ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ಬಿ, ಎಸ್. ವೆಂಕಟರಾಮ್

“ ಸರಿ ! ಬಂದು ಸಿಕ್ಕಾಪಟ್ಟೆ ಕೆಲಸಕ್ಕೆ ಬಾರದ್ದೆಲ್ಲಾ ಕೇಳ್ತಾ ಪ್ರಾಣಾತೆಗೀತಾ ಕೂತ್ಕೊಳ್ಳೋಕೆ .......ಸದ್ಯ ಏನೂ ಬೇಡಾ.......
" ಏಕೆ, ಏನುಬೇಕಾದ್ರೂ ಕೇಳಲೇಳು....ಯುದ್ಧದ ಸ್ವರೂಪಾ ನಾದ್ರೂ ಕೇಳಿ ತಿಳಕೊಳ್ಳಿ.... ಹೇಳೋಕೆ ನಾನೂ ಸಿದ್ಧವಾಗಿದ್ದೇನೆ.... ಅವರ ಕಳ್ಳ ಕನಿಕರ ನಂಗೇನೂ ಬೇಕಾಗಿಲ್ಲ ; ನನ್ನ ಕಣ್ಣು, ಕಾಲು ಹೋದ್ದು ನನಗೇನೂ ದುಃಖವಿಲ್ಲಾನ್ನೋದಾದ್ರೂ ಅವರ ಮಂಡೇಗೆ ಹಿಡೀಲಿ....'
"....... ಮಾತಾಡಿ ಮಾತಾಡಿ ಜ್ವರ ಹೆಚ್ಮಾಡ್ಕೊಬೇಕೂಂತ ನಿಮಗಾಸೇಂತ ಕಾಣುತ್ತೆ.... ನಿಮ್ಮಷ್ಟಕ್ಕೆ ನೀವು ಸುಮ್ಮೆ ಮಲಕ್ಕೊ ಬಾರ್ದೆ ? ....... ನಾನು ಎದ್ಧೋಗಿ ಅತ್ತೆಯವರಿಗೆಹೇಳಿ ಅವರ್ಯಾರೂ ಇಕ್ಕಡೆ ಸುಳೀದ್ದಾಗೆ ಮಾಡ್ತೇನೆ ... “ಜ್ವರ ಬಂದಿದೆ ; ತೊಂದ್ರೆ ಕೊಡ್ಬೇಡೀಂತ ಅವರು ಹೇಳಿ ರವಾನೆ ಹಾಕ್ತಾರೆ....”
".....ಇಲ್ಲಾ ರಾಜೀ ! ....ನೀನು ಯಾರ್ನೋ ತಡೀಬೇಡ.... ನನಗಿದ್ರಿಂದ ಸ್ವಲ್ಪ ಶ್ರಮಾ ಆದ್ರೂ ಪರವಾಯಿಲ್ಲ ; ಈ ಜನಗಳ ತಲೆಗೊಂದು ಸ್ವಲ್ಪ ತಿಳಿವಳಿಕೇನಾದ್ರೂ ತುಂಬಿದರೇನೆ ನನಗೆ ತೃಪ್ತಿ ಸೈನಿಕರ ಬಾಳೂ ಅಂದ್ರೆ ಅವರಿಗಿರೋ ತಾತ್ಸಾರ ತೊಲಗಬೇಕು... ಮನೇಲಿ ಎಲೇ ಮುಂದೆ ಕೂತ್ಕಂಡು ಬೋಂಡಾ ನುಂಗೋಕೂ, ಅಲ್ಲಿ ನುಗ್ಗಿ ನಿಲ್ಲೋಕೂ ಇಲ್ಲೇ ಸಾಯ್ಬೇಕೂಂತ ಬಂದೂಕು ಹಿಡಿಯೋಕೂ ವ್ಯತ್ಯಾಸ್ವಿದೆ........ಬರಲಿ ಸುಮ್ನಿರು ..” ಎಂದ.
ಆ ವೇಳೆಗೆ ಅತಿಥಿಗಳೆಲ್ಲರೂ ಊಟಮಾಡಿ ಕೈತೊಳೆದಾಗಿತ್ತು. ತಾಂಬೂಲವನ್ನು ಸವಿಯಲು ಕೂಡುವುದಕ್ಕೆ ನಡುಮನೆಯಲ್ಲಿ ಜಮಖಾನೆ ಹಾಸಿ, ಎಲ್ಲವನ್ನು ಅಣಿಯಾಗಿಟ್ಟಿದ್ದರೂ, ಅವರಲ್ಲೊಬ್ಬ ಬೃಹಸ್ಪತಿ ಅಡಿಕೆಲೆಯ ತಟ್ಟೆಯನ್ನು ಕೈಗೆತ್ತಿಕೊಂಡು 'ಬನ್ನಿ ! ಎಲ್ಲಾ ಮೂರ್ತಿಯ ಕೋಣೇಲೇ ಕೂತು ಮಾತಾಡ್ತಾ ಅಡಿಕೆಲೆ ಹಾಕ್ಕೊಂಡ್ರಾಯ್ತು ! ಯುದ್ಧ ಭೂಮಿ ಸಮಾಚಾರ ಸ್ವಾರಸ್ಯ