೭೨
ಬಂದವು. ಆದರೆ ಅಷ್ಟರಲ್ಲೇ ಅವನು ಅದನ್ನು ನುಂಗಿಕೊಂಡು...
“ ಏನು ನೀವು ಮಹಾ ಹಣ ತೆತ್ತು ಬಿಟ್ಟಿರೋದು ? ಅಲ್ಲಿ ಸೈನಿಕರು
ಹೆಜ್ಜೆ ಹೆಜ್ಜೆಗೂ ಪ್ರಾಣತೆತ್ತು ಶತ್ರುಗಳನ್ನ ಹಿಂದಕ್ಕೊಡ್ಸೋ ಇಲ್ಲಾ
ತಡ್ದೊ ನಿಲ್ಲಿಸಿದರೆ ತಾನೇ ಇಲ್ಲಿ ನೀವು ಸುಖವಾಗಿ ಚಕ್ಕಂದ ಆಡ್ತಾ,
ನಗ್ತಾ ನಲೀತಾ ಪೊಗದಸ್ತಾಗಿ ಕವಳ ಕತ್ತರಿಸೋಕಾಗೋದು ? ಹಾಗೆ
ನಾವಲ್ಲಿ ನಿಮಗೋಸ್ಕರ ಜೀವ ಕೊಡೋಕೂ ಹೇಸದೆ 'ತ್ಯಾಗ-ತ್ಯಾಗ'
ಅಂತ ಮಂತ್ರ ಜಪಿಸಬೇಕು ; ನೀವಿಲ್ಲಿ ' ಯಾರುಪಕಾರಕ್ಕೆ ಇವರೆಲ್ಲ
ಹೋಗಿ ಜೀವ ಬಲಿಕೊಡ್ತಾ ಇದ್ದಾರೆ; ಕೊಡ್ತಾ ಇಲ್ವೇನು ನಾವು
ನಮ್ಮ ಹಣಾನ ?” ಅಂತಾ ಹಿಯ್ಯಾಳಿಸ್ತಾ ಇರಬೇಕು. ನೀವು
ಕೊಟ್ಟಿರೋ ಅಥವಾ ಕೊಡ್ತೀನೀಂತಿರೊ ಪುಡಿಕಾಸು ಯುದ್ಧ ಭೂಮೀಲಿ
ಸಾಯೋ ಸೈನಿಕನ ಜೀವಕ್ಕೆ ಬೆಲೆ ಅಲ್ಲ........ ನೀವು ಊಟಾ-ಉಪ
ಚಾರಕ್ಕೆ ಬಟ್ಟೆ ಬರೆಗೆ, ಔಷಧಿ ಪಥ್ಯಕ್ಕೆ ದುಡ್ಡು ಒದಗಿಸಿಬಿಟ್ಟಾ
ಕ್ಷಣಕ್ಕೆ ಒಬ್ಬ ಮನುಷ್ಯ ತನ್ನ ಜೀವ ನಿಮಗೋಸ್ಕರ ಬಲಿಕೊಟ್ಟಿಡ
ಬೇಕಂತೇನಾದ್ರೂ ಶಾಸ್ತ್ರವೇನು ? ಅವನಿಗೇನು ಅಂಥಾ ದಾಕ್ಷಿಣ್ಯ
ಶ್ರಾದ್ಧದ ಹಂಗಿರೋದು ?
ಇಲ್ಲಪ್ಪಾ. ಮಹರಾಯ ! ನಮ್ಮನ್ನುದ್ವಾರ ಮಾಡೋಕೇ ಸೈನಿಕನಾಗೋದು ಪ್ರತಿಯೊಬ್ಬ ; ನಮ್ಮ ಉದ್ದಾ ರಕ್ಕೆ ಯುದ್ಧಗಳಾಗೋದೂನೂವೆ ; ನನ್ನುದ್ದಾರಕ್ಕೆ ಈ ಸೈನಿಕ ರೆಲ್ಲಾ ಪ್ರಾಣಾಬಿಡೋದೂನೂವೆ !. .......... ನಾವು ತಿಳಿದೋರು ; ಒಪ್ಕೊಂಡ್ವಿ ಕಣಯ್ಯ........ ಅಲ್ಲಿಗೆ ತೃಪ್ತಿಯೋ ನಿನಗೆ” ಎಂದರು, ಮೂರ್ತಿಯ ಸಮಾಸ ಬಂಧುಗಳೊಬ್ಬರು. ಮೂರ್ತಿಯು, ಕೊನೆಯ ಮಾತು ತಮ್ಮದೇ ಆಗಿರಬೇಕೆಂದು ನಂಬಿರುವ ಜನದ ಗುಂಪಿಗೆ ಸೇರಿದವನು. ಆದರೆ ಅವನೆದುರಾಳಿಗೂ ಸೋಲುವ ಮನಸ್ಸಿರಲಿಲ್ಲ. ಇಬ್ಬರಿಗೂ ಹತ್ತಿತು, ಮಾತಿಗೆ ಮಾತು. ಮೂರ್ತಿಯು ಅಷ್ಟಲ್ದೇ ಮತ್ತಿನ್ನೇನು ? ಸೈನಿಕರು ಹಿಮ್ಮೆಟ್ಟಿ, ಶತ್ರುಗಳು ಮುಂದೆ ನುಗ್ಗಿ