲಾ ಗೊತ್ತಿರೋಳು ಔಷ್ದೀನೂ ನೀನೇ ಕೊಟ್ಬಿಡು ;
ನನ್ನ ತಾನೇ ಯಾಕೆ ಕೇಳಬೇಕು ? ಔಷಧಿ ಬೇಕೇ ಬೇಡ್ವೇ ಅಂತ ?”
“ ಡಾಕ್ಟ್ರ ಹೆಂಡ್ತಿಯಾದ್ದಕ್ಕೆ ನನ್ನ ಯೋಗ್ಯತೆಗೆ ಅಷ್ಟೂ
ಬೇಡ್ವೇ ? ಜ್ವರಾ ಇದ್ಯೋ ಇಲ್ಲೋ ಅನ್ನೋದು ನಿಮಗೆಷ್ಟು
ಗೊತ್ತಿದ್ಯೋ ನಂಗೂ ಅಷ್ಟೇ ಗೊತ್ತಿದೆ. ಸ್ವಲ್ಪ ನಿಂಬೇ ಹಣ್ಣಿನ
ಪಾನಕ ಮಾಡಿ ತಂದ್ಕೊಡ್ತೇನೆ . ಕುಡ್ದು ಸ್ವಲ್ಪ ಸುದಾರಿಸ್ಕೊಳ್ಳಿ ”
ಎಂದು ರಾಜಿಯು ಕೋಣೆಯಿಂದ ಹೊರಡಲನುವಾದಳು.
ಪುಟ:27-Ghuntigalalli.pdf/೬೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಬಿ, ಎಸ್. ವೆಂಕಟರಾಮ್
