ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಕಾಂಕ್ಷೆ

೮೭

ವಾಗಿಯೇ ಕಳೆದುಹೋಯಿತೆಂದಮೇಲೆ ಯಾರಿಗೆ ಯಾರು ಯಾವ ರೀತಿಯಲ್ಲಿ ಸಹಾಯಮಾಡಬಹುದು ? ಪೋಲೀಸಿನವರಾದಮಾತ್ರಕ್ಕೆ ಅವರೇನು ಬಹ್ಮನ ಅಪರಾವತಾರವೆ ? ಸರಿ ! ಏನಾದರೂ ಸುದ್ದಿ ಎಲ್ಲಿಂದಲಾದರೂ ಜನ ತಂದರೆ, ಅದರಮೇಲೆ ತನಿಖೆ ನಡೆಸುವ ನಿಜ ಭಕ್ತಿಯಿಂದ ತೆಪ್ಪನೆ ಕುಳಿತರು.
ಮೂರ್ತಿಯ ಮನೆಯನ್ನೆಲ್ಲಾ ಅದೇನೋ" ಒಂದು ಅವರ್ಣ ನೀಯ ವಿಚಿತ್ರ ವಾತಾವರಣ ಆವರಿಸಿಬಿಟ್ಟಿದೆ. ಮನೆಯ ಮುಂಬಾಗಿಲು ಈಗ ಸದಾ ಮುಚ್ಚಿದೆ. ಮನೆಯೊಳಗೆ ಯಾರೂ ಯಾರೊಡನೆಯೂ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಮೂರ್ತಿಯ ಮೌನವ್ರತದ ಪ್ರಭಾವ ಎಲ್ಲರಿಗೂ ತಟ್ಟಿದಂತಿದೆ.
ರಾಜಿ ಕೈ ತಪ್ಪಿ ಹೋದಂದಿನಿಂದ ಇಂದಿನವರೆಗೆ ಮೂರ್ತಿಯು ತನ್ನ ಕೋಣೆಯ ಮಂಚದಮೇಲೆ ಮರದ ತುಂಡಿನಂತೆ ಅಲುಗಾಡದೆ ಬಿದ್ದಿದ್ದಾನೆ. ಒಂದು ಅಗಳು ಅನ್ನವಾಗಲೀ, ಒಂದು ತೊಟ್ಟು ನೀರಾಗಲಿ ಅವನ ಗಂಟಲಿನಲ್ಲಿ ಇಳಿದಿಲ್ಲ. ಅವನ ಮನೋರಂಗದಲ್ಲಿ ನಾಲ್ಕು ದಿನದಿಂದ ಒಂದೇ ಒಂದು ದೃಶ್ಯ ನಿಂತುಬಿಟ್ಟಿತ್ತು. ಅದು ರಾಜಿಯ ಚಿತ್ರ ! ಕೋಪಾವೇಶಗಳಿಂದ ಕೂಡಿ ಅವನೆಡೆ ನೋಡುತ್ತ, ಮೇಲಿಂದ ಮೇಲೆ • ಹಿಂದೆ ನೀವಾಡಿದ್ದು ನೆನಪಿದೆಯೇ ? ನಿಮ್ಮ ದೃಷ್ಟಿಯಲ್ಲಿ ನಾನೀಗ ' ಹಿರೊಯಿನ್ ' ಅಲ್ಲವೇನು, ಹೇಳಿ ?' ಎಂದು ಅಣಕಿಸುತ್ತಿದ್ದಂತಿತ್ತು ರಾಜಿಯ ಆ ಚಿತ್ರ. ಸಾವನ್ನು ಬಯಸಿ ಬಯಸಿ ಅತ್ತು ಸೊರಗಿದ್ದ ಮೂರ್ತಿ; ಆದರೆ ಸಾವು ಬಯಸಿದಾಗ ಬಾರದು.
ಹೊರಗಡೆ ಅಂಗಳದಲ್ಲಿ ಅವನ ತಂದೆ ಯಾರೊಡನೆಯೋ ಮಾತನಾಡುತ್ತಿದ್ದಂತೆ ಅವನಿಗೆ ಕೇಳಿಬಂತು. 'ಕ್ಲೋಸ್ಪೇಟೆಯ ಬಳಿ ರಸ್ತೆಯ ಮಗ್ಗುಲಿಗೆ ಒಂದು ಹೆಂಗಸಿನ ಶವ ಬಿದ್ದಿದ್ದುದನ್ನು ಕಂಡುದಾಗಿ ಪೋಲೀಸರಿಗೆ ಯಾರೋ ಸುದ್ದಿ ಕೊಟ್ಟಿದ್ದರು. ಆ ಶವ ರಾಜಿಯದೇ ಅಲ್ಲವೇ ಎಂದು ಇತ್ಯರ್ಥಗೊಳಿಸುವುದಕ್ಕೆ ಮೂರ್ತಿಯ ತಂದೆ ಹೋಗ