ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೩

ಆಕಾಂಕ್ಷೆ

ಬರೋಕೆ ಜಾಗ ಮಾಡಿಕೊಡಲಿ ಆಗ ನೋಡೋಣ, ನೀವೆಲ್ಲಾ ಎಲ್ಲಿರ್ತಿರೀಂತ ; ಈಗ ಉದ್ದುದ್ದವಾಗಿ ಮಾತಾಡ್ತಿರೋ ಮಹಾ ಪುರುಷರೆಲ್ಲ ಗಂಟು ಮೂಟೆ ಕಟ್ಕೊಂಡು ಜೀವ ಉಳಿದರೆ ಸಾಕೂಂತ ದಿಕ್ಕಾಪಾಲಾಗಿ ಓಡ್ತಿರ್ತಿರಿ ...” ಎಂದ
ಹೌದಯ್ಯಾ .... ನಾವೆಲ್ಲಾ ಬರೀ ಮಾತಿನೋರೇನಪ್ಪ.... ಅವರೆಲ್ಲಾ ಧೀರರು, ತ್ಯಾಗಿಗಳು. ಒಪ್ಕೊಳ್ಳೋಣ. ಆದರೆ ಈ ಸೈನಿಕರಿ ಗೆಲ್ಲಾ ಸಂಬಳಾ ಯಾರಪ್ಪ ಒದಗ್ಸೋರು ? ನಾವ್ತಾನೆ ? ನಾವೆಲ್ಲಾ ಇಪ್ಪತ್ತೆಂಟು ರೀತೀಲಿ ಕೊಟ್ಟ ಕಂದಾಯದ ಹಣದಿಂದ್ಧ ತಾನೇ ಆ ಸೈನಿಕರಿಗೆ ಎಲ್ಲಾನೂ ಒದಗ್ಸೋಕೆ ಹಣ ಹಂಚಿರೋದು ?

ಹೌದು........ಆದರೆ .......?!! "ಸ್ವಲ್ಪ ತಡಿ ; ನೀನೇ ಇಷ್ಟು ಹೊತ್ತೂ ಮಾತಾಡ್ಡೆ ; ನನಗೂ ನಾಲ್ಕು ಮಾತಾಡೋಕೆ ಪುರಸತ್ತು ಕೊಡು. ನಮ್ಮ ರಕ್ಷಣೆಗೆ, ನಮ್ಮ ದೇಶದ ರಕ್ಷಣೆಗೇಂತ ನಮ್ಮಿಂದ ವಸೂಲಾದ ಹಣದಿಂದ ಸಾಕಲ್ಪಟ್ಟ ಸೈನಿಕರು ನಮ್ಮ ಶತ್ರುಗಳ ಮೇಲೆ ತನ್ನ ಪರಾಕ್ರಮ ತೋರಿಸೋಕೋ ಅಥವಾ ನಮ್ಮ ಮನೆ ಹೆಣ್ಣು ಮಕ್ಕಳ ಮೇಲೆ ಅವರ ಪೌರುಷ ತೋರಿಸೋದರಲ್ಲೇ ನಮ್ಮ ಋಣ ತೀರಸ್ಬೇಕೊ?....ದಿನ ಬೆಳಗಾದ್ರೆ ಆ ರಸ್ತೇಲಿ ಸಿಪಾಯಿಗಳು ಒಬ್ಬ ಹೆಂಗಸನ್ನ ಹಿಡಕೊಂಡು; ಈ ರಸ್ತೇಲಿ ಒಬ್ಬ ಹೆಂಗಸಿನ ಮೇಲೆ ಹರಾ ಹರಿಕೆಯಾಗಿ ಕೈ ಹಾಕಿದರು; ಇನ್ನೊಂದಡೆ ಒಬ್ಬ ಹುಡುಗೀನ ಹಿಂಸೆ ಮಾಡಿದ್ರು. ಆ ಹಳ್ಳಿ ರೈತರ ತೋಟಕ್ಕೆ ನುಗ್ಗಿ ಹೊಡೆದಾಡಿದ್ರು.... ಈ ಪುಣ್ಯ ಚರಿತ್ರೆನೇಯೆ ನಮ್ಮಿಕಿವಿಗೆ ಬೀಳ್ತಿರೋದು. ದೇಶೋದ್ಧಾರಕ್ಕೆ ಹೊರಟಿರೋ ನಮ್ಮಿ ಸೈನಿಕರ ಕಥೆ ಕೇಳ್ದೆನಪ್ಪಾ....? ಈ ಸೈನಿಕರೆಲ್ಲಾ ನಮ್ಮೋರೆ, ಇವರೀ ನಲಿದಾಟಕ್ಕೆ ನಾವು ಹೊಟ್ಟೆ ಬಟ್ಟೆ ಕಟ್ಟಿ ದುಡ್ಡು ಸುರೀಬೇಕು.... ಇಷ್ಟೇ ಸಾಲದೂಂತ ಮತ್ತೆ ನಮ್ಮಿಂದಲೇ 'ವಾ‌ರ್ಫಂಡ್'ಗಂತ ನಂಜೀವ ಹಿಂಡಿ ಹಣ ಸುಲ್ಕೊಳ್ಳೋದು....! ಕೊನೆಗೆ ನಾವೇ ನಮ್ಮ ಸೈನಿಕರ ಹಿಂಸೆಗೆ ಸಿಕ್ಕಿ ಕಣ್ಣು ಕಣ್ಣು ಬಿಡಬೇಕು. ನಮ್ಮದು ತ್ಯಾಗವಲ್ಲ... ಅವರದೇ ತ್ಯಾಗ....ಬಹಳ ಚೆನ್ನಾಗಿದೆಯಯ್ಯಾ.....
10